ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಉಗುಳುತ್ತಿದ್ದ  ಮಂದಿಗೆ ದಂಡ

Spread the love

ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಉಗುಳುತ್ತಿದ್ದ  ಮಂದಿಗೆ ದಂಡ

ಬೆಳಗಾವಿ: ಕೋವಿಡ್–19 ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಜಿಲ್ಲಾ ಪೊಲೀಸರು, ಶುಕ್ರವಾರ ಮಾಸ್ಕ್ (ಮುಖಗವಸು) ಹಾಕಿಕೊಳ್ಳದೆ ಸಂಚರಿಸುತ್ತಿದ್ದ 420 ಮಂದಿಗೆ ₹42 ಸಾವಿರ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಹೆಚ್ಚಿನ (165) ಮಂದಿಗೆ ದಂಡ ವಿಧಿಸಲಾಗಿದೆ.‘ಸಾರ್ವಜನಿಕ ಸ್ಥಳದಲ್ಲಿ ಕಂಡಲ್ಲಿ ಉಗುಳುತ್ತಿದ್ದ 133 ಜನರಿಗೆ ₹13,330 ದಂಡ ವಿಧಿಸಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

‘ಲಾಕ್ಡೌನ್ ಜಾರಿಯಾದಾಗಿನಿಂದ ಉಲ್ಲಂಘನೆಗೆ ಸಂಬಂಧಿಸಿದಂತೆ 162 ಪ್ರಕರಣ ದಾಖಲಿಸಲಾಗಿದೆ. 280 ಮಂದಿ ಬಂಧಿಸಲಾಗಿದೆ ಹಾಗೂ 1,905 ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.


Spread the love