ಪ್ರತಿಷ್ಠಿತ “ಶಾರ್ಜಾ ಅವಾರ್ಡ್ ಫಾರ್ ಎಜುಕಎಶನಲ್ ಎಕ್ಸಲೆನ್ಸ್” – ಪುರಸ್ಕೃತ ಬಹುಮಖ ಪ್ರತಿಭೆಯ ಕು| ಯಾಯಿನ್ ಕಿರಣ್ ರೈ
ಯು.ಎ.ಇ.ಯ ಅಬುಧಾಬಿಯ ಮುಸಾಫಾದಲ್ಲಿರುವ ಬ್ರೈಟ್ ರೈಡರ್ಸ್ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಕು| ಯಾಯಿನ್ ಕಿರಣ್ ರೈ 2017-18ನೇ ಸಾಲಿನ “ಶಾರ್ಜಾ ಅವಾರ್ಡ್ ಫಾರ್ ಎಜುಕಎಶನಲ್ ಎಕ್ಸಲೆನ್ಸ್” ಪ್ರಶಸ್ತಿ ಪ್ರತಿಷ್ಠಿತ ವರ್ಣರಂಜಿತ ಸಮಾರಂಭದಲ್ಲಿ ಪಡೆದುಕೊಂಡಿದ್ದಾನೆ. ಸಮಾರಂಭ ಶಾರ್ಜಾ ಎಜುಕೇಶನ್ ಕೌನ್ಸಿಲ್ ಆಶ್ರಯದಲ್ಲಿ 2018 ಮೇ 3ನೇ ತಾರೀಕು ಗುರುವಾರ ಬೆಳಿಗ್ಗೆ 10 ಗಂಟೆಗೆ ಶಾರ್ಜಾ ಯೂನಿವರ್ಸಿಟಿ ಸಿಟಿ ಹಾಲ್ ನಲ್ಲಿ ಅತ್ಯುನ್ನತ ಮಟ್ಟದಲ್ಲಿ ಆಯೋಜಿಸಲಾಗಿತ್ತು.
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಜನೆಯೊಂದಿಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಅಪ್ರತಿಮ ಸಾಧನೆ ಹಾಗೂ ವಿದ್ಯಾಕ್ಷೇತ್ರದಲ್ಲಿ ಹೊಸಕಲ್ಪನೆಯ ಅವಿಸ್ಕಾರವನ್ನು ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಿನಿಷ್ಟ್ರಿ ಆಫ್ ಎಜುಕೇಶನ್ ಯು.ಎ.ಇ. ಗುರುತ್ತಿಸಿ 1998 ರಿಂದ ಪ್ರಾರಂಭಿಸಲಾದ ” ಹಮ್ದಾನ್ ಬಿನ್ ರಾಶೀದ್ ಅಲ್ ಮಕ್ತೂಮ್ ಪ್ರಶಸ್ತಿಯನ್ನು” ನೀಡುತ್ತಾ ಬರಲಾಗುತ್ತಿದೆ. 2016-17ನೇ ಸಾಲಿನ “ಶೇಖ್ ಹಮ್ದಾನ್ ಪ್ರಶಸ್ತಿ” ಯನ್ನು ಡೆಪ್ಯೂಟಿ ರೂಲರ್ ಆಫ್ ದುಬಾಯಿ ಗೌ| ಶೇಖ್ ಹಮ್ದಾನ್ ಬಿನ್ ರಾಶೀದ್ ಅಲ್ ಮಕ್ತೂಮ್ ಇವರಿಂದ ದುಬಾಯಿಯಲ್ಲಿ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ಪ್ರತಿಷ್ಠಿತ ವರ್ಣರಂಜಿತ ಸಮಾರಂಭದಲ್ಲಿ ಕು| ಯಾಯಿನ್ ಕಿರಣ್ ರೈ ಪ್ರಶಸ್ತಿಯನ್ನು 2017ರಲ್ಲಿ ಪಡೆದುಕೊಂಡಿದ್ದನು.
ಡಾ. ಬಿ. ಆರ್. ಶೆಟ್ಟಿಯವರ ಒಡೆತನದಲ್ಲಿರುವ ಬ್ರೈಟ್ ರೈಡರ್ಸ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಯಾಯಿನ್ ಕಿರಣ್ ರೈ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಈ ಬಾರಿ ದುಬಾಯಿ ಜೆ. ಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ಸಭಾಂಗಣದಲ್ಲಿ ನಡೆದ ಯು.ಎ.ಇ. ಬಂಟ್ಸ್ 44ನೇ ಸ್ನೇಹಮಿಲನದಲ್ಲಿ ನೀಡಲಾಗುವ 2018ನೇ ಸಾಲಿನ “ಪ್ರತಿಭಾ ಪುರಸ್ಕಾರ” ವನ್ನು ಮಹಾಪೋಷಕರಾದ ಡಾ| ಬಿ. ಆರ್. ಶೆಟ್ಟಿಯವರಿಂದ ತನ್ನ ಪೋಷಕರ ಸಮ್ಮುಖದಲ್ಲಿ ಪಡೆದುಕೊಂಡಿದ್ದಾನೆ.
ಯು.ಎ.ಇ. ಬಂಟ್ಸ್ 44ನೇ ಸ್ನೇಹಮಿಲನದಲ್ಲಿ ಏರ್ಪಡಿಸಲಾದ “ಲಿಟ್ಲ್ ಪ್ರಿನ್ಸ್ ಅಂಡ್ ಪ್ರಿನ್ಸೆಸ್” ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದಿರುವ ಯಾಯಿನ್ ಕಿರಣ್ ರೈ ಬಹುಮುಖ ಪ್ರತಿಭೆಯ ಅನಾವರಣ ಗೊಂಡಿದೆ.
ಕು| ಯಾಯಿನ್ ಕಿರಣ್ ರೈ ಬೆಳೆದು ಬಂದ ಹಾದಿ…
ಕು| ಯಾಯಿನ್ ಕಿರಣ್ ರೈ, ಅಬುಧಾಬಿಯ ಎನ್ ಎಂ. ಸಿ. ಸ್ಪೆಷಾಲಿಟಿ ಹಾಸ್ಪಿಟಲಿನಲ್ಲಿ ಪ್ರಖ್ಯಾತ ವೈದ್ಯರಾಗಿರುವ ಡಾ| ಕಿರಣ್ ಕುಮಾರ್ ರೈ ಹಾಗೂ ಶ್ರೀಮತಿ ಸುಪ್ರಿಯಾ ಕಿರಣ್ ರೈ ದಂಪತಿಗಳ ಪುತ್ರ, ಕರಾವಳಿ ಕರ್ನಾಟಕದ ತುಳುನಾಡಿನ ಮಿಜಾರು ಗುತ್ತು ಶ್ರೀ ವಿಶ್ವನಾಥ ರೈ, ಕಿದಿಯೂರು ಬಡಗುಮನೆ ಶ್ರೀಮತಿ ಇಂದಿರಾ ರೈ ಹಾಗೂ ಮುಲ್ಲಡ್ಕ ಮುಟ್ಟಿಕಲ್ ಶಿವಣ್ಣ ಶೆಟ್ಟಿ, ಇನ್ನಾ ಬರಿಮಾರ್ ಪ್ರಮೋದ ಶೆಟ್ಟಿ ಇವರುಗಳ ಮೊಮ್ಮಗ.
ಯಾಯಿನ್ ಶೈಕ್ಷಣಿಕವಾಗಿ ಭಾಗವಹಿಸುವ ಎಲ್ಲಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಳ್ಳುವ ಚಲವಂತ. ಪ್ರಸ್ತುತ ವಿದ್ಯಾಸಂಸ್ಥೆಯಲ್ಲಿ “ಸ್ಕಾಲರ್ ಬ್ಯಾಡ್ಜ್ ಪ್ರಶಸ್ತಿ” ನೀಡಿ ಗೌರವಿಸಿಒದೆ.
ಯಾಯಿನ್ ನ ಕನಸು ಒಲಿಪಿಂಕ್ ನಲ್ಲಿ ತನ್ನ ದೇಶವನ್ನು ಪ್ರತಿನಿಧಿಸುವುದಾಗಿದೆ. ಅಥೆಲೆಟಿಕ್ಸ್ ನಲ್ಲಿ ಮುಖ್ಯವಾಗಿ ರನ್ನಿಂಗ್, ಲಾಂಗ್ ಜಂಪ್, ಶಾತ್ ಪುಟ್ ನಲ್ಲಿ ಅನೇಕ ಅಂತಾರಾಷ್ಟ್ರ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿ ಕೊಂಡಿದ್ದಾನೆ.
ಗಣಿತಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿಯಿರುವ ಯಾಯಿನ್ ಗೆ ವಿವಿಧ ರಸಪ್ರಸ್ನೆಗಳು ಮತ್ತು ಅಬಾಕಸ್ ಅಂಡ್ ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯ ಪಡೆಯಲು ಸಹಕಾರಿಯಾಗಿದೆ.
ಇಂಡಿಯಾ ಸೋಶಿಯಲ್ ಅಂಡ್ ಕಲಚರಲ್ ಸೆಂಟರ್, ಅಬುಧಾಬಿ ಮಲಯಾಳಿ ಸೆಂಟರ್, ಕೇರಳ್ ಸೋಶಿಯಲ್ ಸೆಂಟರ್ ಮತ್ತು ಬ್ಲೂ ಸ್ಟಾರ್ ಆಶ್ರಯದಲ್ಲಿ ನಡೆದಿರುವ ಎಲ್ಲಾ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿ ಪುರಸ್ಕಾರ ಪಡೆದಿರುವ ಯಾಯಿನ್ ಸದಾ ಉತ್ಸಾಹಿಯ ಚಿಲುಮೆಯಗಿದ್ದಾನೆ.
ಈಜುವುದರರೊಂದಿಗೆ, ಚಿತ್ರಕಲೆಯಲ್ಲಿಯೂ ಹಸ್ತಕೌಶಲ್ಯವನ್ನು ಹೊಂದಿರುವ ಯಾಯಿನ್ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತನ್ನದಾಗಿಸಿ ಕೊಂಡಿದ್ದಾನೆ.
ಯಾಯಿನ್ ಉತ್ತಮ ಎಳೆಯ ವಾಗ್ಮೀ, ಕಾವ್ಯ ವಾಚನದಲ್ಲಿಯೂ ವಿಶೇಷ ಪ್ರತಿಭೆಯನ್ನು ಹಲವಾರು ವೇದಿಕೆಗಳಲ್ಲಿ ಸಾಕ್ಷೀಕರಿಸಿದ್ದಾನೆ.
“ಪರಿಸರ ಸಂರಕ್ಷಣ” ಮತ್ತು ಸೇವಾ ಮತ್ತು ದಾನ ಕಾರ್ಯಗಳಲ್ಲಿಯೂ ಯಾಯಿನ್ ತನ್ನನ್ನು ತಾನು ತೊಡಗಿಸಿಕೊಂಡು, “ಗ್ರೀನ್ ಹೋಪ್ – ಎನ್ವಿರಾನ್ಮೆಂಟಲ್ ಗ್ರೂಪ್” ನ ಸದಸ್ಯತ್ವ ಪಡೆದುಕೊಂಡಿದ್ದಾನೆ. ವೇಸ್ಟ್ ರಿಸೈಕ್ಲಿಂಗ್(ತ್ಯಾಜ ವಸ್ತುಗಳ ಮರುಬಳಕೆ) ಅಭಿಯಾನದಲ್ಲಿ ಭಾಗವಹಿಸಿಕೊಂಡು ಬರುತಿದ್ದಾನೆ.
ಬಹುಮಖ ಪ್ರತಿಭೆಯ ಕು| ಯಾಯಿನ್ ಕಿರಣ್ ರೈ ಯ ವಿವಿಧ ಚಟುವಟಿಕೆಗಳಲ್ಲಿ ತನ್ನ ಪ್ರತಿಭೆಯ ಮೂಲಕ ತನ್ನ ಪೋಷಕರಿಗೂ, ವಿದ್ಯಾಸಂಸ್ಥೆಗೂ ಹೆಸರು ಗಳಿಸಿರುವವುದನ್ನು ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಗೆ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ. ಎಳೆಯ ವಯಸ್ಸಿನಲ್ಲೇ ಬಹುಮುಖ ಪ್ರತಿಭೆ ಇರುವ ಕು| ಯಾಯಿನ್ ಕಿರಣ್ ರೈ ಯ ಯಶಸ್ವಿ ಹೆಜ್ಜೆಗಳು ಶಾಘನೀಯವಾಗಿದೆ.
ಕು| ಯಾಯಿನ್ ಕಿರಣ್ ರೈ ಇನ್ನೂ ಹೆಚ್ಚಿನ ಸಾಧನೆಯ ಹಾದಿಯಲ್ಲಿ ಮುನ್ನಡೆಯಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.
ಬಿ. ಕೆ. ಗಣೇಶ್ ರೈ – ಯು.ಎ.ಇ.