ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪ್ರಶಸ್ತಿ-2017 ನಾಮ ನಿರ್ದೇಶನಕ್ಕೆ ಆಹ್ವಾನ
ಮಂಗಳೂರು: ವಿಶ್ವ ಕೊಂಕಣಿ ಸರದಾರ ಶ್ರೀ ಬಸ್ತಿ ವಾಮನ ಶೆಣೈಯವರು 80 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ, ಶಕ್ತಿನಗರ, ಮಂಗಳೂರು ಸಂಸ್ಥೆಯು ಶ್ರೀ ಶೆಣೈಯವರ ಹೆಸರಿನಲ್ಲಿ ಎರಡು ಪ್ರಶಸ್ತಿಗಳನ್ನು ಕೊಡಮಾಡಲು ನಿರ್ಧರಿಸಿದೆ. ಕೊಂಕಣಿ ಭಾಷಿಕರಾಗಿ, ಶೈಕ್ಷಣಿಕ, ಆರೋಗ್ಯ, ವೈದ್ಯಕೀಯ, ಸಾಮಾಜಿಕ ವಿಜ್ಞಾನ ಅತ್ಯುನ್ನತ ಸಾಧನೆಗೈದ ವ್ಯಕ್ತಿ ಮಾತ್ರವಲ್ಲದೇ ಕೊಂಕಣಿ ಭಾಷಿಕರಿಂದ ಸ್ಥಾಪಿಸಲಾದ ಶಿಕ್ಷಣ ಸಂಸ್ಥೆ, ಕೊಂಕಣಿ ಭಾಷಿಕರ ಆಡಳಿತವಿರುವ ಸಂಸ್ಥೆಗಳು, ಸಮಾಜ ಸೇವೆ, ಆರೋಗ್ಯ, ವಿಜ್ಞಾನ, ಪತ್ರಿಕಾರಂಗ, ಕಲೆ, ವಾಣಿಜ್ಯೋದ್ಯಮ, ಕ್ರೀಡೆ, ಈ ಎಲ್ಲಾ ಕ್ಷೇತ್ರಗಳನ್ನೊಳಗೊಂಡಿದೆ. 2020 ಇಸವಿಯ ವೇಳೆಗೆ ಕೊಂಕಣಿ ಸಮಾಜವನ್ನು ಒಂದು ಬಲಿಷ್ಠ ಸಮಾಜವಾಗಿ ಪರಿವರ್ತಿಸಬೇಕೆಂದು ಕನಸು ಕಂಡ ಶ್ರೀ ಟಿ. ಮೋಹನದಾಸ ಪೈಯವರು ಈ ಪ್ರಶಸ್ತಿಗಳನ್ನು ಸ್ಥಾಪಿಸಿರುತ್ತಾರೆ. ಮೇಲೆ ಕಾಣಿಸಿದ 2 ಪ್ರಶಸ್ತಿಗಳು ತಲಾ 1.00 ಲಕ್ಷ ರೂಪಾಯಿಗಳನ್ನು ಹೊಂದಿರುತ್ತದೆ. ಪುರುಷರಿಗೆ ಹಾಗೂ ಮಹಿಳೆಯರಿಗಾಗಿ ತಲಾ ಒಂದು ಪ್ರಶಸ್ತಿಯನ್ನು ಪ್ರಮಾಣಪತ್ರದೊಂದಿಗೆ ಪ್ರಶಸ್ತಿಪ್ರದಾನಮಾಡಲಾಗುತ್ತದೆ.
ನಾಮಸೂಚನೆಗೆ ಈ ಕೆಳಗಿನ ನಿಯಮಗಳು ಅನ್ವಯಿಸುತ್ತವೆ.
ನಾಮನಿರ್ದೇಶನಗೊಂಡವರು ಕೊಂಕಣಿಮಾತೃಬಾಷೆಯಾಗಿರುವ ಏಕ ವ್ಯಕ್ತಿಯಾಗಿರಬಹುದು ಅಥವಾ ಒಂದು ಕೊಂಕಣಿ ಸಂಸ್ಥೆಯಾಗಿರಲೂಬಹುದು. ಮತ್ತು 18ವರ್ಷಕ್ಕೆ ಮೇಲ್ಪಟ್ಟಿರಬೇಕು. ನಾಮ ನಿರ್ದೇಶಿತ ಸಂಸ್ಥೆಗಳು ಕೊಂಕಣಿ ಮಾತೃಭಾಷಿಕರ ಆಡಳಿತಕ್ಕೊಳಪಟ್ಟಿರಬೇಕು ಮತ್ತು ಅವುಗಳ ಸ್ಥಾಪಕರು ಕೊಂಕಣಿಭಾಷಿಕರಾಗಿರಬೇಕು. ನಾಮ ನಿರ್ದೇಶನದ ಸಂದರ್ಭ ಕನಿಷ್ಠ 5 ವರ್ಷದಿಂದ ಅಸ್ತಿತ್ವದಲ್ಲಿ ಇರಬೇಕಾಗುತ್ತದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು ಸ್ವತ: ತಮ್ಮ ಬಗ್ಗೆ ನಾಮನಿರ್ದೇಶನ ಮಾಡಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು www.vishwakonkani.org ಅಂತರ್ಜಾಲದಿಂದ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು “ಅಧ್ಯಕ್ಷರು, ಬಿ.ವಿ.ಎಸ್ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಆಯ್ಕೆ ಸಮಿತಿ, ವಿಶ್ವ ಕೊಂಕಣಿ ಕೇಂದ್ರ, ಲೊಬೊ ಪ್ರಭು ನಗರ ಕೊಂಕಣಿ ಗಾಂವ, ಶಕ್ತಿನಗರ, ಮಂಗಳೂರು-575 016’’ ಈ ವಿಳಾಸಕ್ಕೆ ದಿನಾಂಕ 20-09-2017 ರ ಒಳಗೆ ಕಳುಹಿಸಿ ಕೊಡತಕ್ಕದ್ದು.