ಪ್ರಧಾನಿ ಮೋದಿಗೆ ಪರ್ಯಾಯ ಪಲಿಮಾರು ಸ್ವಾಮೀಜಿಯಿಂದ ಶುಭಾಶಯ
ಮಂಗಳೂರು: ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿಯವರಿಗೆ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಶುಭಾಶಯ ಕೋರಿದ್ದಾರೆ.
ಭಾರತ ದೇಶದ ಸಂಸ್ಕೃತಿಯನ್ನು ಉಳಿಸಿ ಸಂಸ್ಕಾರವನ್ನು ಬೆಳೆಸಿ ಪ್ರಪಂಚದ ಎಲ್ಲಾ ದೇಶಗಳ ಮನ್ನಣೆಗೆ ಪಾತ್ರರಾದ,ದೇಶಕ್ಕಾಗಿ ಹಗಲಿರುಳು ಕೆಲಸ ಕಾರ್ಯ ಮಾಡುವಂತಹ ಅಪ್ಪಟ ದೇಶಪ್ರೇಮಿ, ಅಭೂತಪೂರ್ವವಾದ ಜಯಗಳಿಸಿ 2 ನೇ ಬಾರಿ ದೇಶದ ಪ್ರಧಾನಮಂತ್ರಿ ಪದವಿಯನ್ನು ನರೇಂದ್ರ ಮೋದಿಯವರು ಅಲಂಕರಿಸುತ್ತಿರುವುದು ನಮಗೆ ಸಂತಸ ತಂದಿದೆ. ದೇಶಕ್ಕಾಗಿ ತಮ್ಮನ್ನು ಮುಡುಪಾಗಿಟ್ಟು ರಾಷ್ಟ್ರ ಚಿಂತನೆಯನ್ನು ಮೈಗೂಡಿಸಿಕೊಂಡು ಹಿಂದಿನ ಭಾರಿ ಮಾಡಿದ ದೇಶದ ಅಭಿವೃದ್ಧಿ ಕೆಲಸಗಳು,ಜನಪರ ಯೋಜನೆಗಳಿಗೆ ಭಾರತೀಯರುಪೂರ್ಣ ಬೆಂಬಲ ನೀಡಿದ್ದಾರೆ.ಈ ಬಾರಿ ಇನ್ನು ಹೆಚ್ಚಿನ ದೇಶಸೇವೆ ಮಾಡುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರನ್ನು ಪ್ರಾರ್ಥಿಸಿ ಶುಭವನ್ನು ಹಾರೈಸಿದ್ದಾರೆ.