ಬಿಜೆಪಿಯ ಪ್ರಣಾಳಿಕೆ 2014ರ ಚುನಾವಣೆಯ ನಕಲಿ ಪ್ರತಿ – ಸಚಿವ ಯು.ಟಿ.ಖಾದರ್

Spread the love

ಬಿಜೆಪಿಯ ಪ್ರಣಾಳಿಕೆ 2014ರ ಚುನಾವಣೆಯ ನಕಲಿ ಪ್ರತಿ – ಸಚಿವ ಯು.ಟಿ.ಖಾದರ್

ಮಂಗಳೂರು: “ಕಾಂಗ್ರೆಸ್ ಪ್ರಣಾಳಿಕೆಯು ಜನರಿಗೆ ಪ್ರಯೋಜನವನ್ನು ನೀಡುವ ಯೋಜನೆಗಳನ್ನು ಹೊಂದಿದೆ. ಬಿಜೆಪಿ ಪ್ರಣಾಳಿಕೆ ಜನರನ್ನು ವಿಭಜಿಸಿ ಅಧಿಕಾರಕ್ಕೆ ಬರಲು ಬಯಸಿದೆ. ಬಿಜೆಪಿ ಪ್ರಕಟಿಸಿರುವ ಪ್ರಣಾಳಿಕೆ 2014 ರ ಚುನಾವಣೆಯ ಪ್ರಣಾಳಿಕೆಯ ನಕಲಾಗಿದೆ ಕಳೆದ ಐದು ವರ್ಷಗಳಲ್ಲಿ ಜನರ ಪ್ರಯೋಜನಕ್ಕಾಗಿ ಅವರು ಯಾವುದೇ ಉಪಯುಕ್ತ ಕೆಲಸ ಮಾಡಿದ್ದಾರೆ? ಅವರ ಪ್ರಣಾಳಿಕೆಯಲ್ಲಿ , ಕಳೆದ ಐದು ವರ್ಷಗಳಲ್ಲಿ ಅವರ ಸಾಧನೆಯ ಒಂದೇ ಒಂದು ವಿಚಾರ ಪ್ರಣಾಳಿಕೆಯಲ್ಲಿ ಸೇರಿಲ್ಲ ಅವರು ಆರ್ಟಿಕಲ್ 370 ಅನ್ನು ರದ್ದುಗೊಳಿಸಲಿದ್ದಾರೆ, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವರು, ಕಪ್ಪು ಹಣವನ್ನು ಹೊರಗಿನಿಂದ ಹೊರತೆಗೆದು, ದಾವೂದ್ ಇಬ್ರಾಹಿಂ ಅವರನ್ನು ಮರಳಿ ತರಲು ಮತ್ತು ಪಾಕಿಸ್ತಾನಕ್ಕೆ ಪಾಠ ಕಲಿಸುವುದು ಎಂದು ಅವರು ಹೇಳಿದರು. ಈ ಜಿಲ್ಲೆಯ ಜನರು ತಾವು ಮತ ಚಲಾಯಿಸುವ ಮೊದಲು ತಮ್ಮನ್ನು ಕೇಳಿಕೊಳ್ಳಬೇಕು, ಬಿಜೆಪಿಯು ಈ ಯಾವುದೇ ಭರವಸೆಗಳನ್ನು ಪೂರೈಸಿದ್ದಾರೆಯೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಅವರು ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ “ಬಿಜೆಪಿ ಜಿಎಸ್ಟಿ, ಆಧಾರ್ ಕಾರ್ಡ್, ಮತ್ತು ಎಫ್ಡಿಐ ವಿರುದ್ಧ ಅಭಿಯಾನ ನಡೆಸಿದವರು ಬಳಿಕ ಅವರು ಅಧಿಕಾರಕ್ಕೆ ಬಂದ ತಕ್ಷಣ, ಅವರು ಈ ಎಲ್ಲ ವಿಷಯಗಳನ್ನು ಕಾರ್ಯಗತಗೊಳಿಸಲು ಬಯಸಿದ್ದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ , ಬಡ ಕುಟುಂಬಗಳಿಗೆ ನ್ಯಾಯ್ ಯೋಜನೆ ಮೂಲಕ ತಿಂಗಳಿಗೆ ರೂ 6000 ನೀಡಲು ನಿರ್ಧರಿಸಿದೆ. ಯುಪಿಎ 1 ಮತ್ತು 2 ಅವಧಿಯಲ್ಲಿ ನರೇಗಾ ಯೋಜನೆ ಕಾರ್ಯಗಗೊಳಿಸಿದ ಪರಿಣಾಮ ಪಂಚಾಯತ್ ಮಟ್ಟದಲ್ಲಿ ಜನರಿಗೆ ಉದ್ಯೋಗ ಲಭಿಸಲು ಸಾಧ್ಯವಾಯಿತು. ಸರಕಾರದಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಬೇಕೆಂದು ಕಾಂಗ್ರೆಸ್ ಭರವಸೆ ನೀಡಿದೆ.

ಈ ಚುನಾವಣೆ ಸಂಸದ ಅಭ್ಯರ್ಥಿಗಳನ್ನು ಆರಿಸುವ ಚುನಾವಣೆಯಾಗಿದೆ. ಬದಲಾಗಿ ಇದು ಪ್ರಧಾನಿ ಆರಿಸುವ ಚುನಾವಣೆ ಅಲ್ಲ. ಜನರು ಮತದಾನ ಮತಗಟ್ಟೆಗೆ ಹೋದಾಗ ಅವರು ಪ್ರಧಾನಿಯ ಹೆಸರನ್ನು ಪಡೆಯುವುದಿಲ್ಲ ಆದರೆ ಅವರು ಸಂಸದ ಅಭ್ಯರ್ಥಿ ಹೆಸರನ್ನು ಮಾತ್ರ ಮತಯಂತ್ರದಲ್ಲಿ ನೋಡುತ್ತಾರೆ ಎಂದರು. “


Spread the love