ಬೆಳಕಿನ ವ್ಯಕ್ತಿಗಳಾಗಿ ಜೀವಿಸುವ – ವಂ| ಓಸ್ವಲ್ಡ್ ಮೊಂತೇರೊ
ಮಂಗಳೂರು: ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ (ರಿ) ಮಂಗಳೂರು (ಸಿ.ಒ.ಡಿ.ಪಿ) ಪ್ರವರ್ತಿತ ಕಾಮದೇನು ಮತ್ತು ಕಲ್ಪವೃಕ್ಷ ಮಹಾಸಂಘಗಳ ಸದಸ್ಯ ಸ್ವ ಸಹಾಯ ಸಂಘಗಳ ಸದಸ್ಯರಿಂದ ದೀಪಾವಳಿ ಹಬ್ಬ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಗಿಸಿದ ಸಿ.ಒ.ಡಿ.ಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಓಸ್ವಲ್ಡ್ ಮೊಂತೇರೊರವರು “ಈ ದೀಪಾವಳಿ ಹಬ್ಬವನ್ನು ಸ್ವ ಸಹಾಯ ಸಂಘದಲ್ಲಿ ಇರುವ ಎಲ್ಲಾ ಧರ್ಮದ ಸದಸ್ಯರು ಒಟ್ಟು ಸೇರಿ ಆಚರಣೆ ಮಾಡುವಾಗ ನಮ್ಮಲ್ಲಿ ಸೌಹಾರ್ಧತೆ ಬೆಳೆಯುತ್ತಿದೆ, ನಮ್ಮ ಒಳ್ಳೆಯ ಕರ್ಯಗಳಿಂದ, ಮಾತುಗಳಿಂದ ಮತ್ತು ಜೀವನದಿಂದ ಬೆಳಕಿನ ವ್ಯಕ್ತಿಗಳಾಗಿ ಜೀವಿಸಿ ಇಡೀ ಸಮಾಜಕ್ಕೆ ಬೆಳಾಗಾಗುವ” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಕದ್ರಿ ಪೋಲಿಸ್ ಸ್ಟೇಷನ್ ಠಾಣಾ ಅಧಿಕಾರಿ ಶ್ರೀ ಮಾರುತಿ ಇವರು ಮಕ್ಕಳು ಮತ್ತು ಮಹಿಳೆಯರಿಗೆ ಆಗುವ ತೊಂದರೆಗಳು ಮತ್ತು ಕಾನೂನು ಪರಿಹಾರ ಬಗ್ಗೆ ಮಾಹಿತಿ ನೀಡಿದರು ಹಾಗೂ ದೀಪಾವಳಿ ಶುಭಾಶಯ ಕೋರಿದರು.
ಡಿಜಿಟಲ್ ಸೇವಾ ಕೇಂದ್ರದ ಶ್ರೀ ಅರುಣ್ ಡಿ ಸೋಜರವರು ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮತ್ತು ಆನ್ಲೈನ್ ಸೇವೆ ಬಗ್ಗೆ ಮಾಹಿತಿ ನೀಡಿದರು.
ಅನುಗ್ರಹ ಸ್ವ ಸಹಾಯ ಸಂಘದ ಅಧ್ಯಕ್ಷಿಣಿಯಾದ ಶ್ರೀಮತಿ ಶಾಂತಿ ಡಿ ಸೋಜ ಸ್ವಾಗತಿಸಿದರು. ಮಹಾಸಂಘದ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ವಂದಿಸಿ, ಭಗವತಿ ಸಂಘದ ಅಧ್ಯಕ್ಷೆ ಶ್ರೀಮತಿ ಸತ್ಯವತಿ ಕಾರ್ಯಕ್ರಮ ನಿರೂಪಿಸಿದರು.
ಸಿ.ಒ.ಡಿ.ಪಿ ಸಂಸ್ಥೆಯ ಸಂಯೋಜಕರಾದ ರವಿಕುಮಾರ್ ಕ್ರಾಸ್ತರವರು ಹಾಜರಿದ್ದರು. ಸಿ.ಒ.ಡಿ.ಪಿ ಸಂಸ್ಥೆಯ ಕಾರ್ಯಕರ್ತೆಯಾದ ಕಲಾಗಿರೀಶ್ ರವರು ಈ ಕಾರ್ಯಕ್ರಮವನು ಆಯೋಜಿಸಿದರು.