ಪೋಲಿಸ್ ಠಾಣೆಗಳು ಜನಸ್ನೇಹಿಯಾಗಲಿ: ರಮಾನಾಥ ರೈ

Spread the love

ಪೋಲಿಸ್ ಠಾಣೆಗಳು ಜನಸ್ನೇಹಿಯಾಗಲಿ: ರಮಾನಾಥ ರೈ
ಮಂಗಳೂರು: ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯನ್ನು ವಿಭಜಿಸಿ ನೂತನವಾಗಿ ರಚಿಸಿದ ಕಂಕನಾಡಿ ನಗರ ಪೊಲೀಸ್‌ ಠಾಣೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.

kankanadi-police-station-inuguration kankanadi-police-station-inuguration00

ಬಳಿಕ ಮಾತನಾಡಿದ ಸಚಿವ ರೈ ಅವರು ಪೋಲಿಸ್ ಠಾಣೆಗಳು ಜನಸ್ನೇಹಿಯಾಗಿರಬೇಕು. ಠಾಣೆಗಳು ವರ್ತಮಾನ, ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಬೇಕಾಗಿದೆ ಎಂದು ಹೇಳಿದರು.

ಶಾಸಕ ಜೆ.ಆರ್‌.ಲೋಬೊ ಮಾತನಾಡಿ, ಕಂಕನಾಡಿ ನಗರ ಪೊಲೀಸ್‌ ಠಾಣೆಯ ರಚನೆಗೆ ಹಿಂದಿನ ಗೃಹಸಚಿವ ಕೆ.ಜೆ.ಜಾರ್ಜ್‌ರಲ್ಲಿ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಸ್ಪಂದಿಸಿದ ಅವರು ಮಂಜೂರು ಮಾಡಿದ್ದರು. ಮಂಗಳೂರು ಕಮಿಷನರ್‌ ಚಂದ್ರಶೇಖರ್‌ ಅವರ ಶ್ರಮದಿಂದ ಹೊಸ ಠಾಣೆ ನಿರ್ಮಾಣವಾಗಿದೆ ಎಂದು ಹೇಳಿದರು.

ಕಮಿಷನರ್‌ ಚಂದ್ರಶೇಖರ್‌ ಮಾತನಾಡಿ, ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯನ್ನು ಪಿಪಿಪಿ ರೀತಿಯಲ್ಲಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಮುಖ್ಯ ಸಚೇತಕ ಐವನ್‌ ಡಿಸೋಜ, ಮಂಗಳೂರು ಉಪಪೊಲೀಸ್‌ ಆಯುಕ್ತರಾದ ಕೆ.ಎಂ ಶಾಂತರಾಜು, ಡಾ.ಸಂಜೀವ ಎಂ. ಪಾಟೀಲ ಉಪಸ್ಥಿತರಿದ್ದರು.

ಹೊಸ ಠಾಣೆ ವ್ಯಾಪ್ತಿಗೆ ಬರಲಿರುವ ಪ್ರದೇಶಗಳು ಪದವು, ಅಳಪೆ, ಮರೋಳಿ, ಕಂಕನಾಡಿ , ಜೆಪ್ಪಿನಮೊಗರು, ಬಜಾಲ್‌, ಕಣ್ಣೂರು, ಆಡಂಕುದ್ರು.


Spread the love