ಫಕೀರನ ವೇಷದಲ್ಲಿ ಬಂದು ಉದ್ಯಾವರದಲ್ಲಿ 8 ಪವನ್ ಚಿನ್ನ ಕಳವು
ಉಡುಪಿ: ಭಿಕ್ಷೆಯ ನೆಪದಲ್ಲಿ ಮುಸ್ಲಿಂ ಮಹಿಯೆರಿದ್ದ ಮನೆಯೊಳಗೆ ಪ್ರವೇಶಿಸಿದ ಫಕೀರನೋರ್ವ ಮನೆಯವರನ್ನು ವಂಚಿಸ 8 ಪವನ್ ಚಿನ್ನಾಭರಣವನ್ನ ಕದ್ದೊಯ್ದ ಘಟನೆ ಉದ್ಯಾವರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗುರುವಾರ ಬೆಳಿಗ್ಗೆ ಆಯಿಷಾ ಅವರು ಮನೆಯಲ್ಲಿ ಇರುವಾಗ ಫಕೀರನಂತೆ ಬಟ್ಟೆ ಹಾಕಿಕೊಂಡು ಓರ್ವ ಅಪರಿಚಿತ ವ್ಯಕ್ತಿ ಮನೆ ಸಮೀಪ ಬಂದ್ದಿದ್ದು, ಆಯಿಷಾ ರವರು ಆತನಿಗೆ 20 ರೂಪಾಯಿ ಕೊಟ್ಟಿದ್ದು ಆಗ ಆತನು ನೀವು ತುಂಬಾ ಕಷ್ಟದಲ್ಲಿದ್ದೀರಿ ನಿಮಗೆ ಮತ್ತು ನಿಮ್ಮ ಗಂಡನಿಗೆ ಮಾಟಮಾಡಿದ್ದಾರೆ ಅವರನ್ನು ನಾನು ಮನೆಯ ಒಳಗೆ ಬಂದು ತೋರಿಸುತ್ತೇನೆ ಎಂದು ಹೇಳಿದಂತೆ ಒಳಗೆ ಬಂದು ನಿಮ್ಮಲ್ಲಿರುವ ಚಿನ್ನವನ್ನು ನೋಡುವ ಎಂದು ಚಿನ್ನವನ್ನು ತರಿಸಿ ಆಯಿಷಾ ರವರ ಮುಖಕ್ಕೆ ನೀರು ಹಾಕಿ ಚಿನ್ನವನ್ನು ಮಡಕ್ಕೆಯಲ್ಲಿ ಇಟ್ಟಿರುತ್ತೇನೆ ಎಂದು ಹೇಳಿ ಮಡಿಕೆಗೆ ಕೆಂಪು ನೂಲನ್ನು ಸುತ್ತಿ ನೀಡಿ ಮನೆಯಿಂದ ಹೋಗಿದ್ದು, ಸ್ವಲ್ಪ ಹೊತ್ತಿನ ನಂತರ ಮಡಿಕೆಯನ್ನು ನೋಡುವಾಗ ಚಿನ್ನ ಇಲ್ಲದೆ ಇದ್ದು ಅಪರಿಚಿತ ವ್ಯಕ್ತಿಯು ಮೋಸ ಮಾಡುವ ಉದ್ದೇಶದಿಂದ ಫಕೀರನ ವೇಶದಲ್ಲಿ ಮನೆಗೆ ಬಂದು 8 ಪವನ್ ಚಿನ್ನವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಫಕೀರ ಮನೆಯಿಂದ ಹೊರಟು ಹೋದ ಬಳಿಗೆ ಮಡಕೆಯನ್ನು ತೆರೆದು ನೋಡಿದಾಗ ಮೋಸ ಹೋಗಿರುವ ವಿಚಾರ ಗಮನಕ್ಕೆ ಬಂದಿದ್ದು, ಬಳಿಕ ಆಯಿಷಾ ಅವರು ಕಾಪು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಈತನ ಕೃತ್ಯದ ಕುರಿತು ಪಕ್ಕದ ಮನೆಯ ಸಿಸಿಕೆಮಾರಾದಲ್ಲಿ ಸೆರೆಯಾಗಿದ್ದ ಫಕೀರನ ಭಾವಚಿತ್ರವನ್ನು ಪೋಲಿಸರು ಸಂಗ್ರಹಿಸಿದ್ದು ಆತನ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ.