ಪರೀಕ್ಷಾ ಗೊಂದಲ ಸರಿಪಡಿಸದಿದ್ದರೆ ಘಟಿಕೋತ್ಸವದಲ್ಲೇ ಪ್ರತಿಭಟನೆ
*ಪರೀಕ್ಷಾ ಗೊಂದಲ ಸರಿಪಡಿಸುವಂತೆ ಎಬಿವಿಪಿ ಆಗ್ರಹ *ವಿವಿ ಸಿಂಡಿಕೇಟ್ ಸಭೆಯಲ್ಲೇ ವಿದ್ಯಾರ್ಥಿಗಳಿಗ ಚರ್ಚಿಸಲು ಅವಕಾಶ
ಮಂಗಳೂರು : ಕಳೆದ ಹಲವು ದಿನಗಳಿಂದ ವಿವಿ ಪರೀಕ್ಷಾ ಗೊಂದಲದ ಸರಿಪಡಿಸುವ ಬಗ್ಗೆ ಎಬಿವಿಪಿ ಹಾಗೂ ವಿದ್ಯಾರ್ಥಿ ಸಂಘಟನೆಗಳು ಹೋರಾಟ ನಡೆಸಿದ್ದರೂ ಕ್ಯಾರೇ ಅನ್ನದ ಮಂಗಳೂರು ವಿಶ್ವವಿದ್ಯಾಲಯದ ನಡೆಯನ್ನು ಖಂಡಿಸಿ ಗುರುವಾರ ಎಬಿವಿಪಿ ಕಾರ್ಯಕರ್ತರು ವಿವಿ ಸಿಂಡಿಕೇಟ್ ಸಭೆಗೆ ಮುತ್ತಿಗೆ ಹಾಕಿದರು.
ಈ ಸಂದರ್ಭ ತಮ್ಮ ವಿದ್ಯಾರ್ಥಿ ಬೇಡಿಕೆಗಳ ಬಗ್ಗೆ ಸಿಂಡಿಕೇಟ್ ಸಭೆಯಲ್ಲೇ ಚರ್ಚಿಸುವಂತೆ ಸಿಂಕಡಿಕೇಟ್ ಸದಸ್ಯರು ಸೂಚಿಸಿದ ಕಾರಣ ವಿವಿ ಸಿಂಡಿಕೇಟ್ ಸಭೆಯಲ್ಲೇ ವಿದ್ಯಾರ್ಥಿಗಳಿಗ ಚರ್ಚಿಸಲು ಅವಕಾಶ ನೀಡಿಲಾಯಿತು. ಸುಮಾರು 14 ಬೇಡಿಕೆಗಳನ್ನು ವಿದ್ಯಾರ್ಥಿಗಳು ಮುಂದಿಟ್ಟು, ವಿವಿ ಪರೀಕ್ಷಾ ಗೊಂದಲದ ಸರಿಪಡಿಸುವಂತೆ ಆಗ್ರಹಿಸಿದರು.
ಘಟಿಕೋತ್ಸವದಲ್ಲೇ ಪ್ರತಿಭಟನೆ
2015-16ನೇ ಸಾಲಿನಲ್ಲಿ ಸಾಲಿನಲ್ಲಿ 32537 ವಿದ್ಯಾರ್ಥಿಗಳಲ್ಲಿ 27208 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇವರಿಗೆ ಘಟಿಕೋತ್ಸವ ಸಂದರ್ಣ ಪದವಿ ಪ್ರದಾನ ನೀಡಲಾಗುತ್ತದೆ. ಆದರೆ ಕಳೆದ ಬಾರಿ ಫಲಿತಾಂಶ ಗೊಮದಲದ ಪರಿಣಾಮ ಇನ್ನೂ ಅನೇಕ ವಿದ್ಯರ್ಥಿಗಳ ಫಲಿತಾಂಶ ಬಂದಿಲ್ಲ. ಈ ಕಾರಣಕ್ಕೆ 2015-16ನೇ ಸಾಲಿನ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ವಿವಿ ಕಾರಣವಾಗಿದ್ದು, ಅನೇಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಘಟಿಕೋತ್ಸವ ಪ್ರದಾನ ಸಂದರ್ಭ ಫೂರ್ಣ ಪ್ರಮಾಣದ ಫಲಿತಾಂಶ ಬಂದಿರದ ಬಗ್ಗೆ ಹೇಳಿಕೆ ನೀಡಿ ಘಟಿಕೋತ್ಸವ ಆರಂಭಿಸಬೇಕು. ಇಲ್ಲದೇ ಹೋದರೆ ಘಟಿಕೋತ್ಸವದಲ್ಲೇ ಪ್ರತಿಭಟನೆ ಮಾಡಲಾಗುವುದು ಎಂದು ವಿವಿ ಸಿಂಡಿಕೇಟ್ ಸಭೆಯಲ್ಲೇ ವಿದ್ಯಾರ್ಥಿಗಳು ಎಚ್ಚರಿಸಿದರು.
ವಿವಿ ಬೇಡಿಕೆ
ವಿವಿ ಸಿಂಡಿಕೇಟ್ ಸಭೆಯಲ್ಲೇ ವಿದ್ಯಾರ್ಥಿಗಳಿಗ ಚರ್ಚಿಸಲು ಅವಕಾಶ ನೀಡಲಾಯಿತು. ಈ ಎಲ್ಲಾ ಗೊಂದಲಕ್ಕೆ ಕೆಲವು ಮಾಧ್ಯಮಗಳು ಕಾರಣ ಎಂಬ ಅರ್ಥದಲ್ಲಿ ಕುಲಪತಿ ಬೈರಪ್ಪ ಹೇಳಿದಾಗ ಆಕ್ರೋಶಗೊಂಡ ವಿದ್ಯಾರ್ಥಿಗಳು ತಮ್ಮಲ್ಲಿರುವ ದಾಖಲೆಗಳನ್ನು ಬಹಿರಂಗಪಡಿಸಿದರು.
ವಿವಿ ವೆಬ್‍ಸೈಟ್ ಹ್ಯಾಕ್ ಪ್ರಕರಣದ ತನಿಖೆ ಏಕೆ ಮುಚ್ಚಿಡಲಾಗಿದೆ, ಇದರ ಸಮಗ್ರ ತನಿಖೆಯಗಬೇಕು
2015,2016,2017ರ ಸಾಲಿನ ಅಂಕಪಟ್ಟಿ ವಿತರಣೆ ಹೊಂದಲದ ಬಗ್ಗೆ ಸಮಗ್ರ ವಿಚಾರಣೆ ನಡೆಯಬೇಕು,
ಪ್ರಶ್ನೆ ಪತ್ರಿಕೆ ಪುನರ್ ಪರಿಶೀಲನೆ ಸಂದರ್ಭ ಹೆಚ್ಚುವರಿ ಅಂಕ ಪಡೆದ ವಿದ್ಯಙõÁರ್ಥಿಗಳಿಹೆ ಇನ್ನೂ ರೀಫಂಡ್ ಹಣ ಬಂದಿಲ್ಲ, ತನಿಖೆ ನಡೆಯಬೇಕು.
ದೋಷಪೂರಿತ ಅಂಕಪಟ್ಟಿ ಹೊಂತುರಿಗಿಸಿದರೂ, ಪೂರ್ಣ ಪ್ರಮಾಣದ ಅಂಕಪಟ್ಟಿ ವಿತರಣೆಗೆ ವಿವಿ ಕ್ರಮ ಹಿಸಿಲ್ಲ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು
ಹೀಗೆ 14 ವಿವಿದ ಬೇಟಿಕೆಗಳನ್ನು ವಿವಿ ಸಿಂಡಿಕೇಟ್ ಸಭೆಯಲ್ಲೇ ವಿದ್ಯಾರ್ಥಿಗಳಿಗ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದರಿಂದ ಮುಂದಿನ ದಿನ ವಿಶೇಷ ಸಿಂಡಿಕೇಟ್ ಸಭೆ ಕರೆದು ಪರೀಕ್ಷಾ ಗೊಂದಲ ಸರಿಪಡಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.