ಬಾಂಬ್ ಷಡ್ಯಂತ್ರವನ್ನು ಬಯಲಿಗೆಳೆಯಲು ಎಸ್ ಡಿ ಪಿ ಐ ವತಿಯಿಂದ ಪ್ರತಿಭಟನೆ
ಮಂಗಳೂರು :- ಮಂಗಳೂರಿನ ಬಾಂಬ್ ಪ್ರಕರಣವನ್ನು ಬಯಲಿಗೆಳೆಯದೆ ಪ್ರಕರಣವನ್ನು ಸರಕಾರ, ಪೊಲೀಸರು ಮತ್ತು ಕೆಲ ಮಾಧ್ಯಮಗಳು ಮುಚ್ಚುಹಾಕಲು ಪ್ರಯತ್ನಿಸುತ್ತಿರುವುದರ ವಿರುದ್ಧ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಜಿನಾಮೆಗೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ವತಿಯಿಂದ ಇಂದು ಜಿಲ್ಲೆಯ 9 ಕಡೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾದ ವಿಚಾರ ಅಘಾತಕಾರಿಯಾಗಿದೆ. ಪ್ರತಿಯೊಂದನ್ನೂ ಎಳೆ ಎಳೆಯಾಗಿ ಸೂಕ್ಷ್ಮದಿಂದ ಪರೀಕ್ಷಿಸುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಬ್ಯಾಗ್ ನಲ್ಲಿ ಬಾಂಬ್ ಅನ್ನು ಹೇಗೆ ಆದಿತ್ಯರಾವ್ ಎಂಬುವವನು ಒಳಗೆ ಕೊಂಡು ಹೋದ?ನಿಜಕ್ಕೂ ಇದು ಅಲ್ಲಿನ ಪೊಲೀಸ್ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆಯ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯತನ.ಧರ್ಮಕ್ಕೆ ಅನುಗುಣವಾಗಿ ಆರೋಪಿಯ ಲೇಬಲ್ ಬದಲಾಗುತ್ತಿದೆ.ಒಬ್ಬ ಬಿ ಇ ಇಂಜಿನಿಯರ್ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ,ವಿವಿದ ಆಯಾಮಗಳಲ್ಲಿ ಕೆಲಸ ಮಾಡಿದ ಭಯೋತ್ಪಾದಕ ಆದಿತ್ಯ ರಾವ್ ಕೆಲ ಮಾಧ್ಯಮದವರಿಗೆ ಮಾನಸಿಕ ಅಸ್ವಸ್ಥನಾದ. ಇತ್ತ ಕಡೆಯಲ್ಲಿ ರಾಜ್ಯವನ್ನು ಆಳುವ ಬಸವರಾಜ್ ಬೊಮ್ಮಾಯಿ ,ಪ್ರಹ್ಲಾದ್ ಜೋಷಿ ಮುಂತಾದ ರಾಜಕಾರಣಿಗಳು ತನಿಖೆಗೆ ಮೊದಲೇ ಇದು ಮಂಗಳೂರಿನ ಗೋಲಿಬಾರ್ ಪ್ರಕರಣದ ಪ್ರತಿಭಟನಾಕಾರರು ಮಾಡಿರುವ ಕೃತ್ಯವಾಗಿರಬಹುದು ಹಾಗೂ ಇನ್ನಿತರ ಇಲ್ಲಸಲ್ಲದ ಬೇಜವಾಬ್ದಾರಿತನದ ಮಾತುಗಳನ್ನು ಆಡುತ್ತಿದ್ದಾರೆ.ಇದನ್ನೆಲ್ಲಾ ಗಮನಿಸುವಾಗ ಪ್ರಕರಣದ ದಿಕ್ಕನ್ನು ಬದಲಾಯಿಸುವ ಕುತಂತ್ರ ಎಂದು ಅರಿವಾಗುತ್ತಿದೆ. “ಪ್ರಕರಣವನ್ನು ಕುಲಂಕುಷ ತನಿಖೆ ಮಾಡಿ ಇದರ ಹಿಂದಿರುವ ಜಾಲವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರು ರಾಜ್ಯ ಗೃಹ ಮಂತ್ರಿ ಆರೋಪಿ ಮಾನಸಿಕ ಅಸ್ವಸ್ಥ ಎಂಬ ಹೇಳಿಕೆ ನೀಡಿದ್ದು ಇದು ತನಿಖೆಯ ದಾರಿ ತಪ್ಪಿಸುವ ಕೆಲಸವಾಗಿ ಆದುದರಿಂದ ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.
ಪ್ರತಿಭಟನೆಯು ಜಿಲ್ಲೆಯ ಸುಳ್ಯ,ಪುತ್ತೂರು, ಬಂಟ್ವಾಳ, ನೆಲ್ಯಾಡಿ,ಬೆಳ್ತಂಗಡಿ, ಸುರತ್ಕಲ್, ಕೆಂಜಾರು,ಮಂಗಳೂರು ನಗರ,ದೇರಳಕಟ್ಟೆ ಯಲ್ಲಿ ಅಸೆಂಬ್ಲಿಯ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ರಾಜ್ಯ ಕಾರ್ಯದರ್ಶಿ ಆಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯ ಜಲೀಲ್ ಕೆ,ಜಿಲ್ಲಾ ಪ್ರ ಕಾರ್ಯದರ್ಶಿ ಶಾಹುಲ್ ಎಸ್ ಎಚ್,ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಆಶ್ರಫ್ ಮಂಚಿ, ಜಾಬಿರ್ ಅರಿಯಡ್ಕ, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ,ಝಾಹಿದ್ ಮಲಾರ್, ಮುನೀಬ್ ಬೆಂಗ್ರೆ, ಹಾರಿಸ್,ಅಬೂಬಕ್ಕರ್ ಕುಲಾಯಿ,ಸಾದಿಕ್ ನೆಲ್ಯಾಡಿ ಮೊದಲಾದವರು ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು,ಹಿತೈಶಿಗಳು,ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.