ಬೆಂಗಳೂರು: ದ್ವಿತೀಯ ಪಿಯುಸಿ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ

Spread the love

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. 1017 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ 6,10,939 ವಿದ್ಯಾರ್ಥಿಗಳ ಪೈಕಿ 3,69,474 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಈ ಬಾರಿ ಶೇ.60.54 ಫಲಿತಾಂಶ ಬಂದಿದೆ.

ಪಿಯು ಬೋರ್ಡ್ ನಿರ್ದೇಶಕಿ ಸುಷ್ಮಾ ಗೋಡಬೋಲೆ ಫಲಿತಾಂಶ ಪ್ರಕಟಿಸಿದ್ದು, ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದುಕೊಂಡರೆ, ಗದಗ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಎಂದಿನಂತೆ ಬಾಲಕಿಯರು ಮೇಲುಗೈ ಪಡೆದುಕೊಂಡಿದ್ದಾರೆ.

ಯಾವ ವಿಭಾಗಕ್ಕೆ ಎಷ್ಟು ಫಲಿತಾಂಶ?: ಕಲಾ ವಿಭಾಗದಲ್ಲಿ 2,30,027 ವಿದ್ಯಾರ್ಥಿಗಳ ಪರೀಕ್ಷೆ ಬರದಿದ್ದರೆ, 1,17,394 ವಿದ್ಯಾರ್ಥಿಗಳು ಪಾಸ್ ಆಗುವ ಮೂಲಕ ಶೇ.51.12 ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 1,72105 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,12.148 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.65.19 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 2,08,807 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, 1,39,932 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.67.06 ರಷ್ಟು ಫಲಿತಾಂಶ ಬಂದಿದೆ. 38,363 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರೆ, ಪ್ರಥಮ ದರ್ಜೆಯಲ್ಲಿ 1,91,629 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡರೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಗದಗ ಜಿಲ್ಲೆ ಕೊನೆ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟು 47 ಕಾಲೇಜುಗಳು ಶೂನ್ಯ ಸಂಪಾದನೆ ಮಾಡಿದೆ.

ವಿಜ್ಞಾನ ವಿಭಾಗದಲ್ಲಿ 595 ಅಂಕಗಳೊಂದಿಗೆ ಬೆಂಗಳೂರಿನ ಎಂಇಎಸ್ ಕಾಲೇಜಿನ ವಿದ್ಯಾರ್ಥಿನಿ ಗೌತಮಿ.ಪಿ. ರಾಜ್ಯಕ್ಕೆ ಮೊದಲ ರ‍್ಯಾಂಕ್ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಶಾರದಾ ಪಿ.ಯು ಕಾಲೇಜಿನ ರಶ್ಮೀತಾ ಹಾಗೂ ಬೆಂಗಳೂರಿನ ಜಯನಗರದ ಜೈನ್‌ ಕಾಲೇಜಿನ ವೀಣಾ ಎಸ್. ರೆಡ್ಡಿ.ಎಲ್ ಅವರು ತಲಾ 593 ಅಂಕಗಳೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಇನ್ನು, ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದು ಪಿ.ಯು ಕಾಲೇಜಿನ ನೇತ್ರಾವತಿ ಎಂ.ಬಿ. ಹಾಗೂ ಬೆಂಗಳೂರಿನ ಮೌಂಟ್‌ ಕಾರ್ಮೆಲ್ ಕಾಲೇಜಿನ ಹಿತಾಂಕ್ಷಿ ಎಂ. ತ್ರಿವೇದಿ ಅವರು ತಲಾ 579 ಅಂಕಗಳೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.

 ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಅನುತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಜೂನ್ 25ರಿಂದ ಜುಲೈ 4 ರವರೆಗೆ ಪೂರಕ ಪರೀಕ್ಷೆ ನಡೆಸುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಶೂನ್ಯ ಸಾಧನೆ: ಸೋಮವಾರ ಪ್ರಕಟಗೊಂಡ ಫಲಿತಾಂಶದಲ್ಲಿ ರಾಜ್ಯದ ವಿವಿಧೆಡೆಯ ಒಟ್ಟು47 ಕಾಲೇಜುಗಳು ಶೂನ್ಯ ಸಾಧನೆ ಮಾಡಿವೆ.

ಇದರಲ್ಲಿ ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜು, 44 ಅನುದಾನ ರಹಿತ ಪಿ.ಯು ಕಾಲೇಜು ಹಾಗೂ ಎರಡು ವಿಭಜಿತ ಪಿ.ಯು ಕಾಲೇಜುಗಳು ಸೇರಿವೆ.

ದ್ವಿತೀಯ ಪಿಯುಸಿ ಫಲಿತಾಂಶ ಲಭ್ಯವಾಗುವ ತಾಣಗಳು

http://www.pue.kar.nic.in

http://www.karresults.nic.in

http://www.puc.kar.nic.in

www.indiaresults.com

www.examresults.net

www.karnatakaeducation.net

http://results.karnatakaeducation.net

www.bangaloreeducation.net


Spread the love