ಪ್ರವಾದಿ ವರ್ಯರ ಜೀವನದ ನೈಜ ಪಥಕ್ಕೆ ಕೊಂಡೊಯ್ಯುವ ಸಯ್ಯಿದರುಗಳು ಮತ್ತು ವಿದ್ವಾಂಸರುಗಳಿಂದ ಕನ್ನಡ ನಾಡು ಸಮೃದ್ಧ : ಝೈನಿಕಾಮಿಲ್
ದುಬೈ: ಕರ್ನಾಟಕವು ಇಂದು ಪ್ರವಾದಿ ಮುಹಮ್ಮದ್ (ಸಅ) ರವರ ಜೀವನದ ನೈಜ ಪಥಕ್ಕೆ ಕೊಂಡೊಯ್ಯುವ ಸಯ್ಯಿದರುಗಳು ಮತ್ತು ವಿದ್ವಾಂಸರುಗಳಿಂದ ಸಮೃದ್ಧಗೊಂಡಿದ್ದು, ರಾಜ್ಯದ ಉದ್ದಗಲಕ್ಕೂ ಇಂದು ವಿದ್ಯಾಸಂಸ್ಥೆಗಳು, ಸಯ್ಯಿದರುಗಳು, ವಿದ್ವಾಂಸರುಗಳ ನೇತೃತ್ವಗಳಿಂದ ಧನ್ಯಗೊಂಡಿದೆ ಎಂದು ಯುವ ವಾಗ್ಮಿ, ಶೈಖ್ಝಾಯಿದಾ ಸಾಮರಸ್ಯ ಪ್ರಶಸ್ತಿ ವಿಜೇತರಾದ ಮೌಲಾನಾ ಎಮ್ಮೆಸ್ಸೆಂ ಅಬ್ದುಲ್ರ ಶೀದ್ಸಖಾಫಿ ಝೈನಿಕಾಮಿಲ್ ಸಂತೋಷ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಕಲ್ಚರಲ್ಫೌಂಡೇಶನ್ – ಕೆಸಿಎಫ್ದುಬೈಝೋನ ಸಮಿತಿ ಆಶ್ರಯದಲ್ಲಿ ಪ್ರೀತಿಯ ಪ್ರವಾದಿ ಶಾಂತಿಯ ಹಾದಿ ಎಂಬ ಶೀರ್ಷಿಕೆಯಲ್ಲಿ ನಡೆದ ಇಲಲ್ಹಬೀಬ್ಮೀಲಾದ್ಸಮಾ ವೇಶದಲ್ಲಿ ಮುಖ್ಯಭಾಷಣ ಮಾಡಿದರು. ಮುಂದುವರಿದು ಮಾತನಾಡಿದ ಝೈನಿರವರು ಪ್ರವಾದಿ (ಸಅ) ರವರ ಬಗ್ಗೆ ಅಧ್ಯಯನ ನಡೆಸಿದ ಆಧುನಿಕ ಬುದ್ದಿಜೀವಿಗಳು ಪ್ರವಾದಿವರ್ಯರಷ್ಟು ಜೀವನದ ಪ್ರತಿಯೊಂದು ವಿಷಯಗಳಲ್ಲೂ ಸಂಪೂರ್ಣರಾದ ಬೇರೊಬ್ಬ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲವೆಂದು ಹೇಳಿರುವುದು ಉದಾಹರಣೆ ಸಹಿತ ವಿವರಿಸಿದರು.
ಸಯ್ಯದ್ ಇಲ್ಯಾಸ್ ಅಲ್ಹೈದ್ರೋಸಿ ತಂಙ್ಙಳ್ಎಮ್ಮೆ ಮಾಡು ಉದ್ಘಾಟಿಸಿ ಮಾತನಾಡಿ ಪ್ರಪಂಚದಲ್ಲಿ ಇಂದು ನಡೆಯುವ ವಿದ್ವಾಂಸಕ ಕೃತ್ಯಗಳು ನಡೆಯುತ್ತಿರುವುದು ಪ್ರವಾದಿ (ಸಅ) ರವರ ಜೀವನದಲ್ಲಿ ತೋರಿಸಿ ಕೊಟ್ಟ ನೈಜ ಆದರ್ಶವನ್ನು ಪಾಲಿಸದೆ ಇರುವುದರಿಂದಾಗಿದ್ದು, ಪ್ರವಾದಿಯೆಡೆಗೆ ಮರಳಬೇಕಾದದ್ದು ಪ್ರತಿಯೊಬ್ಬ ವಿಶ್ವಾಸಿಯ ಕರ್ತವ್ಯವಾಗಿದೆ ಎಂದು ಹೇಳಿದರು. ರಾಜ್ಯ ಎಸ್ಸೆಸ್ಸೆಫ್ ಉಪಾದ್ಧ್ಯಕ್ಷರಾದ ಇಸ್ಮಾಯಿಲ್ಸ ಖಾಫಿ ಕೊಂಡಂಗೇರಿ, ಕೆಸಿಎಫ್ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ಹಮೀದ್ಸ ಅದಿ ಈಶ್ವರ ಮಂಗಳ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ಹಾಜಿನಾ ಪೋಕ್ಲು, ಸಂಘಟನಾ ವಿಭಾಗದ ಅಧ್ಯಕ್ಷರಾದ ಪಿ ಎಂ ಹೆಚ್ ಈಶ್ವರ ಮಂಗಳ ರವರುಗಳು ಸಮಾರಂಭಕ್ಕೆಶುಭಹಾರೈಸಿ ಮಾತನಾಡಿದರು.
ಸಯ್ಯದ್ಶಿಹಾಬುದ್ದೀನ್ಅಲ್ಹೈದ್ರೋಸಿತಂಙ್ಙಳ್ಕಿಲ್ಲೂರು ಪ್ರಾರ್ಥನೆಗೆ ನೇತೃತ್ವವನ್ನು ಕೊಟ್ಟು ಮಾತನಾಡಿದರು. ಕೆಸಿಎಫ್ದುಬೈಬುರ್ದಾತಂಡ ದಿಂದ ಬುರ್ದಾ ಆಲಾಪನೆ ಹಾಗೂ ಮೌಲೂದ್ಪಾರಾಯಣ ನಡೆಯಿತು. ಹಿರಿಯ ವಿದ್ವಾಂಸರಾದ ಕೆ ಹೆಚ್ ಅಹಮದ್ಫೈಝಿ ಕಕ್ಕಿಂಜೆ, ದುಬೈಉದ್ಯಮಿಗಳಾದ ಹಾಜಿ ಬಷೀರ್ಬೊಳ್ವಾರ್, ಅಬ್ದುಲ್ಲ ತೀಫ್ಮುಲ್ಕಿ, ಎಂ ಇ ಮೂಳೂರು, ನಝೀರ್ಕೆಮ್ಮಾರ, ಸ್ಟಾರ್ಲಿಂಕ್ ಅಬ್ದುಲ್ಹಮೀದ್ಹಾಜಿ, ಜೆಎಸ್ಮುಹಮ್ಮದ್ಹಾಜಿ ಅರ್ಲಪದವು, ಝೈನುದ್ದೀನ್ಬೆಳ್ಳಾರೆ, ಅರಫಾತ್ನಾಪೋಕ್ಲು, ಖಲೀಲ್ಭಾಷಾ ಮಡಿಕೇರಿ ಕೆ ಸಿ ಎಫ್ದುಬೈಝೋನ್ ಅಧ್ಯಕ್ಷರಾದ ಮಹಬೂಬ್ಸಖಾಫಿಕಿನ್ಯ, ಕೋಶಾಧಿಕಾರಿ ಅಬೂಬಕರ್ಹಾಜಿ ಕೊಟ್ಟಮುಡಿ, ಯುಎಇ ರಾಷ್ಟ್ರೀಯ ಸಮಿತಿ ನಾಯಕರಾದ ಜಲೀಲ್ನಿಝಾಮಿ ಎಮ್ಮೆಮಾಡು, ಇಕ್ಬಾಲ್ಕಾಜೂರು, ಶುಕೂರ್ಮನಿಲಾ, ಕೆಸಿಎಫ್ ಅಬುಧಾಬಿ ಸಮಿತಿ ಕಾರ್ಯದರ್ಶಿ ಹಸೈನಾರ್ಅಮಾನಿ ಅಜ್ಜಾವರ, ಅಜ್ಮಾನ್ಝೋನ್ ಅಧ್ಯಕ್ಷರಾದ ಅಬ್ದುಲ್ಖಾದರ್ಸಅದಿ, ಅಲ್ಐನ್ಝೋನ್ ಅಧ್ಯಕ್ಶರಾದ ಅಬ್ದುಲ್ರಝಾಕ್ಹಾಜಿ ನಾಟೆಕಲ್, ಶಾರ್ಜಾಝೋನ್ ಅಧ್ಯಕ್ಶರಾದ ಅಬ್ದುಲ್ರಝಾಕ್ಹಾಜಿ ಜೆಲ್ಲಿ ಸೇರಿದಂತೆ ಅನೇಕ ಉಲಮಾ ಉಮರಾ ನಾಯಕರುಗಳು ಭಾಗವಹಿಸಿದರು.
ಕೆಸಿಎಫ್ದು ಬೈಝೋನ್ಪ್ರಧಾನ ಕಾರ್ಯದರ್ಶಿ ಕಲಂದರ್ಕಬಕ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ರಿಯಾಝ್ಕೊಂಡಂಗೇರಿ ಕಾರ್ಯಕ್ರಮ ನಿರೂಪಿಸಿದರು, ಮೀಲಾದ್ಸ್ವಾಗತ ಸಮಿತಿ ಕನ್ವೀನರ್ಹಂಝ ಎಮ್ಮೆ ಮಾಡುಸ್ವಾಗತಿಸಿ, ದುಬೈಝೋನ್ ಆಡಳಿತ ವಿಭಾಗದ ಅಧ್ಯಕ್ಷರಾದ ರಫೀಕ್ಕಲ್ಲಡ್ಕ ವಂದನಾರ್ಪಣೆ ನಿರ್ವಹಿಸಿದರು