ಪಾಲಿಕೆ ಆಯುಕ್ತ ಹೇಳಿಕೆ ಗೊಂದಲ: ಸುಶೀಲ್ ನೊರೊನ್ಹ
ಆಸ್ತಿ ತೆರಿಗೆ ಬಾಕಿ ಸಂಗ್ರಹ ಕ್ರಮ ಕೈಗೊಳ್ಳಲು ಆಯುಕ್ತರು ಮುಂದಾಗಿದ್ದು ತಮ್ಮ ಅಧೀನದಲ್ಲಿರುವ ನಾಣಿಜ್ಯ ಕಟ್ಟಡ, ಪಾಲಿಕೆ ಕಟ್ಟಡ ಪಾರ್ಕಿಂಗ್ ಶುಲ್ಕ, ಜಾಹೀರಾತು ಶುಲ್ಕ ವಸೂಲಿ ಮಾಡಲು ಹಿಂದೆ ಬಿದ್ದದ್ದು ವಿಪರ್ಯಾಸ. ಒಂದು ವರ್ಷದ ಸಂಪೂರ್ಣ ಅಡಳಿತವು ಅಡಳಿತ ಪಕ್ಷಗಳ ಹಸ್ತಕ್ಷೇಪ ಇಲ್ಲದೆ ಮಹಾನಗರ ಪಾಲಿಕೆ ಕೇವಲ 41% ಅದಾಯ ವಸೂಲಿ ಅಗಿದೆ ಎಂದರೆ ಇದಕ್ಕೆ ಕಂದಾಯ ಇಲಾಖೆಯೇ ನೇರ ಹೊಣೆ. ಇನ್ನೊಂದೆಡೆ ಎಪ್ರೀಲ್ನಿಂದ ತೆರಿಗೆ ಹೆಚ್ಚಳ ಮಾಡಲು ಸಾಧ್ಯವಿದೆ ಎಂದು ಹೇಳಿಕೆ ನೀಡಿದ್ದು ಇದೀಗ 20-21 ಸಾಲಿನ ಮುಂಗಡ ತೆರಿಗೆ ಪಾವತಿಸುವಾಗ ಹೆಚ್ಚಿನ ಹಣ ಸಂಗ್ರಹ ಮಾಡುವುದು ಯಾವ ನ್ಯಾಯ? ಈಗಾಗಲೇ ನೀರಿನ ದರ ನಾಲ್ಕು ಪಟು ಹೆಚ್ಚು ಮಾಡಿದ್ದು ಹಾಗೂ ಅಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಇಬ್ಬರು ಶಾಸಕರು ಮೌನಕ್ಕೆ ಶರಣಾಗಿದ್ದು ಜನಪರ ಕಾಳಜಿ ಇಲ್ಲ ಎಂಬುದು ಎದ್ದು ತೋರುತ್ತದೆ ಅರ್ಥಿಕ ಪರಿಸ್ಥಿತಿ ಕಂಗೆಟ್ಟ ಈ ಸಂದರ್ಭದಲ್ಲಿ ಆಯುಕ್ತರು ಎಕಪಕ್ಷೀಯವಾಗಿ ದರ ಎರಿಸುವ ಬದಲು ಬಾಕಿರುವ ಹಣವನ್ನು ಸಂಗ್ರಹಿಸಿ ದರ ಎರಿಕೆ ಬಗ್ಗೆ ಮುಂದಿನ ದಿನಗಳಲ್ಲಿ ನೂತನ ಅಡಳಿತ ಮಂಡಳಿ ನಿರ್ಧಾರ ಕೈಗೊಳ್ಳಲಿ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ವಿನಂತಿಸಿದ್ದಾರೆ.