ಬಂಟ್ವಾಳ: ತಲವಾರು ದಾಳಿ ಮೂವರ ಸೆರೆ
ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆ ಅಶೋಕ ಹೋಟೆಲ್ ಬಳಿ ಇದೇ 11ರಂದು ಸೋಮವಾರ ಮಧ್ಯಾಹ್ನ ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸುರೇಂದ್ರ ಭಂಡಾರಿ ಸಹಿತ ಮೂವರನ್ನು ಮಂಗಳೂರಿನಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆರೋಪಿಗಳನ್ನು ಬಂಟ್ವಾಳ ಭಂಡಾರಿಹಿತ್ಲು ನಿವಾಸಿ ನಟ ಸುರೇಂದ್ರ ಭಂಡಾರಿ ಮತ್ತು ಸತೀಶ ಕುಲಾಲ್ ಎಂದು ಗುರುತಿಸಲಾಗಿದೆ. ಇವರನ್ನು ಮಂಗಳೂರಿನ ಪಚ್ಚಿನಡ್ಕ ಎಂಬಲ್ಲಿ ಬಂಧಿಸಲಾಗಿದ್ದು, ಇವರಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಜಗನ್ನಾಥ ಶೆಟ್ಟಿ ಎಂಬವರ ಪುತ್ರ ಪೃಥ್ವಿರಾಜ್ ಶೆಟ್ಟಿ ಎಂಬಾತನನ್ನು ಕೇರಳದ ಕುಂಬ್ಳೆ ಎಂಬಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಗಣೇಶ ರೈ, ಪುಷ್ಪರಾಜ್, ಮನೋಜ್ ಮತ್ತಿತರರ ಮೇಲೆ ಇವರು ತಲವಾರು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಹಿಂದಿನ ದಿನ ಭಾನುವಾರ ರಾತ್ರಿ ಬಂಟ್ವಾಳ ಬೈಪಾಸ್ ಎಂಬಲ್ಲಿ ಸುರೇಂದ್ರ ಭಂಡಾರಿ ಸಂಬಂಧಿ ದೀಕ್ಷಿತ್ ಎಂಬ ಯುವಕನಿಗೆ ಬಿಜೆಪಿ ಕಾರ್ಯಕರ್ತ ಎನ್ನಲಾದ ಭುವಿತ್ ಶೆಟ್ಟಿ ಮತ್ತಿತರರು ಹಲ್ಲೆ ನಡೆಸಿದ್ದರು ಎಂದು ಪ್ರಕರಣ ದಾಖಲಾಗಿತ್ತು.
ಬಂಟ್ವಾಳ ಡಿವೈಎಸ್ಪಿ ಕುಮಾರ್ ನೇತೃತ್ವದದಲ್ಲಿ ನಡೆದ ಈ ಕಾಯರ್ಾಚರಣೆಯಲ್ಲಿ ಡಿಸಿಐಬಿ ಇನ್ಸ್ಪೆಕ್ಟರ್ ಸುನಿಲ್ ನಾಯಕ್, ಬಂಟ್ವಾಳ ನಗರ ಠಾಣಾಧಿಕಾರಿ ಚಂದ್ರಶೇಖರ್, ಕೈಂ ಎಸೈ ಹರೀಶ್, ಸಂಚಾರಿ ಠಾಣೆ ಎಸ್ಐ ಎಲ್ಲಪ್ಪ, ಗ್ರಾಮಾಂತರ ಠಾಣಾಧಿಕಾರಿ ಎಂ.ಪ್ರಸನ್ನ, ಡಿಸಿಐಬಿ ಸಿಬ್ಬಂದಿಗಳಾದ ಉದಯ ರೈ, ಪ್ರವೀಣ್, ಇಕ್ಬಾಲ್, ಗಿರೀಶ್, ಮುರುಗೇಶ್, ನಝೀರ್, ಉಮೇಶ್, ಕುಮಾರ್, ಮಲ್ಲಿಕ್ ಸಾಬ್, ಧನ್ಯ, ಪ್ರಶಾಂತ್, ಕೇದಾರ, ಹನುಮಂತು, ದಿವಾಕರ ಇದ್ದರು. ಈ ತಂಡಕ್ಕೆ ಎಸ್ಪಿ ರವಿಕಾಂತೇ ಗೌಡ ಬಹುಮಾನ ಘೋಷಿಸಿರುವುದಾಗಿ ಪ್ರಕಟಿಸಿದ್ದಾರೆ.