ಪುತ್ತೂರಿನ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಚಾರವೆಸಗಿದ ದುಷ್ಕರ್ಮಿಗಳನ್ನು ಶಿಕ್ಷೆಗೊಳಪಡಿಸಬೇಕೆಂದು ಎಬಿವಿಪಿ ಪ್ರತಿಭಟನೆ.
ಮಂಗಳೂರು: ಪುತ್ತೂರಿನ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಹತ್ಯಚಾರವೆಸಗಿದ ದುಷ್ಕರ್ಮಿಗಳನ್ನು ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಹಾಗೂ ಈ ಪ್ರಕರಣದಲ್ಲಿ ಭಾಗಿಯಾದವರನ್ನು ಎಬಿವಿಪಿ ಕಾರ್ಯಕರ್ತರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ಧಿ ಹರಿಬಿಡುತ್ತಿರುವವರ ವಿರುದ್ಧ ಹಾಗೂ ಡ್ರಗ್ ಮಾಫಿಯಾ ದಂಧೆಗೆ ಕಡಿವಾಣ ಹಾಕಬೇಕು ಎಂದು ಮಂಗಳೂರಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ಎಬಿವಿಪಿ ನಗರ ಕಾರ್ಯದರ್ಶಿಯಾದ ವಿಕಾಸ್ ಕಾಟಿಪಳ್ಳ ಮಾತನಾಡಿ ಆರೋಪಿಗಳು ಯಾರೂ ಕೂಡಾ ಎಬಿವಿಪಿಯ ಕಾರ್ಯಕರ್ತರಲ್ಲ ಆದರೂ ಕೂಡಾ ಈ ಪ್ರಕರಣದಲ್ಲಿ ಭಾಗಿಯಾದವರನ್ನು ಎಬಿವಿಪಿಯ ಕಾರ್ಯಕರ್ತರೆಂದು ಸುಳ್ಳು ಸುದ್ಧಿಯನ್ನು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು ಹಾಗೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ ಮಾಫಿಯಾದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಮಂಗಳೂರು ನಗರದ ಸಹ ಕಾರ್ಯದರ್ಶಿಗಳಾದ ಸಂದೇಶ್ ರೈ ಮಜಕ್ಕಾರು, ಕೀರ್ತನ್ ದಾಸ್, ಸಂಪತ್, ಸಂಕೇತ್, ಮಧುರ, ವರ್ಷಿತಾ, ಆದಿತ್ಯ, ಧೀರಜ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.