ಬಿ.ಬಿ.ಎಮ್.ಪಿ ಯಲ್ಲಿ ಕಾಂಗ್ರೇಸ್ ಪ್ರಜಾಪ್ರಭುತ್ವ ಮರೆತಿದ್ದದೇಕೆ ? ಐವಾನ್ಗೆ ಕೋಟಾ ತಿರುಗೇಟು
ಮಂಗಳೂರು: ಬೆಂಗಳೂರಿನ ಬಿ.ಬಿ.ಎಮ್.ಪಿ ಚುನಾವಣೆಯಲ್ಲಿ 100 ಸೀಟುಗಳನ್ನು ಗೆದ್ದು ಬಹುದೊಡ್ಡ ಪಕ್ಷವಾಗಿ ಗೆದ್ದು ಬಂದ ಬಿ.ಜೆ.ಪಿ ಅಧಿಕಾರ ಹಿಡಿಯುತ್ತದೆ ಎಂಬ ಭೀತಿಯಿಂದ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಒಟ್ಟಾಗಿ ಅಧಿಕಾರಿ ಪಡೆದಿದ್ದು , ಯಾವ ಪ್ರಜಾಪ್ರಭುತ್ವದ ಮಾದರಿಯಲ್ಲಿ ಎಂದು ಪ್ರಶ್ನಿಸಿ ಐವಾನ್ಗೆ ತೀರುಗೇಟು ನೀಡಿದ್ದಾರೆ. ಗೋವಾದಲ್ಲಿ ಕಾಂಗ್ರೇಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು , ಪಕ್ಷೇತರ ಶಾಸಕರ ಬೆಂಬಲದಿಂದ ಬಿ.ಜೆ.ಪಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುದನ್ನು ಪ್ರಜಾಪ್ರಭುತ್ವಕ್ಕೆ ಕೊಡಲಿಯೇಟು ಎಂದು ಕರೆದ ಐವಾನ್ ಡಿಸೋಜಾ ಹೇಳಿಕೆಯನ್ನು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಳೆದ ಬಾರಿ ದೆಹಲಿಯ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಹೊಂದಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಮ್ಆದ್ಮಿ ಪಕ್ಷ ಪಡೆದ 21 ಸೀಟುಗಳಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ದೆಹಲಿಯ ಗದ್ದುಗೆಗೆ ಅರವಿಂದ ಕೇಜ್ರಿವಾಲರನ್ನು ಮುಖ್ಯಮಂತ್ರಿಯಾಗಿ ಮಾಡಿ ಆಡಳಿತ ನಡೆಸಿದ್ದುದು ಐವಾನ್ ಮತ್ತು ಕಾಂಗ್ರೆಸ್ ಪಕ್ಷ ಮರೆತಿರಬಹುದು. ಅಂದು ಹೊಂದಾಣಿಕೆ ರಾಜಕಾರಣ ನಡೆಯುತ್ತಿದ್ದುದಾದರೇ ಅದೇ ಮಾದರಿಯಲ್ಲಿ ಗೋವಾ ಮತ್ತು ಮಣಿಪುರ ಜನರಿಂದ ಆಯ್ಕೆಯಾದ ಪಕ್ಷೇತರ ಶಾಸಕರ ಬೆಂಬಲ ಪಡೆದು ಅಧಿಕಾರ ನಡೆಸುವುದು ಜನತಂತ್ರ ವಿರೋಧಿ ಹೇಗೆ ಎಂದು ಪೂಜಾರಿ ಪ್ರಶ್ನಿಸಿದರು. ಮೋದಿ ಅಲೆಯಿಲ್ಲ ಎಂದು ಕಾಂಗ್ರೇಸ್ ಮುಖಂಡರು ಹೇಳುವ ಮಾತು, ಉತ್ತರ ಪ್ರದೇಶದಂತಹ ಬಹುದೊಡ್ಡ ರಾಜ್ಯದಲ್ಲಿ ಅಲ್ಪಸಂಖ್ಯಾತ ಮತದಾರರು ಬಿಜೆಪಿಯ ಕಡೆ ವಾಲಿದ್ದು, ಗೆಲುವಿನ ನಿರ್ಣಾಯಕ ಪಾತ್ರ ವಹಿಸಿದೆಂದು ರಾಜಕೀಯ ವಿಮರ್ಶಕರು ಅರ್ಥಮಾಡಿಕೊಳ್ಳುವರು. ಉತ್ತರ ಪ್ರದೇಶಚುನಾವಣೆಯಲ್ಲಿಯೂ ಅಪ್ನಾ ದಳಕ್ಕಿಂತ ಕಡಿಮೆ ಸ್ಥಾನ ಗಳಿಸಿರುವ ಕಾಂಗ್ರೆಸ್ , ಇನ್ನೂ ತನ್ನಲ್ಲಿ ರಾಜಕೀಯ ಶಕ್ತಿ ಉಳಿದುಕೊಂಡಿದೆ ಎಂದು ಭಾವಿಸುದಾದರೆ, ಐವಾನ್ರವರ ಹೇಳಿಕೆಗೆ ಅಭಿನಂದನೆಗಳು ಎಂದು ಕೋಟಾ ವ್ಯಂಗ್ಯಆಡಿದ್ದಾರೆ.
ನೋಟುಕೊಟ್ಟು ವೋಟು ಪಡೆಯುವ ಕಾಲ ರಾಜಕಾರಣದಲ್ಲಿ ಇಲ್ಲಿಯವರೆಗೆ ಮಾಮೂಲಿಯಾಯ್ತು. ಆದರೆ ದೇಶದ ಓಳಿತಿಗೋಸ್ಕರ ಮತ್ತು ಭಾರತದಆರ್ಥಿಕ ಸ್ಥಿತಿಯ ಬಲವರ್ದನೆಗೋಸ್ಕರ ನೋಟು ಅಮಾನ್ಯ ಮಾಡಿ ಓಟು ಗೆದ್ದಿರುವ ರಾಜಕಾರಣಿಯಾರಾದರೂ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಎಂಬ ಸತ್ಯವನ್ನು ಐವಾನ್ ಡಿಸೋಜರವರು ಬಹುಕಾಲ ಮುಚ್ಚಿಡಲು ಸಾಧ್ಯವಿಲ್ಲ.ಮುಂದಿನ ಚುನಾವಣೆಯಲ್ಲಿಯೂ ಸೋಲು-ಗೆಲುವು ನಿರ್ಧಾರವನ್ನು ಜನ ನೀಡಲಿದ್ದಾರೆ.ಆದರಿಂದು ಕಾಂಗ್ರೇಸ್ ಪಕ್ಷ ಸಂಪೂರ್ಣವಾಗಿ ಜನ ಹಿತ ಮರೆತಿದೆ. ಕುಡಿಯುವ ನೀರು, ಹಕ್ಕುಪತ್ರ ನೀಡಿಕೆ, ಗ್ರಾಮೀಣ ವಸತಿ ಹಂಚಿಕೆ, ಸರ್ಕಾರಿಆಸ್ಪತ್ರೆ ಅವ್ಯವಸ್ಥೆ, ಬಡವರ ಪಡಿತರಚೀಟಿರದ್ದತಿ ಈ ಎಲ್ಲಾ ಗೊಂದಲಗಳಿಂದ ರಾಜ್ಯದ ಜನತೆಯ ಬದುಕುದುಸ್ತರವಾಗಿರುವ ಮಟ್ಟಕ್ಕೆ ಇಂದಿನ ರಾಜ್ಯ ಸರ್ಕಾರದಚುಕ್ಕಾಣಿ ಹಿಡಿದ ಕಾಂಗ್ರೇಸ್ ಪಕ್ಷತಂದು ನಿಲ್ಲಿಸಿದೆ. ಡೈರಿಯ ಪ್ರಕರಣದಲ್ಲಂತೂ ಐವಾನ್ ಡಿಸೋಜರವರು ತಮ್ಮ ಪಕ್ಷವನ್ನು ಸಮರ್ತಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಒಟ್ಟಾರೆ ಆಡಳಿತ ನಡೆಸುವ ಕಾಂಗ್ರೇಸ್ ಪಕ್ಷ ಎಲ್ಲರನ್ನೂ ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ದೇಶದ ಪ್ರಧಾನಿಯನ್ನು ಟೀಕಿಸುವ ಬದಲು, ಜನಾದೇಶಕ್ಕೆ ತಲೆಬಾಗುವುದು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾಂಗ್ರೇಸಿನ ಗೌರವ ಹೆಚ್ಚುತ್ತದೆ ಎಂದು ಐವಾನ್ ಡಿಸೋಜರ ಹೇಳಿಕೆಗೆ ಕೋಟಾ ಶ್ರೀನಿವಾಸ ಪೂಜಾರಿಯವರು ಕಿವಿ ಮಾತು ಹೇಳಿದ್ದಾರೆ.
it was so simple, in total congress has majority and there were no need of any horse trade.