ಪ್ರಚೋದನಾಕಾರಿ ಹೇಳಿಕೆ ನೀಡಿದ ಶೆಣವರ ವಿರುದ್ದ ಕ್ರಮಕ್ಕೆ ದಕ್ಷಿಣ ಕನ್ನಡ ಯುವ ಜೆಡಿಎಸ್ ಆಗ್ರಹ
ಮಂಗಳೂರು: ದಕ್ಷಿಣ ಕನ್ನಡ ಯುವ ಜನತಾ ದಳದ ವತಿಯಿಂದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೆಣವರವರ ಕೋಮು ಪ್ರಚೋದನಾಕಾರಿ ಭಾಷಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮತ್ತು ಮಂಗಳೂರು ಪೋಲೀಸ್ ಆಯುಕ್ತರಿಗೆ ದಕ್ಷಿಣ ಕನ್ನಡ ಯುವ ಜನತಾದಳ ಅಧ್ಯಕರಾದ ಅಕ್ಷಿತ್ ಸುವರ್ಣ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಯುವ ಜನತಾದಳ ಅಧ್ಯಕರಾದ ಅಕ್ಷಿತ್ ಸುವರ್ಣ ಕಾರ್ಯಕ್ರಮವೊಂದರಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಜಗದೀಶ್ ಶೇಣವ ಅವರು ಅಮಾಯಕ ದೀಪಕ್ ರಾವ್ ಅವರ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆ ನಡೆದಿದೆ ಎಂದು ಹೇಳಿಕೆ ನೀಡಿದ್ದು ಇದನ್ನು ಜಿಲ್ಲಾ ಯುವ ಜನತಾ ದಳ ತೀವೃವಾಗಿ ಖಂಡಿಸುತ್ತದೆ. ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು, ಜಗದೀಶ್ ಶೇಣವ ಅವರಿಗೆ ಇಂತಹ ಪ್ರಚೋದನಾ ಕಾರಿ ಹೇಳಿಕೆ ನೀಡಬೇಕು ಅನ್ನುವ ಆಸೆ ಇದ್ದಲ್ಲಿ ಅವರ ಮನೆಯಲ್ಲಿ ಕುಳಿತು ಮನೆಯವರಿಗೆ ನೀಡಲಿ ಅದರ ಬದಲು ಸಾರ್ವಜನಿಕವಾಗಿ ಬಂದು ಇಂತಹ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಲಿ. ಇಂತಹ ಹೇಳಿಕಯಿಂದಾಗಿ ಅನೇಕ ಅಮಾಯಕ ಯುವಕರು ಬಲಿಯಾಗಿದ್ದಾರೆ ಇನ್ನೂ ಮುಂದಾದರೂ ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ಅಮಾಯಕ ಯುವಕರನ್ನು ರಕ್ಷಿಸುವ ಕೆಲಸ ಮಾಡಲಿ. ನಮ್ಮ ಜಿಲ್ಲೆಯ ಯುವಕರಿಗೆ ಜಿಲ್ಲೆಯಲ್ಲಿ ಶಾಂತಿ ನೆಮ್ಮದಿಯಿಂದ ಬದುಕಲು ಬಿಡಿ ನಿಮ್ಮ ಕೋಮುಗಲಭೆ, ಪ್ರಚೋದನಾಕಾರಿ ಭಾಷಣಗಳ ಅಗತ್ಯ ನಮಗಿಲ್ಲ. ಇಂದು ಕೋಮುಗಲಭೆಗೆ ಬಲಿಯಾದ ಹಲವಾರು ಕುಟುಂಬಗಳಿದ್ದು ಅವರ ದುಃಖವನ್ನು ಒರೆಸುವ ಕೆಲಸ ಮಾಡಿ ಎಂದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಫೈಝಲ್ ರಹಮಾನ್, ಕಾರ್ಯದರ್ಶಿ ಭರತ್ ಜಿ ಹೆಗ್ಡೆ, ಮುಹಮ್ಮದ್ ಫೈಝಲ್, ಸುರತ್ಕಲ್ ಬ್ಲಾಕ್ ಅಧ್ಯಕ್ಷರು ರತೀಶ್ ಕರ್ಕೇರ ಮತ್ತು ಹಿತೇಶ್ ರೈ ಮತ್ತು ಸಯ್ಯದ್ ಇಸ್ಮಾಯಿಲ್ ಉಪಸ್ಥಿತರಿದ್ದರು.