ಬ್ಯಾನರಿನಲ್ಲಿ ಶರತ್ ಬದಲು ಪ್ರಶಾಂತ್ ಹೆಸರು ಮುದ್ರಿಸಿ ಎಡವಟ್ಟು ಮಾಡಿದ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ

Spread the love

ಪ್ರತಿಭಟನಾ ಬ್ಯಾನರಿನಲ್ಲಿ ಶರತ್ ಬದಲು ಪ್ರಶಾಂತ್ ಹೆಸರು ಮುದ್ರಿಸಿ ಎಡವಟ್ಟು ಮಾಡಿದ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ

ಉಡುಪಿ: ರಾಜ್ಯದಲ್ಲಿ ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ರಾಜ್ಯ ಸರಕಾರಕ್ಕೆ ಜಿಲ್ಲಾಧಿಕಾರಗಳ ಮುಕಾಂತರ ಉಡುಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಗುರುವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಎಡವಟ್ಟು ಮಾಡಿಕೊಂಡಿದೆ.

ಪ್ರತಿಭಟನೆಗಾಗಿ ಉಪಯೋಗಿಸಲಾದ ಬ್ಯಾನರಿನಲ್ಲಿ ಶರತ್ ಮಡಿವಾಳ ಎಂಬುದನ್ನು ಬರೆಯುವ ಬದಲು ಪ್ರಶಾಂತ್ ಮಡಿವಾಳ ಹತ್ಯೆ ಎಂದು ಬರೆಯುವುದರ ಮೂಲಕ ಎಡವಟ್ಟು ಮಾಡಿಕೊಂಡಿದೆ. ಅಲ್ಲದೆ ಪ್ರತಿಭಟನೆಯನ್ನು ಜಿಲ್ಲಾ ಯುವ ಮೋರ್ಚಾ ಹಮ್ಮಿಕೊಂಡಿದ್ದರೂ ಸಹ ಕೇವಲ ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ ಎಂದು ನಮೂದಿಸುವ ಮೂಲಕ ಇಡೀ ಜಿಲ್ಲಾ ಬಿಜೆಪಿಗೆ ಹೊಣೆಗಾರರನ್ನಾಗಿಸಿದಂತಿದೆ.

ಈ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್ ಅವರು ಇದು ಉದ್ದೇಶಪೂರ್ವಕವಾಗಿ ನಡೆದ ತಪ್ಪಲ್ಲ, ಬ್ಯಾನರ್ ಮುದ್ರಿಸುವವರಿಂದ ನಡೆದ ತಪ್ಪಾಗಿದೆ ನಾವು ವಿಷಯವನ್ನು ನೀಡುವಾಗ ಸರಿಯಾಗಿಯೇ ನೀಡಿದ್ದೇವು. ಪ್ರತಿಭಟನೆಯನ್ನು ಕೊನೆಯ ಕ್ಷಣದಲ್ಲಿ ಹಮ್ಮಿಕೊಂಡ ಪರಿಣಾಮ  ತರಾತುರಿಯಲ್ಲಿ ಬ್ಯಾನರನ್ನು ಗಮನಿಸಲು ಹೋಗಿಲ್ಲ ನಮ್ಮಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಶರತ್ ಮಡಿವಾಳ ಹತ್ಯೆ ಸಂಬಂಧಿಸಿ ಕೇಂದ್ರ ಗೃಹ ಸಚಿವರಿಗೆ ಹಿಂದೂ ನಾಯಕರು ಹಾಗೂ ಬಿಜೆಪಿ ಕಾರ್ಯಕರ್ತರ ಕೊಲೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸಬೇಕು ಎಂದು ಮನವಿ ಮಾಡಿದ ವೇಳೆ ಮೂಡಬಿದ್ರೆಯಲ್ಲಿ ಜೀವಂತವಾಗಿರುವ ಅಶೋಕ್ ಪೂಜಾರಿಯನ್ನು ಸತ್ತವರ ಪಟ್ಟಿಯಲ್ಲಿ ಸೇರಿಸಿ ತಪ್ಪು ಮಾಡಿದ್ದು, ಮತ್ತೆ ಪುನಃ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಇನ್ನೊಂದು ಎಡವಟ್ಟು ಮಾಡಿಕೊಂಡು ಮುಜುಗರಕ್ಕೀಡಾಗಿದೆ.


Spread the love
1 Comment
Inline Feedbacks
View all comments
Lallu
7 years ago

THEY CAN KILL ANY NAME IN THE NAME OF VOTES !! ITS SHOWS ONLY INTERESTED IN VOTE NOT IN THE HUMAN BEING !!