ಬ್ಯಾಂಕ್ ದರೋಡೆ ಬೇಧಿಸಿದ ಪೊಲೀಸರಿಗೆ ಯು.ಟಿ.ಖಾದರ್ ಅಭಿನಂದನೆ

Spread the love

ಬ್ಯಾಂಕ್ ದರೋಡೆ ಬೇಧಿಸಿದ ಪೊಲೀಸರಿಗೆ ಯು.ಟಿ.ಖಾದರ್ ಅಭಿನಂದನೆ

ತಲಪಾಡಿಯ ಕೋಟೆಕಾರು ಸಹಕಾರಿ ಸಂಘದಲ್ಲಿ ಹಾಡುಹಗಲೇ ದರೋಡೆಗೈದ ಆರೋಪಿಗಳ ಜಾಡು ಹಿಡಿದು ತಮಿಳ್ನಾಡಿನಲ್ಲಿ ಕ್ಷಿಪ್ರವಾಗಿ ಬಂಧಿಸಿರುವ ಪೊಲೀಸರ ದಿಟ್ಟ ಕ್ರಮ ಶ್ಲಾಘನಾರ್ಹವಾದುದು ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ದರೋಡೆಯಾದ ಅಲ್ಪಾವಧಿಯಲ್ಲೇ ಬಂಧಿಸಿರುವುದರಿಂದ ಪೊಲೀಸರ ಮೇಲಿನ ವಿಶ್ವಾಸ ಮತ್ತು ನಂಬಿಕೆ ಇಮ್ಮಡಿಯಾಗಿದೆ. ಪೊಲೀಸರ ಶ್ರಮಕ್ಕೆ ಕೃತಜ್ಞತೆಗಳು. ಇದೇ ರೀತಿ ಬಂಟ್ವಾಳ ನಾರ್ಶದ ಸಿಂಗಾರಿ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಅವರ ಮನ ದರೋಡೆ ಪ್ರಕರಣದಲ್ಲೂ ಆರೋಪಿಗಳು ಶೀಘ್ರ ಪೊಲೀಸ್ ಬಲೆಗೆ ಬೀಳಲಿದ್ದಾರೆ. ಇದರ ತನಿಖೆಯಲ್ಲಿ ಬಹಳಷ್ಟು ಪ್ರಗತಿ ಕಂಡು ಬಂದಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments