ಫೋನಿನಲ್ಲಿ ಮಹಿಳೆಗೆ ಪೋಲಿಸ್ ಕಾನ್ಸ್ ಸ್ಟೇಬಲ್ ಲೈಂಗಿಕ ಕಿರುಕುಳ: ಅಮಾನತು

Spread the love

ಫೋನಿನಲ್ಲಿ ಮಹಿಳೆಗೆ ಪೋಲಿಸ್ ಕಾನ್ಸ್ ಸ್ಟೇಬಲ್ ಲೈಂಗಿಕ ಕಿರುಕುಳ: ಅಮಾನತು
ಮಂಗಳೂರು: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಂಗಳೂರು ನಗರ ಪೋಲಿಸ್ ಆಯುಕ್ತರು ಪಣಂಬೂರು ಠಾಣೆಯ ಪೋಲಿಸ್ ಕಾನ್ಸ್ ಟೇಬಲ್ ಒರ್ವರನ್ನು ಅಮಾನತು ಮಾಡಿದ್ದಾರೆ.
ಬೆಂಗರೆಯ ವಿವಾಹಿತ ಮಹಿಳೆಯೊಬ್ಬರನ್ನು ವಿಚಾರಣೆಯ ನೆಪದಲ್ಲಿ ಪಣಂಬೂರು ಠಾಣೆಯ ಪೋಲಿಸ್ ಕಾನ್ಸ್ ಟೇಬಲ್ ವಿನಯ್ ಎಂಬವರು ಸೋಮವಾರದಿಂದ ಮೊಬೈಲ್ ಮೂಲಕ ಸಂಪರ್ಕಿಸಿ ಲೈಂಗಿಕ ಕಿರುಕುಳ ನೀಡುತ್ತದ್ದರು ಎನ್ನಲಾಗಿದೆ.
ಈ ಬಗ್ಗೆ ಮಹಿಳೆಯ ಸ್ಥಳೀಯ ಡಿವೈಎಫ್ ೈ ಕಾರ್ಯಕರ್ತರ ಗಮನಕ್ಕೆ ತಂದಿದ್ದು, ಆದರಂತೆ ವಿನಯ್ ಫೋನ್ ಕರೆಗಳನ್ನು ರೆಕಾರ್ಡ್ ಮಾಡಿ ಬುಧವಾರ ಪೋಲಿಸ್ ಆಯುಕ್ತ ಚಂದ್ರಶೇಖರ್ ಅವರಿಗೆ ದೂರು ನೀಡಲಾಯಿತು.
ತಕ್ಷಣ ನಗರ ಪೋಲಿಸ್ ಆಯುಕ್ತರು ಉಪಾಯುಕ್ತರು ಮಹಿಳಾ ಇನ್ಸ್ ಪೆಕ್ಟರ್ ಅವರಿಗೆ ಸೂಚನೆ ನೀಡಿದ್ದು ಮಹಿಳೆ ನೀಡಿದ ದೂರಿನಂತೆ ಪಣಂಬೂರು ಠಾಣೆಯ ಪೋಲಿಸರ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸ್ ಆಯುಕ್ತರು ಆರೋಪಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಆರೋಪಿಯನ್ನು ಬಂಧಿಸಿದ್ದಾರೆ.


Spread the love