ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮೂರು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಆಗಿ ಉಳಿಯಲ್ಲ ; ನಟ ಪ್ರಕಾಶ್ ರೈ ಭವಿಷ್ಯ

Spread the love

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮೂರು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಆಗಿ ಉಳಿಯಲ್ಲ ; ನಟ ಪ್ರಕಾಶ್ ರೈ ಭವಿಷ್ಯ

ಉಡುಪಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮೂರು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಆಗಿ ಉಳಿಯಲ್ಲ ಅಂತ ನಟ ಪ್ರಕಾಶ್ ರೈ ಭವಿಷ್ಯ ನುಡಿದಿದ್ದಾರೆ. ಅವರು ಮಂಗಳವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಿಜೆಪಿಯವರು ಕಳೆದ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ಮಾಡಿ ರಾಜ್ಯದ ಮಾನವನ್ನೇ ಹರಾಜು ಹಾಕುವಂತ ಕೆಲಸ ಮಾಡಿದ್ದರು. ಕೇವಲ ಚುನಾವಣೇಯನ್ನು ಗೆಲ್ಲುವುದಕ್ಕಾಗಿ ಮಾತ್ರ ಯಡ್ಯೂರಪ್ಪರನ್ನು ಮುಖ್ಯಮಂತ್ರಿಯಾಗಿ ಬಿಂಬಿಸಲಾಗುತ್ತಿದೆ ಆದರೆ ರಾಜ್ಯದ ಪ್ರಜ್ಞಾವಂತರಾದ ಮತದಾರರು ಮತನೀಡುವುವಾಗ ಮಾತ್ರ ಯೋಚಿಸಿ ಮತ ನೀಡುತ್ತಾರೆ. ಬಿಜೆಪಿಯವರು ತೀಟೆತೀರಿಸ್ಕೊಳ್ಳೋದಕ್ಕೆ ಮತದಾರರಿಲ್ಲ, ಈ ದೇಶದ ಪ್ರಜೆಗಳುನಿರಂತರ ವಿಪಕ್ಷ ಆಗ್ಬೇಕು ಎಂದರು.

ಬಿಜೆಪಿ ಒಂದು ಪ್ರಾಣಾಂತಿಕ ಕಾಯಿಲೆ ,ಮೊದಲು ಆ ಸಮಸ್ಯೆ ಬಗೆಹರಿಸಬೇಕು. ಭಾರತ ಇನ್ನೊಂದು ಪಾಕಿಸ್ತಾನ ಆಗಬಾರದು ಎಂದರು. ರಾಜ್ಯದ ಜನ ಜಾಗೃತೆಯಿಂದ ಇರಿ , ಚುನಾವಣೆಗೆ ಮುನ್ನ ಗಲಭೆಯಾಗುವ ಸಾಧ್ಯತೆಯಿದೆ. ಅಮಿತ್ ಶಾ ಚುನಾವಣಾ ತಂತ್ರ ಮಾಡುತ್ತಿದ್ದಾರೆ ಅಂತ ಪ್ರಕಾಶ್ ರೈ ಹೇಳಿದ್ರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪನಿಗಿಂತ ಬೆಟರ್ ಮುಖ್ಯಮಂತ್ರಿ ಆಗಿದ್ದು ಕೊನೆಯ ಎರಡು ವರ್ಷ ಚೆನ್ನಾಗಿ ಕೆಲಸ ಮಾಡಿದ್ದಾರೆ ಅಂತ ಪ್ರಕಾಶ್ ರೈ ಕಾಂಗ್ರೆಸ್ ಸರಕಾರಕ್ಕೆ ಸರ್ಟಿಫಿಕೇಟ್ ನೀಡಿದರು.
ನಾನು ಹಿಂದೂ ವಿರೋಧಿಯಲ್ಲ ಯಾವ ಧರ್ಮದ ವಿರೋಧಿಯೂ ಅಲ್ಲ ಧರ್ಮ ಬೆಂಕಿ ಹಚ್ಚಬಾರದು, ದೀಪ ಉರಿಸಬೇಕು ಧರ್ಮದ ಹೆಸರಲ್ಲಿ ಸರ್ಕಾರ ಕಟ್ಟಬೇಡಿ ಎಂದ ರೈ ಸೆಕ್ಯೂಲರಿಸಂ ವಿದೇಶಿ ಸಂಸ್ಕೃತಿ ಭಾರತದಲ್ಲಿ ಹಲವು ಧರ್ಮಗಳಿವೆ ಭಾರತಕ್ಕೆ ಸೆಕ್ಯೂಲರಿಸಂ ಬೇಡ ಜನರು ಸಹಿಷ್ಣುತೆಯಿಂದ ಇರಬೇಕು ಎಂದರು.

ಸದಾ ಧರ್ಮದ ಬಗ್ಗೆ ಮಾತನಾಡುವ ಬಿಜೆಪಿಯವರು ಹಿಂದೂ ಧರ್ಮದ ಗುತ್ತಿಗೆ ಪಡ್ಕೊಂಡಿದ್ದೀರಾ ಸರ್ಕಾರ ರಚನೆ ಮಾಡಿದ ಮೇಲೆ ಧರ್ಮ, ಜಾತಿ ಯಾಕೆ? ಬೆಂಕಿ ಹಾಕುವ ಮಾತುಗಳು ಯಾಕೆ? ನನ್ನನ್ನು ಪಾಕಿಸ್ತಾನಕ್ಕೆ ಯಾಕೆ, ಬೇರೆ ದೇಶಕ್ಕೆ ಕಳುಹಿಸಿ ಪೆಟ್ರೋಲ್ ಏನು ಇವರುಗಳ ಮನೆಯ ಬಾವಿಯಿಂದ ಬರುತ್ತಾ? ಪೆಟ್ರೋಲ್ ಅರಬ್ ದೇಶದಿಂದ ಬರುತ್ತದೆ ಎಂದರು.

ಜನಪ್ರತಿನಿಧಿಗಳನ್ನು ಮಾತನಾಡಲು ಬಿಡಿ ಪ್ರಧಾನಿಯವರೇ ಯಾಕೆ ನಿಮ್ಮವರ ಬಾಯಿ ಮುಚ್ಚಿಸುತ್ತೀರಿ ಸಾಮಾಜಿಕ ಜಾಲತಾಣ ಚಾರಿತ್ರ್ಯಹರಣ ತಾಣವಾಗಿದೆ ಎಂದ ರೈ ಸಚಿವ ಅನಂತಕುಮಾರ್ ಹೆಗಡೆ ನಾಲಗೆ ತುದಿಯಲ್ಲಿ ಕೋಮುವಾದ ಇದೆ ಪ್ರತಾಪ್ ಸಿಂಹನ ಹೆಂಡತಿ ಬಗ್ಗೆ ಮಾತನಾಡಿದ್ರೆ ಸುಮ್ನಿರ್ತಾರಾ? ನನಗೆ ಯಾರ ಮಗ್ಗಲಲ್ಲಿ ಮಲಗಿ ಬಂದವರು ಅಂತ ಸಿಂಹ ಪ್ರಶ್ನೆ ಮಾಡಿದ್ದರು ಪ್ರತಾಪ್ ಸಿಂಹನಿಗೆ ಸಂಸ್ಕೃತಿಯೇ ಗೊತ್ತಿಲ್ಲ ಎಂದು ಕಿಡಿಕಾರಿದರು.

ಮಹಿಳಾ ದೌರ್ಜನ್ಯದ ಬಗ್ಗೆ ಯಾರೂ ಮಾತಾಡಲ್ಲ ಪ್ರಧಾನಿಯವರು ಮಾಧ್ಯಮಗಳಿಗೆ ಮಸಾಲೆ ಕೊಡಬೇಡಿ ಅಂತಿದ್ದಾರೆ ಆದ್ರೆ ಅವರು ಸತ್ಯವನ್ನೇ ಮಾಧ್ಯಮಗಳಿಗೆ ಹೇಳುತ್ತಿದ್ದಾರೆ ಅವರ ಅಭಿಪ್ರಾಯವನ್ನು ಅಡ್ಡಿಪಡಿಸಲು ಮೋದಿ ಏಕೆ ಪ್ರಯತ್ನಿಸುತ್ತಾರೆ ಎಂದು ಪ್ರಶ್ನಿಸಿದರು.

ಜಿಎಸ್ಟಿ ತಪ್ಪಾಗಿದೆ ಅಂದರೆ ನೀನು ಹಿಂದೂ ಅಲ್ಲ ಅಂತಾರೆ ಜಿಎಸ್ಟಿಗೂ, ಧರ್ಮಕ್ಕೂ ಏನು ಸಂಬಂಧ ? ಅನಂತ್ ಕುಮಾರ್ ಹೆಗ್ಡೆ ಮಾತನ್ನು ಅಮಿತ್ ಶಾ ಒಪ್ಪಲ್ಲ ಅಂತಾರೆ ಇನ್ನೊಂದೆಡೆ ಅಮಿತ್ ಶಾ ಕೋಮುವಾದವನ್ನು ಮಾತಾಡುತ್ತಾರೆ. ನನ್ನ ದೇಶದ ಪ್ರಧಾನಿಯನ್ನು ಪ್ರಶ್ನಿಸಿದರೆ ಮುಗಿಬೀಳುತ್ತಾರೆ ಹಾಗಾಂತ ಕಲಾವಿದ ರಾಜಕೀಯದ ಬಗ್ಗೆ ಮಾತನಾಡಬಾರದು ಅಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ ಜಾಸ್ತಿಯಾಗುತ್ತಿದ್ದು, ದಮನಿತರ ಧ್ವನಿಯಾಗಿ ಜನತೆ ನನ್ನನ್ನು ಗುರುತಿಸಿದ್ದಾರೆ ಎಂದರು.

‘ಜಸ್ಟ್ ಆಸ್ಕಿಂಗ್’ ಚಳವಳಿ ಯಾವುದೇ ರಾಜಕೀಯ ವೇದಿಕೆಯಲ್ಲ. ಜನರ ಆಶಯದಂತೆ ನಿರಂತರ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ‘ಈ ಚಳವಳಿಯನ್ನು ಆರಂಭಿಸಿದಾಗ ಒಬ್ಬನೇ ಇದ್ದೆ. ಈಗ ನಾನು ಒಂಟಿಯಲ್ಲ. ತಜ್ಞರು, ವಿದ್ಯಾರ್ಥಿಗಳು, ವಕೀಲರು, ಖಾಸಗಿ ಕಂಪನಿ ಉದ್ಯೋಗಿಗಳು ಸೇರಿ ಹಲವರು ಬಲ ತುಂಬಿದ್ದಾರೆ. ಇದು ರಾಜಕೀಯ ವೇದಿಕೆ ಆಗಬಾರದು ಎಂಬುದು ನನ್ನ ಉದ್ದೇಶ. ನಾನೂ ಸೇರಿದಂತೆ ಯಾರೂ ಈ ಚಳವಳಿಯನ್ನು ಹೈಜಾಕ್ ಮಾಡಲು ಬಿಡಬಾರದು. ಇದನ್ನು ವೇದಿಕೆಯಾಗಿ ಬಳಸಿಕೊಂಡು ರಾಜಕೀಯ ನಾಯಕರಾಗಿ ಬೆಳೆಯುವವರನ್ನು ಪ್ರಶ್ನಿಸಲಾಗುವುದು’ ಎಂದರು.

ಜಸ್ಟ್ ಆಸ್ಕಿಂಗ್ ಅರಣ್ಯರೋದನವಲ್ಲ. ದೇಶದ ಎಲ್ಲೆಡೆ ಸಂಪರ್ಕ ಬೆಳೆದಿದ್ದು, ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಚಳವಳಿ ಜನರ ಧ್ವನಿಯಾಗಲಿದೆ. ಜನಪರವಾಗಿ ಇರುತ್ತೇನೆ ಎಂಬ ಕಾರಣಕ್ಕೆ ಸಾರ್ವಜನಿಕರು ಪ್ರೀತಿ ತೋರುತ್ತಿದ್ದಾರೆ. ಅವರಿಗೆ ದ್ರೋಹಬಗೆಯುವುದಿಲ್ಲ. ಶಾಸಕ, ಸಂಸದನಾಗುವ ಆಸೆಯೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ವಿಧಾನಸಭಾ ಚುನಾವಣೆ ಮುಗಿದ ಬಳಿಕ ಹಲವು ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಜನರಲ್ಲಿ ರಾಜಕೀಯ ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸಲು ಕಮ್ಮಟ ಏರ್ಪಡಿಸಲಾಗುತ್ತದೆ. ಲಂಕೇಶ್ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಓದುಗರ ಬಳಗವನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ಉತ್ಸವಗಳನ್ನು ಹಮ್ಮಿಕೊಳ್ಳಲಿದ್ದೇವೆ’ ಎಂದು ಹೇಳಿದರು.

ನನ್ನ ಹೋರಾಟದ ಬಗೆಗೆ ಸ್ಪಷ್ಟತೆ ಇದೆ. ಬಿಜೆಪಿಯನ್ನು ಪ್ರಜ್ಞಾಪೂರ್ವಕಾಗಿ ವಿರೋಧಿಸುತ್ತಿದ್ದೇನೆ. ಎಲ್ಲ ರಾಜಕೀಯ ಪಕ್ಷಗಳನ್ನೂ ಪ್ರಶ್ನಿಸುತ್ತೇನೆ. ಕೊಲೆ, ಅತ್ಯಾಚಾರದಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಯಾವುದೇ ಪಕ್ಷದ ಅಭ್ಯರ್ಥಿಯನ್ನೂ ಚುನಾವಣೆಯಲ್ಲಿ ಬೆಂಬಲಿಸಬೇಡಿ’ಎಂದು ಕೋರಿಕೊಂಡರು.


Spread the love
2 Comments
Inline Feedbacks
View all comments
Mahesh
6 years ago

You mean, congress is loosing and BJP will come with Majority….

6 years ago

ನಿಮ್ಮ ಬಾಯಲ್ಲಿ ಬಿಜೆಪಿ ಬರುತ್ತೆ ಎಂದಾಯಿತಲ್ಲ ಬಹಳ ಸಂತೋಷ ಇದನ್ನೇ ಮುಂದುವರೆಸಿ ಜನ ನಿಮ್ಮನ್ನು ಮೆಚ್ಚುತ್ತಾರೆ.