ಪೇಜಾವರ ಶ್ರೀಗಳು ಬಹಿರಂಗ ಕ್ಷಮೆ ಕೇಳಿ, ಶ್ರೀಕೃಷ್ಣ ದೇವಸ್ಥಾನ ಗೋಮೂತ್ರದಿಂದ ಶುದ್ಧಿಮಾಡಲಿ: ಶ್ರೀರಾಮ ಸೇನೆ

Spread the love

ಪೇಜಾವರ ಶ್ರೀಗಳು ಬಹಿರಂಗ ಕ್ಷಮೆ ಕೇಳಿ, ಶ್ರೀಕೃಷ್ಣ ದೇವಸ್ಥಾನ ಗೋಮೂತ್ರದಿಂದ ಶುದ್ಧಿಮಾಡಲಿ: ಶ್ರೀರಾಮ ಸೇನೆ

ಮಂಗಳೂರು: ಶ್ರೀರಾಮ ಸೇನೆ ,ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ಮಹಾಸಭಾದ ವತಿಯಿಂದ ಮಂಗಳೂರಿನ ಲಾಲ್‍ಬಾಗ್ ವೃತ್ತದ ಬಳಿ ಇಂದು ಆಂದೋಲನ ನಡೆಸಲಾಯಿತು.

ಮೊಘಲರ ಆಕ್ರಮಣದ ಕಾಲದಿಂದ ಹಿಂದೂ ಧರ್ಮದ ರಕ್ಷಣೆಯನ್ನು ಉಡುಪಿ ಮಠದ ಮಧ್ವಾಚಾರ್ಯರು ಮಾಡಿದ್ದರು. ಆದರೆ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಗಳು ಮಠದ ಆವರಣದಲ್ಲಿ ಇಪ್ತಾರ ಪಾರ್ಟಿ ಆಯೋಜಿಸಿ ಮತ್ತು ನಮಾಜ ಮಾಡಿಸಿರುವುದು ಖಂಡನೀಯವಾಗಿದೆ. ಇದರಿಂದ ಹಿಂದೂ ಸಮಾಜಕ್ಕೆ ತುಂಬಾ ನೋವಾಗಿದೆ. ಗೋಪಾಲಕ ಭಗವಾನ ಶ್ರೀಕೃಷ್ಣನ ಮಂದಿರದ ಆವರಣದಲ್ಲಿ ಗೋಭಕ್ಷಕರನ್ನು ಕರೆಸಿ ಇಪ್ತಾರ ಪಾರ್ಟಿ ಮತ್ತು ನಮಾಜದಿಂದ ಹಿಂದೂ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಈ ಘಟನೆಯಿಂದ ನೂರಾರು ವರ್ಷಗಳ ದೇವಸ್ಥಾನ ಪಾವಿತ್ರ್ಯವೇ ಭಂಗವಾಗಿದೆ. ಶ್ರೀಕೃಷ್ಣನ ದೇವಸ್ಥಾನವು ಸಮಾಜದ ಧಾರ್ಮಿಕ ಆಸ್ತಿಯಾಗಿದೆ. ಹಾಗಾಗಿ ಪೇಜಾವರ ಶ್ರೀಗಳು ಕೂಡಲೇ ಹಿಂದೂ ಸಮಾಜದ ಕ್ಷಮೆ ಕೇಳಬೇಕು ಮತ್ತು ಮಠದ ಗೌರವ ಉಳಿಸಲು ಗೋಮೂತ್ರ ಸಿಂಪಡಿಸಿ ಮಠದ ಶುದ್ಧಿ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಆಂದೋಲನದಲ್ಲಿ ಉಪಸ್ಥಿತ ಗಣ್ಯರು: ಶ್ರೀರಾಮಸೇನೆ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀ ಪ್ರಸಾದ್ ಉಜಿರೆ,ಹಿಂದೂ ಜನಜಾಗ್ರತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ,ಹಿಂದೂ ಮಹಾಸಭಾದ ರಾಜ್ಯ ವಕ್ತಾರರಾದ ಶ್ರೀ ಧರ್ಮೇಂದ್ರ ಮತ್ತಿತರರು ಉಪಸ್ಥಿತರಿದ್ದರು.


Spread the love