ಫಾ|ಮಹೇಶ್ ಸಾವಿನ ಕುರಿತು ಜಾಲತಾಣದಲ್ಲಿ ಸುಳ್ಳು ಮಾಹಿತಿ ನೀಡುವವರ ವಿರುದ್ದ ಕ್ರಮ – ಎಸ್ಪಿ ನೀಶಾ ಜೇಮ್ಸ್
ಉಡುಪಿ: ಶಿರ್ವ ಡೋನ್ ಬೊಸ್ಕೊ ಶಾಲೆಯ ಪ್ರಾಂಶುಪಾಲರಾದ ವಂ|ಮಹೇಶ್ ಡಿಸೋಜಾ ಅವರ ಸಾವಿನ ಕುರಿತು ಮತ್ತು ಘಟನೆಯ ತನಿಖೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಮತ್ತು ವದಂತಿಗಳನ್ನು ಪ್ರಸರಿಸಿ ಕಾನೂನು ಸುವವ್ಯಸ್ಥೆಗೆ ದಕ್ಕೆ ಆದಲ್ಲಿ ಅಂತಹವರ ವಿರುದ್ದ ಮತ್ತು ಪೂರ್ವಾನುಮತಿ ಇಲ್ಲದೆ ಕೂಟ ಸೇರಿದವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಶಾ ಜೇಮ್ಸ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಪೊಲೀಶ್ ವರಿಷ್ಠಾಧಿಕಾರಿಯವರು ಪಾಧರ್ ಮಹೇಶ್ ಡಿ`ಸೋಜ (36) ಎಂಬವರು ಶಿರ್ವದ ಡಾನ್ ಬಾಸ್ಕೋ ಸಿ.ಬಿ.ಎಸ್.ಸಿ, ಶಾಲೆಯ ಮುಖ್ಯೋಪಾದ್ಯಾಯರು ಮತ್ತು ಶಿರ್ವ ಸಾವುದ್ ಅಮ್ಮನವರ ಇಗರ್ಜಿ ಸಹಾಯಕ ಗುರುಗಳು ಆಗಿದ್ದು ಇವರು ಯಾವುದೋ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ ಅಕ್ಟೋಬರ್ 11 ರಂದು ರಾತ್ರಿ 9.05 ಗಂಟೆಯಿಂದ ಅಕ್ಟೋಬರ್ 12 ರ 1 ಗಂಟೆಯ ಮಧ್ಯಾವದಿಯಲ್ಲಿ ಶಿರ್ವ ಡಾನ್ ಬಾಸ್ಕೋ ಶಾಲೆಯ ಮುಖ್ಯೋಪಾದ್ಯಾಯರ ಕೊಠಡಿಯಲ್ಲಿ ಪ್ಯಾನ್ಗೆ ನೈಲಾನ್ ಹಗ್ಗ ಬಿಗಿದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ಅವರ ಸಂಬಂಧಿಕರಾದ ಪೌಲ್ ಬರ್ಬೋಜ ಅವರು ನೀಡಿದ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಸಂಖ್ಯೆ: ೧೨/೨೦೧೯ ಕಲಂ: ೧೭೪ ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಿಸಿಕೊಂಡು ಪಿ.ಎಸ್.ಐ. ಶಿರ್ವ ರವರು ಪ್ರಕರಣದ ತನಿಖೆಯನ್ನು ಕೈಗೊಂಡಿರುವುದಾಗಿದೆ. ಈ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳು ಸೂಕ್ತ ನಿರ್ದೇಶನಗಳನ್ನು ನೀಡಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಇದುವರೆಗೆ ನಡೆಸಿದ ತನಿಖೆಯಿಂದ ಹಾಗೂ ವೈದ್ಯಕೀಯ ಶವ ಪರೀಕ್ಷಾ ವರದಿಯಿಂದ ಮೃತ ಪಾಧರ್ ಮಹೇಶ್ ಡಿ`ಸೋಜರವರು ತಮ್ಮದೇ ಆದ ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಂಡು ಬಂದಿದ್ದು ಇವರ ಸಾವು ಕೊಲೆ ಅಥವಾ ಅಪರಾಧಿಕ ದುಷ್ಪ್ರೇರಣೆಯಿಂದ ನಡೆದಿರುವುದು ಇದುವರೆಗಿನ ತನಿಖೆಯಿಂದ ಕಂಡು ಬಂದಿರುವುದಿಲ್ಲ.
ಶವ ಪರೀಕ್ಷಾ ಸಮಯದಲ್ಲಿ ವೈದ್ಯರು ಸಂಗ್ರಹಿಸಿದ ದೇಹದ ಅಂಗಾಗಗಳನ್ನು (ವಿಸೆರಾ) ಪರಿಣಿತರ ಪರಿಶೀಲನೆ ಮತ್ತು ವರದಿಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಈ ವರದಿಯು ಬಂದ ಮೇಲೆ ಲಭ್ಯ ಸಾಕ್ಷ್ಯಾಯದಾರಗಳನ್ನು ಆಧರಿಸಿ ತನಿಖೆಯನ್ನು ಮುಕ್ತಾಯಗೊಳಿಸಿ ಅಂತಿಮ ವರದಿಯನ್ನು ತಯಾರಿಸಲಾಗುವುದು.
ನವೆಂಬರ್ 2ರಂದು ಸಾಯಾಂಕಾಲದ ಪ್ರಾರ್ಥನೆಯ ನಂತರ ಅಲ್ಲಿ ಬಂದತಹ ಜನರು ಚರ್ಚ್ನೊಳಗೆ ಫಾದರ್ರವರೊಡನೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿನ: ಚರ್ಚೆಯನ್ನು ನಡೆಸಿದ್ದು, ಇದರ ಮಾಹಿತಿ ತಿಳಿದು ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ವಿಪರೀತಕ್ಕೆ ಹೋಗದಂತೆ ನೋಡಿಕೊಂಡಿರುತ್ತಾರೆ. . ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಮತ್ತು ವದಂತಿಗಳನ್ನು ಪ್ರಸರಿಸಿ ಕಾನೂನು ಸುವವ್ಯಸ್ಥೆಗೆ ದಕ್ಕೆ ಆದಲ್ಲಿ ಅಂತಹವರ ವಿರುದ್ದ ಮತ್ತು ಪೂರ್ವಾನುಮತಿ ಇಲ್ಲದೆ ಕೂಟ ಸೇರಿದವರ ವಿರುದ್ದ ಕಠಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.