ಬಾರ್ ತೆರೆದಿದೆ, ದೇವಸ್ಥಾನ ಯಾಕೆ ತೆರೆದಿಲ್ಲ? – ಇದನ್ನು ಓದಿ
ಮಂಜು ನೀರೇಶ್ವಾಲ್ಯ
ಮಂಗಳೂರು: ಕೆಲವರು ಬಾರ್ ತೆರೆದಿದೆ, ದೇವಸ್ಥಾನ ಯಾಕೆ ತೆರೆಯಲ್ಲ ಎಂಬ ವಾದ ಮಾಡುತಿದ್ದರೆ, ಸ್ವಲ್ಪ ಸಯ್ಯಮದಿಂದ ವರ್ತಿಸಿ ಎನ್ನುತ್ತಾರೆ ಮಂಜು ನೀರೇಶ್ವಾಲ್ಯ.
ಹೌದು ದೇವಸ್ಥಾನಕ್ಕೂ “ ಬಾರಿಗೂ ತುಂಬ ವ್ಯತ್ಯಾಸವಿದೆ . ಬಾರಿನಲ್ಲಿ ಕೊರೋನಾ ಸೋಂಕಿತ ಬಂದರೆ ಜಿಲ್ಲಾ ಆಡಳಿತ ಕ್ವಾರಂಟೈನ್ ಮಾಡುತದೆ ಇದರಿಂದ ತುಂಬ ವ್ಯತ್ಯಾಸ ಆಗಲ್ಲ , ಆದರೆ ದೇವಸ್ಥಾನ ಕ್ವಾರಂಟೈನ್ ಆದರೆ ಸಂಪೂರ್ಣ ದೇವಳದ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುತ್ತೆ ಇದು ತಿಳಿದಿರಲಿ ದೇವಳದ ಅರ್ಚಕರು , ಸಿಬ್ಬಂದಿ ವರ್ಗ , ಆಡಳಿತ ಮಂಡಳಿ ಕ್ವಾರಂಟೈನ್ ಆದರೆ ನಮ್ಮೆಲ್ಲರ ಶ್ರದ್ಧೆಯ ದೇವರ ಪೂಜೆ ನಡೆಸುವವರು ಯಾರು ? ಸ್ವಲ್ಪ ಯೋಚಿಸಿ !
ನಾವುಗಳು ಕೈ ಮುಗಿದು ಬೇಡಿಕೊಂಡು ಹೋಗುತ್ತೇವೆ ದೇವರ ದಿನ ನಿತ್ಯದ ಪೂಜಾ ವಿಧಿ ವಿಧಾನಗಳನ್ನು ಮಾಡುವವರು ಯಾರು? ಸ್ವಲ್ಪ ಆಲೋಚಿಸಿ ನಾನು ಬರೆದಿರುವುದರಲ್ಲಿ ತಪ್ಪಿದಲ್ಲಿ ಸರಿಪಡಿಸಿ , ಇಲ್ಲದಿದ್ದರೆ ಸ್ವಲ್ಪ ಸಮಯ ದೇವರನ್ನು ಮನೆಯಲ್ಲೇ ಪೂಜಿಸೋಣ ! ಅತ್ಯಂತ ಬೇಗ ಈ ಮಹಾ ಮಾರಿಯಿಂದ ನಮ್ಮ ವಿಶ್ವ ವನ್ನೇ ರಕ್ಷಿಸು ಎಂದು ದೇವರಲ್ಲಿ ಪ್ರಾರ್ಥಿಸೋಣ