ಪೋಲೀಸರ ಪೂರ್ವಗ್ರಹಪೀಡಿತ ತನಿಖೆ ಖಂಡನೀಯ: ಪಾಪ್ಯುಲರ್ ಫ್ರಂಟ್
ಮಂಗಳೂರು: ಫಜೀರು ಸುದರ್ಶನ ನಗರದ ನಿವಾಸಿ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧದ ಪೋಲೀಸರ ಪೂರ್ವಗ್ರಹಪೀಡಿತ ವರ್ತನೆಯು ಖಂಡನೀಯವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಂಗಳೂರು ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ ತಿಳಿಸಿದ್ದಾರೆ.
ಕಳೆದ 6 ತಿಂಗಳ ಹಿಂದೆ ಕೊಣಾಜೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ತಿಕ್ ರಾಜ್ ಎಂಬಾತನ ಮೇಲೆ ಮಾರಣಾಂತಿಕ ದಾಳಿ ನಡೆಸಿ ಆತನನ್ನು ಹತ್ಯೆಗೈಯ್ಯಲಾಗಿತ್ತು. ಈ ಹತ್ಯೆಯು ಕೌಟುಂಬಿಕ ಕಲಹದಿಂದ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಪೋಲೀಸರು ಪೂರ್ವಗ್ರಹಪೀಡಿತರಾಗಿ ಮುಸ್ಲಿಮ್ ಯುವಕರು ಹಾಗೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿಪಡಿಸಿ ವಿಚಾರಣೆಯ ನೆಪದಲ್ಲಿ ಅಕ್ರಮ ಬಂಧನದಲ್ಲಿರಿಸಿ ಗಂಭೀರ ದೌರ್ಜನ್ಯ ಎಸಗಿದ್ದರು. ಮಾತ್ರವಲ್ಲದೆ, ಬಿಜೆಪಿ ಸಂಸದರೂ ಸೇರಿದಂತೆ ಸಂಘಪರಿವಾರದ ನಾಯಕರು ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಗೆ ಬೆಂಕಿ ಹಚ್ಚುವ ಕೋಮು ಪ್ರಚೋದನಕಾರಿ ಹೇಳಿಕೆಯನ್ನು ನೀಡಿ ಪ್ರಕ್ಷುಬ್ದ ವಾತಾವರಣವನ್ನು ಸಷ್ಟಿಸಿದ್ದರು. ಅದಷ್ಟವಶಾತ್, ಇದೀಗ ಕಾರ್ತಿಕ್ ರಾಜ್ನ ಕೊಲೆಯು ಆತನ ಸಹೋದರಿ ಮತ್ತು ಪ್ರಿಯಕರನಿಂದಲೇ ನಡೆದಿದೆ ಎಂಬ ಸತ್ಯಾಂಶ ಹೊರಬಿದ್ದಿರುವುದು ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಜಲೀಲ್ ಹತ್ಯೆ ಪ್ರಕರಣದಲ್ಲಿಯೂ ಕೂಡ ಪೋಲೀಸರು ವಿಚಾರಣೆಯ ನೆಪದಲ್ಲಿ ಪುನಃ ಮುಸ್ಲಿಮ್ ಯುವಕರನ್ನೇ ಗುರಿಯಾಗಿಸಿ ಬಂಧಿಸಿದ್ದರು. ಜೊತೆಗೆ ಕೆಲವೊಂದು ನಿಗೂಢ ಬೆಳವಣಿಗೆಗಳ ಮೂಲಕ ಈ ಪ್ರಕರಣವನ್ನು ಮರೆಮಾಚುವ ಪ್ರಯತ್ನವೂ ನಡೆದಿತ್ತು. ಆದರೆ ಕರೋಪಾಡಿಯ ಸಾರ್ವಜನಿಕರ ತೀವ್ರ ಪ್ರತಿಭಟನೆಯ ಮರುದಿನವೇ ಜಲೀಲ್ ಹತ್ಯೆಗೆ ಸಂಬಂಧಿಸಿದಂತೆ ಸಂಘಪರಿವಾರದ ಕಾರ್ಯಕತರು ಬಂಧನವಾಗಿದ್ದಾರೆ.
ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸಷ್ಟಿಸಿ ರಾಜಕೀಯ ಲಾಭ ಪಡೆಯುವ ಸಂಘಪರಿವಾರ ಒಂದೆಡೆಯಾದರೆ, ಇನ್ನೊಂದೆಡೆ ಮುಸ್ಲಿಮ್ ಸಮುದಾಯದ ಬಗ್ಗೆ ಪೋಲೀಸರ ಪೂರ್ವಗ್ರಹ ಎಂದಿನಂತೆ ಮುಂದುವರಿದಿದೆ. ಇವೆಲ್ಲದರ ವಿಚಾರಗಳ ಕುರಿತು ಸಾರ್ವಜನಿಕರು ಅತೀವ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಆದ್ದರಿಂದ ಪೋಲೀಸರು ಮುಸ್ಲಿಮ್ ಸಮುದಾಯದ ಯುವಕರನ್ನು ವಿನಾ ಕಾರಣ ಗುರಿಪಡಿಸುವುದನ್ನು ಬಿಟ್ಟು, ನಿಷ್ಪಕ್ಷಪಾತ ತನಿಖೆಗೆ ಮುಂದಾಗಬೇಕು ಮತ್ತು ಅಶಾಂತಿಯ ವಾತಾವರಣ ಸಷ್ಟಿಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸಿದ್ದಾರೆ.
ಪೋಲೀಸರ ಪೂರ್ವಗ್ರಹಪೀಡಿತ ತನಿಖೆ ಖಂಡನೀಯ: ಪಾಪ್ಯುಲರ್ ಫ್ರಂಟ್
Spread the love
Spread the love