ಬಂಟರ ಸಂಘ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ದಶಮಾನೋತ್ಸವ
ಮುಂಬಯಿ: ಸುಮಾರು ಹತ್ತು ವರ್ಷಗಳ ಹಿಂದೆ ಸಂದಿಗ್ದ ಪರಿಸ್ಥಿತಿಯೊಂದಿಗೆ ಬಂಟರ ಸಂಘದ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯು ಸ್ಥಾಪನೆಗೊಂಡಿದ್ದು ಇಂದು ಬಹಳ ವಿಜ್ರಂಭಣೆಯಿಂದ ದಶಮಾನೋತ್ಸವವನ್ನು ಆಚರಿಸುವಂತಾಗಿದೆ. ಕಠಿಣ ಪರಿಶ್ರಮದಿಂದ ಇಂದು ಈ ಸಮಿತಿಯು ಯಶಸ್ಸನ್ನು ಕಂಡಿದೆ. ನಮ್ಮ ಸಂಘಕ್ಕೆ ಒಂಬತ್ತು ಪ್ರಾದೇಶಿಕ ಸಮಿತಿಗಳಿದ್ದು ಇವುಗಳ ಚಟುವಟಿಕೆಗಳಿಂದ ಸಂಘವು ಉನ್ನತ ಮಟ್ಟಕ್ಕೇರಿದೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪದ್ಮನಾಭ ಎಸ್, ಪಯ್ಯಡೆಯವರು ನುಡಿದರು.
ನ. 24 ರಂದು ವಸಾಯಿ ಪೂರ್ವ ಗ್ರಾಂಡ್ ರೆಸಿಡೆನ್ಸಿ ಹೋಟೇಲು ಉಡುಪಿ ಕೃಷ್ಣ ಮೈದಾನ, ದಿ. ನಾರಾಯಣ ಶೆಟ್ಟಿ ಕೊಡ್ಲಾಡಿ ಪ್ರವೇಶ ದ್ವಾರ, ದಿ. ಗುರ್ಮೆ ಪದ್ಮಾವತಿ ಶೆಟ್ಟಿ ವೇದಿಕೆ ಇಲ್ಲಿ ದಿನಪೂರ್ತಿ ಅದ್ದೂರಿಯಾಗಿ ಜರಗಿದ ಬಂಟರ ಸಂಘ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ದಶಮಾನೋತ್ಸವ ಸಂಭ್ರಮ – 2019 ಇದರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪದ್ಮನಾಭ ಪಯ್ಯಡೆಯವರು ಪ್ರತಿಯೊಂದು ಸಮುದಾಯಕ್ಕೂ ಕುಲ ಕಸುಬು ಇದೆ ಅಂತೆಯೆ ನಾವು ಕೃಷಿಕರು. ನಮ್ಮ ಹಿರಿಯರ ಪರಿಶ್ರಮದಿಂದ ಬಂಟರ ಸಂಘವು ಸ್ಥಾಪನೆಯಾಗಿ ಅಭಿವೃದ್ದಿಗೊಂಡಿದ್ದು ನಮ್ಮ ಸಮಾಜದ ಮುಖ್ಯವಾಗಿ ಆರ್ಥಿಕ ವಾಗಿ ಹಿಂದುಳಿದ ನಮ್ಮವರನ್ನು ಗುರುತಿಸಿ ಅವರಿಗೆ ಸಹಕಾರ ನೀಡುವ ಉದ್ದೇಶದಿಂದ ನಾವು ಈ ಪ್ರಾದೇಶಿಕ ಸಮಿತಿಗಳನ್ನು ಸ್ಥಾಪಿಸಿದ್ದೇವೆ. ಇಲ್ಲಿ ಜನಪರ ಕೆಲಸವಾಗುತ್ತಿದೆ. ನಾವೆಲ್ಲಾ ಒಂದಾಗಿ ಸಮಾಜವನ್ನು ಇನ್ನೂ ಎತ್ತರಕ್ಕೇರಿಸಲು ದುಡಿಯೋಣ ಎಂದರು.
ಜಯಶ್ರೀ ಶೆಟ್ಟಿ, ಪ್ರಭಾ ಶೆಟ್ಟಿ ಮತ್ತು ಸಂಧ್ಯಾ ಶೆಟ್ಟಿ ಯವರು ಪ್ರಾರ್ಥನೆಯೊಂದಿಗೆ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಜಾಗತಿಕ ಭಂಟರ ಸಂಘದ ಒಕ್ಕೂಟ ದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಕಲ್ಪವೃಕ್ಷದ ಪಿಂಗಾರವನ್ನು ಅರಳಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಜಾಗತಿಕ ಭಂಟರ ಸಂಘದ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು, ಗೌರವ ಅತಿಥಿಗಳಾಗಿ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರು, ಜವಾಬ್ ಅಧ್ಯಕ್ಷರಾದ ಸಿಎ ಐ. ಆರ್. ಶೆಟ್ಟಿಯವರು, ಮುಲೂಂಡ್ ಬಂಟ್ಸನ ಅಧ್ಯಕ್ಷರಾದ ವಸಂತ ಶೆಟ್ಟಿ ಪಾಲಿಮಾರ್, ಪಶ್ಚಿಮ ವಲಯದ ಸಮನ್ವಯಕರಾದ ಡಾ. ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಬೊಯಿಸರ್ ಹೋಟೇಲ್ ಸರೋವರ್ ನ ರಘುರಾಮ ರೈ, ಬಂಟರವಾಣಿ ಸಂಪಾದಕ ಪ್ರೇಮನಾಥ ಮುಂಡ್ಕೂರು ಮತ್ತು ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಮಾಹಿ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗೌರವ ಅತಿಥಿ ಅಶೋಕ ಶೆಟ್ಟಿ ಪೆರ್ಮುದೆ, ಅಶೋಕ್ ಹೆಗ್ಡೆ ಕಿನ್ನಿಗೋಳಿ, ಸಾಯಿ ಪೇಲೇಸ್ ಹೋಟೇಲಿನ ಸಿಎಂಡಿ ರವಿ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ, ಸಂಘದ ಕೋಶಾಧಿಕಾರಿ ಪ್ರವೀಣ್ ಬೋಜ ಶೆಟ್ಟಿ, ಜೊತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಯುವ ವಿಭಾಗದ ಕಾರ್ಯಧ್ಯಕ್ಷ ಶರತ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪಾಂಡು ಎಲ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಶಂಕರ ಕೆ ಆಳ್ವ, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ವಿಜಯ ಎಂ ಶೆಟ್ಟಿ, ಜೊತೆ ಕಾರ್ಯದರ್ಶಿ ಜೆ. ಡಿ. ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಷ್ ಶೆಟ್ಟಿ, ಹರೀಶ್ ಶೆಟ್ಟಿ ಗುರ್ಮೆ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಜಯ ಎ. ಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷ ಸುಪ್ರೀತ್ ಶೆಟ್ಟಿ, ಪ್ರೋಗಾಂ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಎ. ಶೆಟ್ಟಿ. ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಜಯಂತ ಪಕ್ಕಳ ಇವರು ಎಲ್ಲರನ್ನೂ ಸ್ವಾಗತಿಸಿದರು. ಕರ್ನೂರು ಮೋಹನ ರೈ ಮತ್ತು ವಿಜಯ್ ಶೆಟ್ತಿ ಕುತ್ತೆತ್ತೂರು ನಿರ್ವಹಿಸಿದರು.
ಸಂಜೆ ಸಮಾರೋಪ ಸಮಾರಂಭದಲ್ಲಿ ಬಂಜಾರಾ ಗ್ರೋಪ್ ನ ಸಿ.ಎಂ.ಡಿ. ಪ್ರಕಾಶ್ ಶೆಟ್ಟಿ, ಭವಾನಿ ಶಿಪ್ಪಿಂಗ್ ನ ಸಿಎಂಡಿ ಕೆ.ಡಿ. ಶೆಟ್ಟಿ, ಬಂಟರ ಸಂಘ ಪುಣೆ ಇದರ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ, ಬಂಟ್ಸ ಸಂಘ ಪಡುಬಿದ್ರೆ ಇದರ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಬಂಟರವಾಣಿ ಯ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿ , ಬಂಟ್ಸ ಸಂಘ ಪಡುಬಿದ್ರೆ ಇದರ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಗುಜರಾಥ್ ಅಂಕಲೇಶ್ವರದ ಉದ್ಯಮಿ ರವಿನಾಥ ವಿ ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ಬಂಟರವಾಣಿ ಯ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿ, ಬಂಟರ ಸಂಘ ಮುಂಬಯಿಯ ಟ್ರಷ್ಟಿ ರಘುರಾಮ ಶೆಟ್ಟಿ, ಕೃಷ್ಣ ಪೇಲೇಶ್ ನ ಸಿ.ಎಮ್.ಡಿ. ಕೃಷ್ಣ ವೈ ಶೆಟ್ಟಿ, ಏಶ್ಯನ್ ಬೋಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗಳಿಸಿದ ರೋಹಿತ್ ಡಿ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಅಶೋಕ ಪಕ್ಕಳ ಮತ್ತು ಪ್ರವೀಣ್ ಶೆಟ್ಟಿ ಕಣಂಜಾರು ಸಮಾರೊಪ ಸಮಾರಂಭವನ್ನು ನಿರ್ವಹಿಸಿದರು.
ಬೆಳಿಗ್ಗೆ ಮಹಿಳೆಯರಿಂದ ಭಜನೆ, ವಿಜಯ ಶೆಟ್ಟಿಯವರಿಂದ ಗಾಯನ ನಂತರ ನೃತ್ಯ ಕಾರ್ಯಕ್ರಮ ಯಕ್ಷಧ್ರುವ ಪಟ್ಲಗುತ್ತು ಸತೀಷ್ ಶೆಟ್ಟಿಯವರ ನಿರ್ದೇಶನದಲ್ಲಿ ಯಕ್ಷಗಾನ-ನಾಟ್ಯ-ಹಾಸ್ಯ ವೈಭವ, ಜಾನಪದ ನೃತ್ಯ, ಗಣೇಶ್ ಎರ್ಮಾಳ್ ರಿಂದ ಸಂಗೀತ ರಸಸಿಂಚನ, ಕುದ್ರೋಳಿ ಗಣೇಶ್ ಅವರಿಂದ ಮಸ್ತ್ ಮ್ಯಾಜಿಕ್ ಪ್ರದರ್ಶನವಿತ್ತು.