“ಬೂಟ್‍ಕ್ಯಾಂಪ್’’ನ ಪ್ರಥಮ ಸರಣಿ ಉಪನ್ಯಾಸ
ಮಿಜಾರು: ಯೋಚನೆಗಳು ಮತ್ತು ಮನೋಭಾವಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ. ಆದ್ದರಿಂದ ನಮ್ಮ ಯೋಚನೆಗಳ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದು ಎಜಿಮಲ್‍ನ ಇಂಡಿಯನ್ ನೇವಲ್ ಅಕಾಡೆಮಿಯ ಕಮಾಂಡರ್ ಬೆನ್ ಬೆರ್ಸನ್ ಹೇಳಿದರು.
ಅವರು ಆಳ್ವಾಸ್ ಇಂಜನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಒಂದು ತಿಂಗಳ ಕಾಲ ಜರುಗುತ್ತಿರುವ “ಬೂಟ್‍ಕ್ಯಾಂಪ್”ನ ಪ್ರಥಮ ದಿನದ ಉಪನ್ಯಾಸ ಸರಣಿಯಲ್ಲಿ ಮಾತನಾಡಿದರು.
ನಮ್ಮ ಮನೋಭಾವಗಳು ನಮ್ಮತನದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಸಾಧನೆಯ ಹಾದಿಯಲ್ಲಿ ತರ್ಕಗಳು ಸಹಜ. ಅವುಗಳನ್ನು ನಿರ್ಲಕ್ಷಿಸಿ ಮುಂದುವರಿಯುವುದನ್ನು ರೂಢಿಸಿಕೊಂಡಾಗ ಗೆಲುವಿನ ಹಾದಿಯಲ್ಲಿ ಸಾಗಬಹುದು. ಗೆಲವಿನ ಮನೋಭಾವ ಬದುಕಿನ ಯಶಸ್ಸಿಗೆ ಕಾರಣವಾಗುತ್ತದೆ ಎಂದರು.
ಗತಿಸಿ ಹೋದ ಕಾಲದ ಕುರಿತು ಚಿಂತಿಸಿವುದರಿಂದ ನಮ್ಮ ಸಾಮಥ್ರ್ಯ ಕುಂಠಿತಗೊಳ್ಳುತ್ತದೆ. ಜೀವನದಲ್ಲಿ ಬರುವ ವಿಚಾರಗಳನ್ನು ಹಾಗೆಯೇ ಸ್ವೀಕರಿಸಿ, ಅದಕ್ಕೆ ಸಮನಾದ ಪರಿಹಾರಗಳನ್ನು ಕಂಡುಕೊಳ್ಳುವುದು ಉತ್ತಮ. ನಡೆದು ಹೋದ ವಿಷಯಗಳು ನಮ್ಮ ಮುಂದಿನ ಬದುಕನ್ನು ರೂಪಿಸುವುದಿಲ್ಲ. ಅನೇಕ ಸಕಾರಾತ್ಮಕ ವಿಚಾರಗಳು ಭವಿಷ್ಯದಲ್ಲಿ ರೂಪುಗೊಳ್ಳಲಿವೆ.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟೀ ವಿವೇಕ್ ಆಳ್ವ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ರಾಹುಲ್ ನಿರೂಪಿಸಿದರು.