‘ಪ್ರಭಾವಶಾಲಿ ಸಂವಹನ ಇಲ್ಲದೆ ಮಾರುಕಟ್ಟೆ ಕ್ಷೇತ್ರದ ಕಾರ್ಯ ತಟಸ್ಥ: ಚಂಗಪ್ಪ ಎ.ಡಿ
ವಿದ್ಯಾಗಿರಿ: ಸಂವಹನ ಎಂಬುದು ವ್ಯಕ್ತಿ ಸಮೂಹಗಳ ನಡುವಿನ ಭಾಂದವ್ಯ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಅಂಶವು ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಬೆಂಗಳೂರಿನ ಆದ್ಯ ಕಮ್ಯೂನಿಕೇಶನ ಬಿಸಿನೆಸ್ ಹೆಡ್ ಚಂಗಪ್ಪ ಎ.ಡಿ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದವತಿಯಿಂದ ಆಯೋಜಿಸಲಾಗಿದ್ದ ‘ಪ್ರಭಾವಶಾಲಿ ಮಾರುಕಟ್ಟೆ ಸಂವಹನ ಮತ್ತು ಕಲಿಕೆ’’ ಎಂಬ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಂವಹನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸಿ, ‘ಪ್ರಭಾವಶಾಲಿ ಸಂವಹನ ಇಲ್ಲದೆ ಮಾರುಕಟ್ಟೆ ಕ್ಷೇತ್ರದ ಕಾರ್ಯ ತಟಸ್ಥ ಎಂದು ತಿಳಿಸಿದರು. ಒಂದು ವಸ್ತುವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಮೊದಲು ಆ ಮಾರುಕಟ್ಟೆಯ ಸೂಕ್ಷ್ಮವಾದ ಜ್ಞಾನ ಹಾಗೂ ಸಂಶೋಧನೆಯ ಬೆಂಬಲ ಅತ್ಯಗತ್ಯ ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಮಾರುಕಟ್ಟೆ ಸಂವಹನಕ್ಕೆ ಸಂಬಂದಪಟ್ಟ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿ, ಇದರ ವಿವಿಧ ಆಯಾಮಗಳನ್ನು ಉದಾಹರಣೆಯೊಂದಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ್ ಪೆಜತ್ತಾಯ ಹಾಗೂ ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಶ್ಮಾ ಉದಯ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿದ್ಯಾರ್ಥಿನಿ ಫಾತಿಮಾ ನಿರ್ವಹಿಸಿ, ನಾಗರಾಜ್ ವಂದಿಸಿ, ಅಭಿಷೇಕ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.