ಪಶ್ಚಿಮ ವಲಯ ಕರ್ತವ್ಯ ಕೂಟದಲ್ಲಿ ಉಡುಪಿ ಜಿಲ್ಲಾ ಪೋಲಿಸರಿಗೆ ಪದಕ ಸಹಿತ ಸರ್ವಾಂಗೀಣ ಪ್ರಶಸ್ತಿ
ಉಡುಪಿ: ಅಕ್ಟೋಬರ್ 23-24ರಂದು ಮುಡಿಪುವಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ನಡೆದ ಪಶ್ಚಿಮ ವಲಯ ಮಟ್ಟದ ಕರ್ತವ್ಯ ಕೂಟದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ತಂಡವು 8 ಚಿನ್ನ, 6 ಬೆಳ್ಳಿ ಹಾಗೂ 1 ಕಂಚಿನ ಪದಕ ಸಹಿತ ಸರ್ವಾಂಗೀಣ ಪ್ರಶಸ್ತಿಯನ್ನು ಪಡೆದುಕೊಂಡಿತು.
ಸ್ಪರ್ಧೆಯಲ್ಲಿ ಮಂಗಳೂರು ಕಮೀಷನರ್ ವ್ಯಾಪ್ತಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ನುರಿತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
ಉಡುಪಿ ನಗರ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ. ವಿನಾಯಕ ಬಿಲ್ಲವರವರು ಫೊರೆನ್ಸಿಕ್ ಸೈನ್ಸ್, ಫಿಂಗರ್ ಪ್ರಿಂಟ್ ಮತ್ತು ಹ್ಯಾಂಡ್ಲಿಂಗ್ – ಲಿಫ್ಟಿಂಗ್ – ಪ್ಯಾಕಿಂಗ್‌ನಲ್ಲಿ ಚಿನ್ನದ ಪದಕ ಹಾಗೂ ಕ್ರೈಂ ಸೀನ್ ಫೋಟೋಗೃಫಿಯಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿರುತ್ತಾರೆ. ಶ್ರೀಕಾಂತ್, ಪೊಲೀಸ್ ವೃತ್ತ ನಿರೀಕ್ಷಕರು, ಬ್ರಹ್ಮಾವರ ವೃತ್ತರವರು ಕ್ರಿಮಿನಲ್ ಲಾ ವಿಭಾಗದಲ್ಲಿ ಕಂಚಿನ ಪದಕ, ಗಿರೀಶ್ ಎ.ಆರ್.ಎಸ್.ಐ., ಪೊಲೀಸ್ ಫೋಟೋಗೃಫಿಯಲ್ಲಿ ಚಿನ್ನದ ಪದಕ, ಲಕ್ಷ್ಮಣ ಹೆಚ್.ಸಿ., ಪೊಲೀಸ್ ವಿಡೀಯೋಗೃಫಿಯಲ್ಲಿ ಚಿನ್ನ, ರಾಜೇಶ್, ಎ.ಹೆಚ್‌ಸಿ, ರೂಂ ಚೆಕ್‌ನಲ್ಲಿ ಚಿನ್ನ, ಹರೀಶ್ ಎಪಿಸಿ – ಎಕ್ಸಪ್ಲೋಸಿವ್ಸ್‌ನಲ್ಲಿ ಚಿನ್ನ, ನಾಗೇಶ್ ಪಿಸಿ – ಪೊಲೀಸ್ ಫೋಟೋಗೃಫಿಯಲ್ಲಿ ಬೆಳ್ಳಿ, ಗೋಕುಲ ಪಿಸಿ – ಒಬ್ಸರ್‌ವೇಷನ್ ವಿಭಾಗದಲ್ಲಿ ಬೆಳ್ಳಿ, ಸುಬ್ರಹ್ಮಣ್ಯ ಎಪಿಸಿ ವಾಹನ ತಪಾಸಣೆ ಮತ್ತು ಫ್ರಿಕ್ಷನ್ & ಎಕ್ಸೆಸ್ ಕಂಟ್ರೋಲ್ ವಿಭಾಗದಲ್ಲಿ ಬೆಳ್ಳಿ ಹಾಗೂ ಲೋಕೇಶ್ ಎಪಿಸಿ ರೂಂ. ಚೆಕ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿರುತ್ತಾರೆ.
ತಂಡದ ಉಸ್ತುವಾರಿಯನ್ನು ನಾರಾಯಣ, ಪಿ.ಎಸ್.ಐ. ಡಿಸಿಆರ್‌ಬಿರವರು ವಹಿಸಿರುತ್ತಾರೆ. ತಂಡದ ಕೋಚ್ ಆಗಿ ಪ್ರಕಾಶ್ ಡಿಸಿಆರ್‌ಬಿರವರು ಕರ್ತವ್ಯ ನಿರ್ವಹಿಸಿರುತ್ತಾರೆ. ತಂಡದ ಸಾಧನೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸಂಜೀವ ಎಂ. ಪಾಟೀಲ ಐ.ಪಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರಚಂದ್ರ ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿಯವರು ಶ್ಲಾಘಿಸಿರುತ್ತಾರೆ.