ಫಸ್ಟ್ ನ್ಯೂರೋ ಕೊರೋನಾ ಸೋಂಕಿನ ಮೂಲ ಹುಡುಕುವಲ್ಲಿ ಸರಕಾರ ವಿಫಲ, ತನಿಖೆಗೆ ಸಿಪಿಐ (ಎಂ) ಆಗ್ರಹ 

Spread the love

ಫಸ್ಟ್ ನ್ಯೂರೋ ಕೊರೋನಾ ಸೋಂಕಿನ ಮೂಲ ಹುಡುಕುವಲ್ಲಿ ಸರಕಾರ ವಿಫಲ, ತನಿಖೆಗೆ ಸಿಪಿಐ (ಎಂ) ಆಗ್ರಹ 

ಮಂಗಳೂರು: ಪಡೀಲು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕಂಡು ಬಂದ ಕೊರೋನಾ ಸೋಂಕು ಜಿಲ್ಲೆ, ಹೊರ ಜಿಲ್ಲೆಗೆ ಹರಡುತ್ತಿದ್ದರೂ ಇದರ ಮೂಲವನ್ನು ಕಂಡು ಹುಡುಕುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಆಸ್ಪತ್ರೆಯ ವರಿಷ್ಠರನ್ನು ರಕ್ಷಿಸಲು ಬಿಜೆಪಿ ಸರಕಾರದ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರುಗಳು ಮೀನ ಮೇಷ ಮಾಡಿ ಕೊನೆಗೆ ಕೇರಳ ರಾಜ್ಯಕ್ಕೆ ಕಟ್ಟುವ ಹುನ್ನಾರ ಕಂಡು ಬರುತ್ತದೆ ಎಂದು ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ವ್ಯಾಪಾರೀ ಮನೋಭಾವದ ಆಸ್ಪತ್ರೆಯ ವರಿಷ್ಠರು ತನ್ನ ಜವಾಬ್ದಾರಿಯನ್ನು ಮರೆತಿರುವುದೇ ಇದಕ್ಕೆ ಕಾರಣ. ಈ ಬಗ್ಗೆ ತನಿಖೆ ನಡೆಸಿ, ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕೆಂದು ಸಿಪಿಐ(ಎಂ) ತಿಳಿಸಿದೆ.

ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸುವಲ್ಲಿ ಕೂಡಾ ರಾಜಕೀಯ ಮಾಡುತ್ತಿರುವ ರಾಜ್ಯ ಸರಕಾರದ ನೀತಿ ಖಂಡನೀಯ. ಅವರುಗಳು ಅವರವರ ರಾಜ್ಯಗಳಿಗೆ ತೆರಳುವ ತನಕವೂ ಅವರಿಗೆ ಊಟ, ವಸತಿ ವ್ಯವಸ್ಥೆಯನ್ನು ಮಾಡಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.

ಖಾಸಗಿ ಬಸ್ಸು ಮಾಲಕರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಬಸ್ಸು ಓಡಾಟ ನಡೆಸಲು ಜಿಲ್ಲಾಡಳಿತ ಕ್ರಮ ಜರುಗಿಸಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.


Spread the love