ಬ್ರಹ್ಮಾವರ ಓರ್ಥೋಡಕ್ಸ್ ಸೀರಿಯನ್ ಕೊಂಕಣಿ ವೆಲ್ಫೇರ್ ಟ್ರಸ್ಟ್ ಕಾರ್ಯಕಾರಿ ಸಮಿತಿಯ ಸಭೆ
ಬ್ರಹ್ಮಾವರ : ಬ್ರಹ್ಮಾವರ ಓರ್ಥೋಡಕ್ಸ್ ಸೀರಿಯನ್ ಕೊಂಕಣಿ ವೆಲ್ಫೇರ್ ಟ್ರಸ್ಟ್ (ರಿ) ಇದರ ಕಾರ್ಯಕಾರಿ ಸಮಿತಿಯ ಸಭೆಯು ಇತ್ತೀಚೆಗೆ ಜರುಗಿತು.
ಸಭೆಯ ದೇವರ ಸ್ಮರಣೆಯೊಂದಿಗೆ ಆರಂಭಿಸಿ, ಟ್ರಸ್ಟಿನ ಕಾರ್ಯದರ್ಶಿ ಡೆನಿಸ್ ಡಿಸಿಲ್ವಾ ಅವರು ಸ್ವಾಗತಿಸಿ, ಕೋವಿಡ್ 19 ಸಂಕಷ್ಟ ಸಮಯದಲ್ಲಿ ಕಷ್ಟದಲ್ಲಿರುವ ಕುಟುಂಬಗಳಿಗೆ 110 ಕಿಟ್ ಗಳನ್ನು ದಾನಿಗಳ ಸಹಕಾರದಿದ ವಿತರಿಸಿದ್ದು ಎಲ್ಲಾ ದಾನಿಗಳಿಗೆ ಕೃತಜ್ಞತೆ ಅರ್ಪಿಸಿದರು.
ಇದೇ ವೇಳೆ ಹಿರಿಯ ಸಮಾಜ ಸೇವಕರು ಹಾಗೂ ಟ್ರಸ್ಟಿನ ಸಕ್ರೀಯ ಟ್ರಸ್ಟಿ ದಿ|ಸಿರಿಲ್ ಆಬ್ರಾಹಾಂ ಡಿಸೋಜಾರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ವಂ| ಲೊರೇನ್ಸ್ ಡಿಸೋಜಾ ಹಾಗೂ ಬ್ರಹ್ಮಾವರ ಎಸ್ ಎಮ್ ಎಸ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕರಾದ ಥೋಮಸ್ ಡಿಸೋಜರವು ಮಾತನಾಡಿ ಬಡತನದಲ್ಲಿ ಜನಿಸಿದ ಸಿರೀಲ್ ಡಿಸೋಜಾ ಅವರು ವಿದೇಶಕ್ಕೆ ತೆರಳಿ ಕುವೈಟ್ ನಲ್ಲಿ ಬಹಳಷ್ಟು ವರ್ಷಗಳ ಕಾಲ ದುಡಿದರು. ಅವರು ಸದಾ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದು ಯಾರೇ ಕೂಡ ಕಷ್ಟದಲ್ಲಿದ್ದರೂ ಅವರ ಕಷ್ಟಕ್ಕೆ ತುರ್ತಾಗಿ ಸ್ಪಂದಿಸುತ್ತಿದ್ದರು. ಬ್ರಹ್ಮಾವರ ಎಸ್ ಎಮ್ ಎಸ್ ಕಾಲೇಜು ಹಾಗೂ ಆಶ್ರಮ ನಿರ್ಮಿಸುವಲ್ಲಿ ಅವರ ಪಾತ್ರ ಬಹಳಷ್ಟಿದೆ ಎಂದರು.
ಇದೇ ವೇಳೆ ಟ್ರಸ್ಟಿನ ವತಿಯಿಂದ ಎರೋನಾಟಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಪ್ರಿನ್ಸಿಯಾ ಲೂವಿಸ್ ಅವರಿಗೆ ರೂ 25000 ಮೊತ್ತದ ಚೆಕ್ಕನ್ನು ಹಸ್ತಾಂತರಿಸಲಾಯಿತು.
ಸಭೆಯಲ್ಲಿ ಟ್ರಸ್ಟಿನ ಟ್ರಸ್ಟಿಗಳಾದ ಸೊಲೋಮನ್ ಡಿಸಿಲ್ವಾ, ರೋಶನಿ ಒಲಿವರ್, ಸಿರಿಲ್ ಡಿಸೋಜಾರವರ ಕುಟುಂಬಸ್ಥರು, ಡೇನಿಯಲ್ ಮೊಂತೆರೋ, ಹಾಗೂ ಇತರರು ಉಪಸ್ಥಿತರಿದ್ದರು. ಮೊಸೇಸ್ ಲೂವಿಸ್ ಧನ್ಯವಾದವಿತ್ತರು.