‘ಪೋಸ್ಟ್ ಕಾರ್ಡ್’ಜಾಲತಾಣದ ಸಂಪಾದಕ ವಿಕ್ರಮ್ ಹೆಗ್ಡೆ ಬಿಡುಗಡೆಗೆ ಕಾರ್ಣಿಕ್ ಆಗ್ರಹ
ಮಂಗಳೂರು: ತನ್ನ ಮೊನಚು ಬರಹಗಳಿಂದ ಸಮಾಜವನ್ನು ಜಾಗೃತಗೊಳಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ‘ಪೋಸ್ಟ್ ಕಾರ್ಡ್’ ಜಾಲತಾಣದ ಮೂಲಕ ಪ್ರಸಿದ್ಧಿಗಳಿಸಿದ ಮೂಲತಃ ಮೂಡಬಿದರೆಯ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಕ್ಷುಲ್ಲಕ ಕಾರಣಕ್ಕಾಗಿ ಬಂಧಿಸಿದ್ದು ಕೂಡಲೇ ಬಿಡುಗಡೆ ಮಾಡುವಂತೆ ವಿಧಾನಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.
ಸೋಲಿನ ಭೀತಿಯಿಂದ ಹತಾಶರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತ್ತೀಚಿನ ದಿನಗಳಲ್ಲಿ ತನ್ನ ಕೃತ್ಯಗಳಿಂದ ಬೇಜಾವಬ್ದಾರಿ ಗೃಹಮಂತ್ರಿ ಎಂದು ಕರೆಸಿಕೊಳ್ಳುತ್ತಿರುವ ರಾಮಲಿಂಗ ರೆಡ್ಡಿಯವರು ಸೇರಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಮೊನಚು ಬರಹಗಳಿಂದ ಸಮಾಜವನ್ನು ಜಾಗೃತಗೊಳಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ‘ಪೋಸ್ಟ್ ಕಾರ್ಡ್’ ಜಾಲತಾಣದ ಮೂಲಕ ಪ್ರಸಿದ್ಧಿಗಳಿಸಿದ ಮೂಲತಃ ಮೂಡಬಿದರೆಯ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಕ್ಷುಲ್ಲಕ ಕಾರಣಕ್ಕಾಗಿ ಬಂಧಿಸಿರುವುದು ಸಿದ್ದು ಸರ್ಕಾರವು ದರ್ಪ ಹಾಗೂ ಅಹಂಕಾರದಿಂದ ಸರ್ಕಾರಿ ವ್ಯವಸ್ಥೆಯನ್ನು ದುರುಪಯೋಗ ಗೊಳಿಸುತ್ತಿರುವುದಕ್ಕೆ ಒಂದು ಸ್ಪಷ್ಟ ನಿದರ್ಶನ.
ಸಾಮಾಜಿಕ ಜಾಲತಾಣದಲ್ಲಿಬೇರೆಯಾರೊ ಬರೆದಿರುವ ಪೋಸ್ಟ್ ಒಂದನ್ನು ಹಾಕಿದ್ದು, ಸ್ವಲ ಸಮಯದ ನಂತರ ಅದನ್ನು ತೆಗೆದಿದ್ದರೂ ಆ ಪೋಸ್ಟನ್ನು ನೆಪವಾಗಿಟ್ಟುಕೊಂಡು ಬುದ್ಧಿಹೀನ ಸಲಹೆಗಾರರ ಮಾತನ್ನು ಕೇಳಿ ಮಹೇಶ್ ವಿಕ್ರಮ್ ಹೆಗ್ಡೆಯವರ ಅಭಿವ್ಯಕ್ತಿ ಸ್ವಾತಂತ್ಯವನ್ನು ಹರಣಮಾಡಿ ಕಾನೂನು ದುರುಪಯೋಗಿಸಿಕೊಂಡು ಬಂಧಿಸಿರುವುದು ಹಾಗೂ ಕಳೆದ 5 ದಿನಗಳಿಂದ ಜಾಮೀನು ಪಡೆಯುವಲ್ಲಿ ತೊಂದರೆ ನೀಡುತ್ತಿರುವುದು ಸಿದ್ದು ಸರ್ಕಾರ ಚುನಾವಣ ನೀತಿ ಸಂಹಿತೆ ಘೋಷಣೆಯಾದ ಬಳಿಕವು ಪೆÇಲೀಸ್ ಇಲಾಖೆಯನ್ನು ಆಕ್ರಮವಾಗಿ ಬಳಸುತ್ತಿರುವುದು ಹಾಗೂ ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕಾಂಗ್ರೇಸ್ ಪಕ್ಷದ ಪ್ರಮುಖರ ಕೈಗೊಂಬೆಯಂತೆ ವರ್ತಿಸುತ್ತಿರುವುದು ಅತ್ಯಂತ ಖಂಡನೀಯ. ನಿಕ್ಷಪಕ್ಷಪಾತವಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೋಲೀಸ್ ಇಲಾಖೆಯ ಅಧಿಕಾರಿಗಳೆ ಒತ್ತಡಕ್ಕೆ ಒಳಗಾಗಿ ಕಾನೂನಿನ ದುರುಪಯೋಗ ಮಾಡುತ್ತಿರುವುದು ಅವರ ನಿರ್ಲಜ್ಜತನಕ್ಕೆ ಸಾಕ್ಷಿಯಾಗಿದೆ.
ಮುಂಬರುವ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಮಾಡುವ ಕಾಂಗ್ರೇಸ್ನ ಈ ದುಷ್ಕೃತ್ಯಗಳು ಕಾಂಗ್ರೇಸ್ಗೆ ಮಾರಾಕವಾಗಿ ಪರಿಣಮಿಸಲಿದ್ದು ಬದಲಾದ ಪರಿಸ್ಥಿತಿಯಲ್ಲಿ ಈ ರೀತಿಯ ವರ್ತನೆಗಳನ್ನು ಜನತೆ ಕ್ಷಮಿಸುವುದಿಲ್ಲ ಎನ್ನುವ ವಿಶ್ವಾಸದೊಂದಿಗೆ ಈ ಕೊಡಲೆ ವಿನ ಕಾರಣ ಬಂಧನವಾಗಿರುವ ಮಹೇಶ್ ವಿಕ್ರಮ್ ಹೆಗ್ಡೆಯವರನ್ನ ಬಿಡುಗಡೆ ಮಾಡುವಂತೆ ನಾಗರಿಕ ಸಮಾಜದ ಪರವಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ.