ಪ್ರವಾಹ ಪೀಡಿತ ಅಂಕೋಲದ ಕೂರ್ವೆ ದ್ವೀಪದ ಜನರ ನೋವಿಗೆ ಮಿಡಿದ ಉಡುಪಿಯ ತಂಡ
ಉಡುಪಿ: ಭೀಕರ ಮಳೆ ಮತ್ತು ಪ್ರವಾಹದಿಂದ ತತ್ತರಗೊಂಡ ಅಂಕೋಲಾದ ಕುರ್ವೆ ದ್ವೀಪಕ್ಕೆ ಉಡುಪಿಯ ಸಮಾನ ಮನಸ್ಕರ ಯುವಕರ ತಂಡ ಭೇಟಿ ನೀಡಿ ಸ್ವಚ್ಚತಾ ಕಾರ್ಯ ನಡೆಸಿತು.
ಪ್ರಕಾಶ್ ಮಲ್ಪೆ ನೇತೃತ್ವದ ಸಂವೇದನಾ ತಂಡ ಮತ್ತು ನಗರಸಭಾ ಸದಸ್ಯ ವಿಜಯ ಕೊಡವೂರು ಅವರ ಸಹಕಾರದೊಂದಿಗೆ ನಾವು ನೆರೆಪೀಡಿತ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ವಿತರಿಸಿದ್ದಲ್ಲದೆ ಸ್ವತಃ ಸ್ವಯಂ ಸೇವಕರೊಡಗೂಡಿ ಸ್ವಚ್ಚತಾ ಕಾರ್ಯ ನಡೆಸಿದರು.
ಕಾರ್ಯಕರ್ತರು ಕೆಸರಿನಿಂದ ತುಂಬಿದ ಸುಮಾರು 25ಕ್ಕೂ ಅಧಿಕ ಮನೆಗಳನ್ನು ಹಾಗೂ ಮೂರು ಶಾಲೆಗಳ ಒಳಗೆ ತುಂಬಿದ ಕೆಸರನ್ನು ಸಂಪೂರ್ಣ ಸ್ವಚ್ಚಗೊಳಿಸಿದರು.
ಅಲ್ಲದೆ ಉಡುಪಿಯ ಸಾರ್ವಜನಿಕರು ವಸ್ತು ರೂಪದಲ್ಲಿ ಕೊಡಮಾಡಿದ ಸುಮಾರು ರೂ 4 ಲಕ್ಷ ಮೌಲ್ಯದ ಸೊತ್ತನ್ನು ಅಲ್ಲಿನ ನಿರಾಶ್ರಿತರಿಗೆ ಹಸ್ತಾಂತರಿಸಲಾಯಿತು.
ಸಂವೇದನ ತಂಡದೊಂದಿಗೆ ವಡಭಾಂಡೇಶ್ವರ ಭಕ್ತವೃಂದದ ಕಾರ್ಯಕರ್ತರು, ಕೊಡವೂರು ಬ್ರಾಹ್ಮಣ ಮಹಾಸಭಾ, ಸ್ನೇಹ ಫ್ರೆಂಡ್ಸ್ ಬೈಲಕೆರೆ, ಕಾಪುವಿನ ವರುಣ್, ವಿಘ್ನೇಶ್ & ಟೀಮ್, ಜ್ಞಾನಜ್ಯೋತಿಯ ಚಂದ್ರಣ್ಣ ರಕ್ಷಿತ್ ಭಂಡಾರಿ ಒಟ್ಟು 42 ಮಂದಿ ತಂಡದಲ್ಲಿದ್ದರು.