ಪ್ರಧಾನಿಗೆ ಜಿಲ್ಲೆಯ ಜನತೆ ಸ್ವಾಗತ ಕೋರಲು ಸಂಸದ ನಳಿನ್‍ಕುಮಾರ್ ಮನವಿ

Spread the love

ಪ್ರಧಾನಿಗೆ ಜಿಲ್ಲೆಯ ಜನತೆ ಸ್ವಾಗತ ಕೋರಲು ಸಂಸದ ನಳಿನ್‍ಕುಮಾರ್ ಮನವಿ

ಮಂಗಳೂರು : ದೇಶದ ಪ್ರಧಾನಿಯಾದ ಬಳಿಕ ಪ್ರಥಮ ಬಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ದ.ಕ.ಜಿಲ್ಲೆಗೆ ಆಗಮಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಜಿಲ್ಲೆಯ ಜನತೆ ಅಭೂತಪೂರ್ವ ಸ್ವಾಗತ ಕೋರುವಂತೆ ಸಂಸದ ನಳಿನ್‍ಕುಮಾರ್ ಕಟೀಲ್ ವಿನಂತಿಸಿದ್ದಾರೆ.

ಪ್ರಧಾನಿ ಅವರ ಭೇಟಿ ಅವಧಿಯ 2-3 ಗಂಟೆ ಹೊರತು ಪಡಿಸಿ ಉಳಿದ ಅವಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ದೇವರ ದರ್ಶನಕ್ಕೆ ಅವಕಾಶವಿದೆ. ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯದ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಭಕ್ತಾದಿಗಳ ದೇವರ ದರ್ಶನಕ್ಕೆ ಪೂರ್ಣ ಸಹಕಾರ ನೀಡುವುದಾಗಿ ವಿಶೇಷ ಭದ್ರತಾ ಪಡೆಯವರು ತಿಳಿಸಿದ್ದಾರೆ. ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮಧ್ಯಾಹ್ನ ನಡೆಯುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಜಿಲ್ಲೆಯ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ದೇಶದ ಪ್ರಗತಿಗೆ ಕಂಕಣಬದ್ಧರಾಗಿ ದುಡಿಯುತ್ತಿರುವ ನೆಚ್ಚಿನ ಪ್ರಧಾನಿ ಅವರ ಭೇಟಿಯನ್ನು ಸ್ಮರಣೀಯವಾಗಿಸ ಬೇಕೆಂದು ಸಂಸದರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.


Spread the love