ಫ್ರೆಂಡ್ಸ್ ಬಲ್ಲಾಳ್ ಬಾಗ್- ಬಿರುವೆರ್ ಕುಡ್ಲ ಅಶಕ್ತರಿಗೆ 1.50 ಲಕ್ಷ ರೂ. ಆರ್ಥಿಕ ಸಹಾಯ ಬಲ್ಲಾಳ್ ಬಾಗ್ ಗುರ್ಜಿ ದೀಪೋತ್ಸವ ಕಾರ್ಯಕ್ರಮದಲ್ಲಿ ವಿತರಣೆ
ಮಂಗಳೂರು: ದೀನ ದಲಿತರ ,ಅಶಕ್ತರ ಆಶಾಕಿರಣವಾಗಿ ಮೂಡಿ ಬರುತ್ತಿರುವ ಉದಯಪೂಜಾರಿ ಬಳ್ಳಾಲ್ ಬಾಗ್ ಅವರ ನೇತೃತ್ವದ ಕನಸಿನ ಕೂಸು ಫ್ರೆಂಡ್ಸ್ ಬಲ್ಲಾಳ್ಬಾಗ್ ಬಿರುವೆರ್ ಕುಡ್ಲ ಸಂಘಟನೆಯು ಬಳ್ಳಾಲ್ ಬಾಗ್ ಗುರ್ಜಿ ದೀಪೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ವಿತರಿಸಿತು.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯಶವಂತ್ ಸುವರ್ಣ ಮಠದಕಣಿ ಬೋಳೂರು ಇವರ ಕುಟುಂಬಕ್ಕೆ 50,000ರೂಪಾಯಿ, ಅಂಗ ನೂನ್ಯತೆ ಹೊಂದಿರುವ ಬಳ್ಳಾಲ್ ಬಾಗ್ ನ ಕಾವ್ಯ ಕುಟುಂಬಕ್ಕೆ 40,000ರೂಪಾಯಿ ,ಮನೋಜ್ ಸರಿಪಲ್ಲಹಾಗೂ ವೀಲ್ ಚೇಯರ್ ಕೊಡುಗೆ ಮತ್ತು ಕರಳು ತೊಂದರೆಯಿಂದ ಬಲಳುತ್ತಿರುವ ಕುಂಪನ ನಿವಾಸಿ ಶೈಲೇಶ್ ಕುಟುಂಬಕ್ಕೆ 60,000ನ್ನು ಹೀಗೆ ಒಟ್ಟು 1,50,000ರೂಪಾಯಿಯನ್ನು ಗಣ್ಯರು ಹಸ್ತಾಂತರಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಉದಯ್ ಕುಮಾರ್ ಶೆಟ್ಟಿ ಮತ್ತು ನಿಹಾಲ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಮಿಕ ಮುಂದಾಳು ಸುರೇಶ್ಚಂದ್ರ ಶೆಟ್ಟಿ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ನೇತೃತ್ವದಲ್ಲಿ ಯುವ ಶಕ್ತಿ ಒಂದು ಗೂಡಿ ಒಂದಿಷ್ಟು ಆರ್ಥಿಕ ನೆರವು ಸಂಗ್ರಹಿಸಿ ಬಡ ವರ್ಗಕ್ಕೆ ಹಸ್ತಾಂತರಿಸಿ ಒಂದಿಷ್ಟು ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಬಿರುವೆರ್ ಕುಡ್ಲ ಸಂಘಟನೆಯು ಎಲ್ಲಾ ಜಾತಿ, ಮತ, ಧರ್ಮದ ಜನರನ್ನು ಒಟ್ಟುಗೂಡಿಸಿ ಸಮಾನ ನ್ಯಾಯಪರವಾಗಿ ಕೆಲಸ ಮಾಡಿ ಎಲ್ಲರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಬಡವರ್ಗದ ಚಿಕಿತ್ಸೆಗಾಗಿ ಧನ ಸಹಾಯ, ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಹಸ್ತ, ನ್ಯಾಯಪರ ವಿಚಾರಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಾ ಮಾನವೀಯ ಕಾಳಜಿಯನ್ನು ಎತ್ತಿ ತೋರಿಸಿದೆ ಎಂದು ಶ್ಲಾಘಿಸಿದರು.
ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ ಬಾಗ್, ಮುಡಾ ಅಧ್ಯಕ್ಷ ಸುರೇಶ್ ಬಳ್ಳಾಲ್ ಮಂಜಣ್ಣ ಬ್ರಿಗೇಡ್ ನ ಮನೋಜ್ ಕೋಡಿಕೆರೆ, ಪ್ರಮೋದ್ ಬಳ್ಳಾಲ್ ಬಾಗ್, ಪ್ರಕಾಶ್ ಪಾಂಡೇಶ್ವರ್,ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್, ಅಭಿಷೇಕ್ ಅಮೀನ್ ಬಿಕರ್ನಕಟ್ಟೆ, ರಣ್ ದೀಪ್ ಕಾಂಚನ್, ಜಾನ್ ಸುರೇಶ್ ಸದಾನಂದ ಪೂಜಾರಿ,ಚಾರ್ವಾಕ್ ಮಹೇಶ್ ಶೆಟ್ಟಿ ಮುಂಬಯಿ, ಲತೀಶ್ ಪೂಜಾರಿ, ಅಮೃತ್ ಕದ್ರಿ,ಅಕ್ಷಿತ್ ಸುವರ್ಣ, ಇರ್ಫಾನ್ ಕುದ್ರೋಳಿ, ಮನೋಜ್ ಸರಿಪಲ್ಲ, ಪ್ರಕಾಶ್ ಡಿ.ಸಾಲ್ಯಾನ್, ರಾಕೇಶ್ ಕೋಟ್ಯಾನ್,ಬಿರುವೆರ್ ಕುಡ್ಲದ ಪದಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಬಾಕ್ಸ್ ಮಾಡ ಬಹುದು:
ಬಿರುವೆರ್ ಕುಡ್ಲ ಫ್ರೆಂಡ್ಸ್ ಬಲ್ಲಾಳ್ ಬಾಗ್ ಸರ್ವ ಧರ್ಮ ಸಾಮಾಜಿಕ ಚಟುವಟಿಕೆಗಾಗಿಯೇ ಹುಟ್ಟಿಕೊಂಡಿದೆ. ಎಲ್ಲಾ ಸಮುದಾಯದ ಕಾರ್ಯಕರ್ತರು ನಮ್ಮ ಸಂಘಟನೆಯಲ್ಲಿ ದುಡಿಯುತ್ತಿದ್ದಾರೆ. ಧನ ಸಹಾಯಕ್ಕಾಗಿ ಪ್ರತಿಯೊಬ್ಬರೂ ಕೊಡುಗೆ ನೀಡುತ್ತಾರೆ. ಪ್ರತೀ ತಿಂಗಳಲ್ಲಿ ಅರ್ಹರನ್ನು ಗುರುತಿಸಿ ಧನ ಸಹಾಯ, ಸೌಲಭ್ಯ ವಿತರಣೆ ಮತ್ತಿತರ ಕಾರ್ಯವನ್ನು ಮಾಡುತ್ತಿದ್ದೇವೆ. ತುಳು ನಾಡಿನ ಘನತೆಗೆ ಧಕ್ಕೆ ಬಂದಾಗ ಬೀದಿಗಿಳಿದು ಹೋರಾಟ ಮಾಡಲೂ ಸಿದ್ದರಿದ್ದೇವೆ. ಕಾವ್ಯಾ ಅನುಮಾನಸ್ಪದ ಸಾವಿನ ತನಿಖೆಗಾಗಿ ಸುಮಾರು ಏಳೆಂಟು ಸಾವಿರ ಕಾರ್ಯಕರ್ತರು ಬೀದಿಗೆ ಇಳಿದು ಹೋರಾಟ ಮಾಡಿದ್ದು ಇದಕ್ಕೆ ನಿದರ್ಶನ.
ಉದಯ ಪೂಜಾರಿ ಬಲ್ಲಾಳ್ ಬಾಗ್