‘ಬೀದಿಗೆ ಬಂದರೆ ನೀನು ನಿನ್ನ ಮನೆಗೆ ಬರುವೆ ನಾನು’ ರಸ್ತೆ ಬರಹದ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಕಂಡ್ಲೂರು ಪೊಲೀಸ್!
ಕುಂದಾಪುರ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಆದರೂ, ಜನರು ಸಾರ್ವಜನಿಕವಾಗಿ ಗುಂಪಿನಲ್ಲಿ ಓಡಾಡುವುದನ್ನು ಬಿಟ್ಟಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ರಸ್ತೆ ಮೇಲೆ ಬರಹ ಬರೆದು ಕೊರೊನಾ ಜಾಗೃತಿ ಮೂಡಿಸಲಾಗುತ್ತಿದೆ.
ಇಲ್ಲಿನ ಕುಂದಾಪುರ ಗ್ರಾಮಾಂತರ ಠಾಣೆಯ ವತಿಯಿಂದ ಮಾವಿನಕಟ್ಟೆ ಸರ್ಕಲ್ ನಲ್ಲಿ ಕೊರೊನಾ ಕುರಿತು ಜನರಲ್ಲಿ ಜಾಗೃತಿ ಉಂಟು ಮಾಡಲು ರಸ್ತೆ ಬರಹ ಬರೆದು ಸೋಮವಾರ ಪ್ರಚಾರ ಮಾಡಲಾಯಿತು.
ಕೊರೊನಾ ವೈರಸ್ ಹರಡದಂತೆ ಹಲವಾರು ರೀತಿಯ ಪ್ರಚಾರ ಮಾಡಲಾಗುತ್ತಿದೆ. ಜಿಲ್ಲಾ ಅರೋಗ್ಯ ಇಲಾಖೆ ಈಗಾಗಲೇ ವ್ಯಾಪಕವಾಗಿ ಜಾಗೃತಿ ಮೂಡಿಸುತ್ತಿದೆ.
ಈ ನಡುವೆ ನಮ್ಮ ಕುಂದಾಪುರ ಗ್ರಾಮಾಂತರ ಠಾಣಾ ಪಿ ಎಸ್ ಐ ರಾಜ್ ಕುಮಾರ್ ನೇತೃತ್ವದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಬ್ರಹತ್ ಆಕಾರದ ವೈರಸ್ ಚಿತ್ರಬಿಡಿಸಿ ” ಬೀದಿಗೆ ಬಂದರೆ ನೀನು ನಿನ್ನ ಮನೆಗೆ ಬರುವೆ ನಾನು” ಶೀರ್ಷಿಕೆ ಅಡಿ ಜನರನ್ನು ಮನೆಯಲ್ಲಿ ಇರುವಂತೆ ಮನವಿ ಮಾಡಿದ್ದಾರೆ. ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದೇ ಕೊರೊನಾ ಸೋಂಕಿಗೆ ಸೂಕ್ತ ಮದ್ದಾಗಿದೆ.