ಮಂಗಳೂರು: ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಜಾನಪದ ಸಾಂಸ್ಕøತಿಕ ಸಂಘದ ಆಶ್ರಯದಲ್ಲಿ “ಆಟಿಡೊಂಜಿ ಕೂಟ-2015’ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಸೈಂಟ್ ಅಲೋಶಿಯಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ವಿಶ್ವನಾಥ ಬದಿಕಾನ ಮುಖ್ಯ ಅತಿಥಿಯಾಗಿ ಹಾಗೂ ಪ್ರಾಸ ಪ್ರವೀಣ, ಚುಟುಕು ಸಾಹಿತಿ ಕಾರ್ಕಳ ಶೇಖರ ಭಂಡಾರಿ ಗೌರವ ಅತಿಥಿಯಾಗಿ ಭಾಗವಹಿಸಿದರು.
ಡಾ. ವಿಶ್ವನಾಥ ಬದಿಕಾನ ಮಾತನಾಡುತ್ತಾ, ಆಟಿ ತಿಂಗಳ ವೈಶಿಷ್ಟ್ಯ, ಆ ಕಾಲದ ಸಾಮಾಜಿಕ-ಆರ್ಥಿಕ ಸಂPಷ್ಟಗಳು, ಆಚರಣೆಗಳು, ಆ ತಿಂಗಳ ಪರಿಸರ ಸಮತೋಲಿತ ಆಹಾರ, ಅದರ ಪ್ರಾಮುಖ್ಯತೆಗಳ ಬಗ್ಗೆ ವಿಶೇಷವಾದ ಮಾಹಿತಿಗಳನ್ನು ನೀಡಿದರು. ತುಳುನಾಡ ಸಂಸ್ಕøತಿಯು ಮರೆಗೆ ಸರಿಯುತ್ತಿದ್ದು, ಅದನ್ನು ಉಳಿಸುವ ಮಹತ್ತರವಾದ ಜವಾಬ್ದಾರಿಯನ್ನು ಯುವಜನತೆ ಮಾಡಬೇಕಾಗಿದೆ ಎಂದರು.
ಕಾರ್ಕಳ ಶೇಖರ್ ಭಂಡಾರಿ ನಿರರ್ಗಳವಾಗಿ ಪ್ರಾಸಬದ್ಧ ಚುಟುಕುಗಳನ್ನು ರಸವತ್ತಾಗಿ ವಾಚಿಸುತ್ತಾ ಸಭೆಯನ್ನು ನಗುವಿನ ಕಡಲಲ್ಲಿ ತೇಲಿಸಿ ರಂಜಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಡಾ. ಸುಧಾ ಕೆ ಅಧ್ಯಕ್ಷ ಭಾಷಣಗೈದರು. ಡಾ. ಮೀನಾಕ್ಷಿ ರಾಮಚಂದ್ರ ವೇದಿಕಯಲ್ಲಿ ಉಪಸ್ಥಿತರಿದ್ದರು. ಸಂಘದ ಸಂಚಾಲಕಿ ಶ್ರೀಮತಿ ಜ್ಞಾನೇಶ್ವರಿ ಸ್ವಾಗತಿಸಿದರು. ಅನುಷಾ ಪೈ ಪ್ರಾರ್ಥಿಸಿ, ಸಿದ್ದಮ್ಮ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಚೈತ್ರಾ ವಂದಿಸಿದರು.
ತರುವಾಯ ವಿದ್ಯಾರ್ಥಿಗಳಿಂದಲೇ ಆಯೋಜಿಸಲ್ಪಟ್ಟ ಆಟಿ ತಿಂಗಳ ವಿಶೇಷ ಅಡುಗೆಗಳ ಭೋಜನ ಕೂಟವನ್ನು ಕಾಲೇಜಿನ ಸಂಚಾಲಕರಾದ ಶ್ರೀ ದೇವಾನಂದ ಪೈ, ಕಾರ್ಯದರ್ಶಿ ಶ್ರೀ ಶ್ಯಾಮ್ಸುಂದರ್ ಕಾಮತ್ ರವರ ಸಹಭಾಗಿತ್ವದಲ್ಲಿ ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸವಿದರು.