ಬಂಟ್ವಾಳ; ಪರವಾನಿಗೆ ಇಲ್ಲದ ರಿಕ್ರಿಯೇಶನ್ ಕ್ಲಬ್ಬಿಗೆ ದಾಳಿ- 70 ಮಂದಿ ಬಂಧನ
ಮಂಗಳೂರು: ಪರವಾನಿಗೆ ಇಲ್ಲದೆ ನಡೆಸುತ್ತಿದ್ದ ರಿಕ್ರಿಯೇಶನ್ ಕ್ಲಬ್ ಒಂದಕ್ಕೆ ಬಂಟ್ವಾಳ ಪೊಲೀಸರು ದಾಳಿ ನಡೆಸಿ 70 ಮಂದಿಯನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.
ಶನಿವಾರ ಬಂಟ್ವಾಳ ಪಾಣೆ ಮಂಗಳೂರು ಪ್ರಸನ್ನ ಕಾಂಪ್ಲೆಕ್ಸ್ ನಲ್ಲಿರುವ ಬಂಟ್ವಾಳ ರಿಕ್ರಿಯೇಶನ್ ಕ್ಲಬ್ಬಿನಲ್ಲಿ ಅನಧಿಕೃತವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿರುವ ಕುರಿತು ಬಂದ ಮಾಹಿತಿಯನ್ವಯ ಬಂಟ್ವಾಳ ನ್ಯಾಯಾಧಿಶರ ಅನುಮತಿ ಪಡೆದು ಬಂಟ್ವಾಳ ಎಎಸ್ಪಿ ಹಾಗೂ ಬಂಟ್ವಾಳ ಸಂಚಾರ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬಂದಿಗಳ ಜೊತೆ ದಾಳೀ ನಡೆಸಿದ್ದಾರೆ.
ದಾಳಿಯ ವೇಳೆ ಕ್ಲಬ್ ನಡೆಸುತ್ತಿದ್ದ ಮ್ಯಾನೇಜರ್ ಕಾಸರಗೋಡು ಮಂಜೇಶ್ವರ ನಿವಾಸಿ ಸಾಯಿ ಕಿರಣ್ ಅವರಲ್ಲಿ ಪರವಾನಿಗೆ ಕೇಳಿದ ವೇಳೆ ಪರವಾನಿಗೆ ಇಲ್ಲದಿರುವುದು ಕಂಡು ಬಂದಿದ್ದು ಉಚ್ಚ ನ್ಯಾಯಾಲಯದ ನಿಯಮಗಳನ್ನು ಉಲ್ಲಂಘಿಸಿ ಜೂಜಾಟ ನಡೆಸುತ್ತಿರುವುದು ಕಂಡು ಬಂದಿದೆ.
ಬಳಿಕ ಪಂಚರ ಸಮಕ್ಷಮ ಜೂಜಾಟ ಆಡಲು ಪಣಕ್ಕಿಟ್ಟಿದ್ದ ರೂ 72100 ಹಾಗೂ 1 ಲಕ್ಷ ಮೌಲ್ಯದ ವಿವಿಧ ಕಂಪೆನಿಯ 51 ಮೊಬೈಲ್, ಒಂದು ಪೆನ್ನು, 52 ಇಸ್ಪಿಟ್ ಎಲೆಗಳು, 2 ಡಿವಿಆರ್, ಒಂದು ರೌಂಡ್ ಟೇಬಲ್, 7 ಕುರ್ಚಿಗಳು ಹಾಗೂ ಮ್ಯಾನೇಜರ್ ಸೇರಿ 70 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.