ಬಾರ್ಕೂರಿನ ನಂದರಾಯನ ಕೋಟೆಯಲ್ಲಿ ಅದ್ದೂರಿಯ ಆಳುಪೋತ್ಸವಕ್ಕೆ ಚಾಲನೆ

Spread the love

ಬಾರ್ಕೂರಿನ ನಂದರಾಯನ ಕೋಟೆಯಲ್ಲಿ ಅದ್ದೂರಿಯ ಆಳುಪೋತ್ಸವಕ್ಕೆ ಚಾಲನೆ

ಉಡುಪಿ: ಸುಮಾರು 1000 ಕ್ಕೂ ಅಧಿಕ ವರ್ಷಗಳ ಕಾಲ ಆಳ್ವಿಕೆ ಮಾಡಿದ ಆಳುಪ ರಾಜ ಮನೆತನದ ರಾಜಧಾನಿಯಾಗಿದ್ದ ಬಾರಕೂರನ್ನು ರಾಜ್ಯದ ಪ್ರಮುಖ ಪ್ರವಾಶಿ ತಾಣವನ್ನಾಗಿ ಮಾಡಲು ರಾಜ್ಯ ಸರ್ಕಾರದಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಆಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.

ಅವರು ಶುಕ್ರವಾರ, ಜಿಲ್ಲಾಡಳಿತ, ಪ್ರವಾಸೋಧ್ಯಮ ಇಲಾಖೆ,ಕನ್ನಡ ಮತ್ತು ಸಂಸ್ಕøತಿ ಇಲಖೆ ಮತ್ತು ತೋಟಗಾರಿಕಾ ಇಲಖೆ ಸಹಯೋಗದಲ್ಲಿ ಬಾರ್ಕೂರಿನ ನಂದರಾಯನ ಕೋಟೆಯಲ್ಲಿ ಏರ್ಪಡಿಸಿದ್ದ ಆಳೋಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದರು.

ರಾಜ್ಯದ ಇತಿಹಾಸ, ಕಲೆ , ಸಂಸ್ಕøತಿಗೆ ಮಹತ್ತರವಾದ ಕೊಡುಗೆ ನೀಡಿದ ಮಹನೀಯರನ್ನು , ರಾಜಮನೆತನದವರನ್ನು ನೆನೆಯುವುದು ಅಗತ್ಯ, ಇದೇ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ರಾಜ್ಯದ ವಿವಿಧ ಭಾಗದಲ್ಲಿ ಸ್ಥಳಿಯ ಇತಿಹಾಸ ಸಂಸ್ಕøತಿ ಪ್ರತಿಬಿಂಬಿಸುವ, ಚಾಲುಕ್ಯ ಉತ್ಸವ, ಲಕ್ಕುಂಡಿ ಉತ್ಸವ, ಹಂಪಿ ಉತ್ಸವ, ಕರಾವಳಿ ಉತ್ಸವ, ಕದಂಬೋತ್ಸವ ಮುಂತಾದ ಉತ್ಸವಗಳನ್ನು ಆಯೋಜಿಸಲಾಗುತ್ತಿದ್ದು, 1000 ಕ್ಕೂ ಅಧಿಕ ಕಾಲ ತುಳು ನಾಡನ್ನು ಆಳ್ವಿಕೆ ಮಾಡಿ ಇಲ್ಲಿನ ವಿಶಿಷ್ಠ ಕಲೆ ಸಂಸ್ಕøತಿ ಬೆಳವಣಿಗೆಗೆ ಮಹತ್ತರವಾದ ಕೊಡುಗೆ ನೀಡಿರುವ ಆಳುಪ ರಾಜರ ಕುರಿತಂತೆ ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಆಳೋಪೋತ್ಸವವನ್ನು ಆಚರಿಸುವ ಕುರಿತಂತೆ , ಧ್ವನಿ ಬೆಳಕು ಕಾರ್ಯಕ್ರಮದ ಮೂಲಕ ಬಾರಕೂರು ಇತಿಹಾಸ ನೆನಪಿಸುವ ಮತ್ತು ಬಾರಕೂರನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸಿ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದರ ಮೂಲಕ ಇಲ್ಲಿನ ಯುವಜನತೆಗೆ ಉದ್ಯೋಗವಕಾಶ ಕಲ್ಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಡಾ. ಜಯಮಾಲಾ ಹೇಳಿದರು.

ವಿಧನ ಪರಿಷತ್ ವಿರೋದಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಮೊದಲ ಬಾರಿಗೆ ಆಳುಪರ ಇತಿಹಾಸವನ್ನು ಪರಿಚಯಿಸುವ ಈ ಆಳೂಪೋತ್ಸವ ಆಚರಣೆ ಪ್ರತಿವರ್ಷ ವಿಜೃಂಬಣೆಯಿಂದ, ಯೋಜನಾಬದ್ಧವಾಗಿ ನಡೆಯಲಿ,ಬಾರಕೂರಿನ ಕೋಟೆ, ಬಸದಿಗಳು, ದೇವಾಲಯಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುವುದರ ಮೂಲಕ , ಆಳುಪರ ಆಳ್ವಿಕೆಯ ಹೆಚ್ಚಿನ ಇತಿಹಾಸ ಇಂದಿನ ಯುವ ಪೀಳಿಗೆಗೆ ದೊರೆಯಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಬಾರ್ಕೂರು ಗ್ರಾ.ಪಂ. ಅಧ್ಯಕ್ಷೆ ಶೈಲಜ ಡಿಸೋಜಾ, ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಜಿ.ಪಂ. ಸಿಇಓ ಸಿಂಧೂ ಬಿ ರೂಪೇಶ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕನ್ನಡ ಮತ್ತು ಸಂಸ್ಕøತಿ ಇಲಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಬಾರ್ಕೂರು ಸಂಸ್ಥಾನದ ಅಧ್ಯಕ್ಷ ಡಾ. ವಿಶ್ವ ಸಂತೋಷ ಭಾರತಿ ಗುರೂಜಿ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷ ಮನೋಹರ್ ಶೆಟ್ಟಿ, ಬಾರ್ಕೂರು ಶಾಂತಾರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಖೆ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ವಂದಿಸಿದರು. ಗಣೇಶ್ ಪ್ರಸಾದ್ ಬೆಂಗಳೂರು ನಿರೂಪಿಸಿದರು.

ಬಾರ್ಕೂರಿನ ಸಿಂಹಾಸನ ಗುಡ್ಡೆಯಿಂದ ಕೋಠೆಯ ವೇದಿಕೆ ವರೆಗೆ ವಿವಿಧ ಸಾಂಸ್ಕøತಿಕ ತಂಡಗಳಿಂದ ಹೆರಿಟೇಜ್ ವಾಕ್ ನಡೆಯಿತು. ಇದೇ ವೇಳೆ ಸಚಿವೆ ಜಯಮಾಲಾ ಅವರು ಯುವ ಉದ್ಯಮಿ ಸಂದೀಪ್ ಭಕ್ತ ನೇತೃತ್ವದ ಚಿಪ್ಸಿ ಸೊಲ್ಯೂಷನ್ ಸಂಸ್ಥೆಯ ವತಿಯಿಂದ ಉಡುಪಿ ಹೆರಿಟೇಜ್ ಎಂಬ ಆಂಡ್ರಾಯ್ಟ್ ಆ್ಯಪನ್ನು ಲೋಕಾರ್ಪಣೆಗೊಳಿಸಿದರು.


Spread the love