ಪ್ರಾಂತ್ಯದ ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಹಸಿರು ‘ಸಂಚಲನ’
ಮೂಡುಬಿದಿರೆ: ಪ್ರಾಂತ್ಯದ ದ.ಕ. ಜಿಲ್ಲಾ ಪಂಚಾಯತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ‘ಸಂಚಲನ’ ತಂಡದ ವತಿಯಿಂದ ಸಸ್ಯಗಳನ್ನು ನೆಟ್ಟು, ಪ್ರಕೃತಿ ಹಾಗೂ ಪರಿಸರದ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮಕ್ಕ ಚಾಲನೆ ನೀಡಿ ಮಾತನಾಡಿದ ಮುಖ್ಯೋಪಾಧ್ಯಾಯ ಸುಧಾಕರ್ ಸಾಲ್ಯಾನ್, ಪ್ರಸ್ತುತ ವಿದ್ಯಾಮಾನದಲ್ಲಿ ಹಸಿರು ನಾಶವಾಗುತ್ತಿದ್ದು ಇಂದಿನ ಯುವ ಪೀಳಿಗೆ ಇದರ ಮಹತ್ವವನ್ನ ಅರಿತು ಪ್ರಕೃತಿಯನ್ನ ಕಾಪಾಡುವತ್ತಾ ಕಾರ್ಯಪ್ರವೃತ್ತರಾಗಬೇಕು. ಅಲ್ಲದೆ ಇಂತಹ ಕಾರ್ಯಕ್ರಮಗಳಿಂದ ಶಾಲಾ ದಿನಗಳಲ್ಲೇ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಹಾಗೂ ಜವಾಬ್ದಾರಿ ವೃಧ್ಧಿಸುತ್ತದೆ ಎಂದರು.
ಹಲಸು, ಮಾವೂ, ಪೇರಲೆ, ಪಪ್ಪಾಯ, ನುಗ್ಗೆ ಹಾಗೂ ತೆಂಗಿನ ಸಸಿಗಳನ್ನ ವಿದ್ಯಾರ್ಥಿಗಳ ಮೂಲಕವೇ ನಡಿಸಿ, ನಂತರ ಪ್ರತಿಯೊಂದು ಸಸ್ಯದ ಮಹತ್ವವನ್ನ ತಿಳಿಸಿಕೊಟ್ಟರು.
ಶಾಲೆಯ ಶಿಕ್ಷಕರು, ಆರನೇ ಹಾಗೂ ಏಳನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಸಂಚಲನ ತಂಡದ ವಿಂದ್ಯಾ, ರೂಪ, ದೀಕ್ಷಾ, ವಿದ್ಯಾ, ಪವಿತ್ರಾ, ನಾಗಶ್ರೀ, ಶ್ರಧ್ಧಾ, ಪ್ರಿಯಾಂಕ, ಚೈತ್ರಾ, ವಾಣಿಶ್ರೀ, ಲಾವಣ್ಯ ಹಾಗೂ ಪ್ರಣವ್ ಉಪಸ್ಥತರಿದ್ದರು.