ಬೈಂದೂರು: ನಾವುಂದ ಕೊಲೆ ಪ್ರಕರಣ: ಆರೋಪಿಯ ಬಂಧನ

Spread the love

ಬೈಂದೂರು: ನಾವುಂದ ಗ್ರಾಮದ ಪಡುವಾಯಿನ ಮನೆ ನಿವಾಸಿ ಮಾಧವ ಯಾನೆ ಮಾಸ್ತಿ ಪೂಜಾರಿ(62) ಎಂಬವರ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ನೆರೆಮನೆಯ ಶಿರಸಿ ಮೂಲದ ನರಸಿಂಹ(48) ಎಂದು ಗುರುತಿಸಲಾಗಿದೆ. ಈತ ಹಣದ ಆಸೆಗಾಗಿ ಮಾ.18ರಂದು ರಾತ್ರಿ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಮಾಧವ ಪೂಜಾರಿಯವರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದನು ಎಂದು ತನಿಖೆಯಿಂದತಿಳಿದುಬಂದಿದೆ. ನರಸಿಂಹ 9ವರ್ಷಗಳ ಹಿಂದೆ ಮಾಧವ ಪೂಜಾರಿಯ ಮನೆಯ ಸಮೀಪದ ರೇವತಿ ಎಂಬವರನ್ನು ಮದುವೆಯಾಗಿಧಿ ದ್ದು, ನಂತರ ಆತ ಆಕೆಯ ಮನೆಯಲ್ಲಿಯೇ ನೆಲೆಸಿದ್ದನು. ಇವರಿಗೆ 7ವರ್ಷದ ಮಗ ಇದ್ದಾನೆ. ಕೆಲಸ ಇಲ್ಲದೆ ಪತ್ನಿಯ ಮನೆಯಲ್ಲಿ ವಾಸವಾಗಿದ್ದ ನರಸಿಂಹ ಹಣದ ಆಸೆಗಾಗಿ ಈ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಮಾಧವ ಪೂಜಾರಿ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ತಿಳಿದಿದ್ದ ನರಸಿಂಹ, ಮರುದಿನ ಮಗಳ ಕುಟುಂಬದೊಂದಿಗೆ ಮುಂಬಯಿಗೆ ಹೋಗಲು ಸಜ್ಜಾಗಿದ್ದ ಮಾಧವರ ಬಳಿ ಭಾರೀ ಹಣ ಇರಬಹುದೆಂಬ ನಿರೀಕ್ಷೆಯಲ್ಲಿ ರಾತ್ರಿ ಕತ್ತಿ ಹಿಡಿದುಕೊಂಡು ಮನೆಗೆ ನುಗ್ಗಿ ಅವರ ಕೊಲೆಗೆ ಯತ್ನಿಸಿದನು. ಈ ವೇಳೆ ಇಬ್ಬರ ಮಧ್ಯೆ ಕಾದಾಟ ನಡೆದಿತ್ತು. ಕೊನೆಗೆ ತನ್ನ ಕೈಯಲ್ಲಿದ್ದ ಕತ್ತಿಯಿಂದ ಮಾಧವರ ತಲೆಗೆ ಕಡಿದು ಕೊಲೆ ಮಾಡಿದನು.

ಈ ಘರ್ಷಣೆಯಲ್ಲಿ ನರಸಿಂಹನ ಮುಖಕ್ಕೆ ತರುಚಿದ ಗಾಯಗಳಾಗಿವೆ. ಬಳಿಕ ಮನೆಯಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ ನರಸಿಂಹಗೆ 500ರೂ. ನಾಣ್ಯಗಳು, ಚಿನ್ನದ ಸರ ಹಾಗೂ ಉಂಗುರದೊರೆತಿತ್ತು. ತನಿಖೆಯ ವೇಳೆ ನರಸಿಂಹನ ಮುಖದಲ್ಲಿದ್ದ ಗಾಯಗಳಿಂದ ಸಂಶಯಗೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಈ ಕೊಲೆ ಪ್ರಕರಣ ಬಹಿರಂಗಗೊಂಡಿತು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಈತನ ವಿರುದಟಛಿ ಶಿರಸಿ ಪೊಲೀಸ್‌ ಠಾಣೆಯಲ್ಲಿಯೂ ಕೇಸು ದಾಖಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love