ಬ್ರಹ್ಮಾವರ: ಕೃಷಿ ಸಂಶೋಧನಾಲಯದಲ್ಲಿ ರಾಜ್ಯಮಟ್ಟದ ಸಾಂಬಾರು ಮತ್ತು ಔಷಧೀಯ ಬೆಳೆಗಳ ವಿಚಾರ ಸಂಕಿರಣ ಉದ್ಘಾಟನೆ

Spread the love

ಬ್ರಹ್ಮಾವರ: ಭಾರತ ದೇಶದ ಪ್ರಥಮ ಆದ್ಯತೆ ಕೃಷಿ. ಯಾಕೆಂದರೆ ಎಷ್ಟೆ ಉದ್ಯಮಪತಿಗಳನ್ನು ಸೃಷ್ಠಿಸಿದರು ನಮ್ಮ ದೇಶದ ಹಸಿವು ಇಂಗುವುದಿಲ್ಲ.  ದೇಶದ 70 ಶೇಕಡಾ ಜನತೆ ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ ಉಳಿದ 30 ಶೇಕಡಾ ಜನತೆ ಇದೇ ಅನ್ನವನ್ನು ನೆಚ್ಚಿಕೊಂಡಿದ್ದಾರೆ. ಕೇವಲ ದುಡ್ಡಿನ ಬಲದಿಂದ ಜೀವನ ಸಾಗಿಸುತ್ತೇನೆ ಎಂದು ಯಾರಾದರೂ ಕನಸು ಕಾಣುತ್ತಿದ್ದರೆ ಅವರು ಮೂರ್ಖರೇ ಸರಿ ಎಂದು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ.ಉಡುಪ ಅಭಿಪ್ರಾಯಪಟ್ಟರು.
ಅವರು ಶನಿವಾರದಂದು ಬ್ರಹ್ಮಾವರ ವಲಯ ಕೃಷಿ ಸಂಶೋಧನಾಲಯದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಮತ್ತು ಉಳ್ಳಾಲ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಮತ್ತು ಮಂಗಳೂರು, ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಬ್ರಹ್ಮಾವರ, ತೋಟಗಾರಿಕೆ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಉಡುಪಿ, ಜಿಲ್ಲಾ ಕೃಷಿಕ ಸಮಾಜ ಉಡುಪಿ ಮತ್ತು ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ಎಸ್ಡಿಪಿಆರ್ಎಸ್ ಔಷಧಿ ಬೆಳೆಯ ಪ್ರಾಯೋಜಕರು ಬ್ರಹ್ಮಾವರ ಮತ್ತು ಕೆನರಾ ಬ್ಯಾಂಕ್, ಇವರುಗಳ ಸಹ ಪ್ರಾಯೋಜಕತ್ವದಲ್ಲಿ 2 ದಿನಗಳ ಕಾಲ ಆಯೋಜಿಸಲಾದ ರಾಜ್ಯಮಟ್ಟದ ಸಾಂಬಾರು ಬೆಳೆಗಳ ಮತ್ತು ಔಷಧೀಯ ಬೆಳೆಗಳ ವಿಚಾರ ಸಂಕಿರಣ 2015 ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಾ, ವಿಶ್ವದಲ್ಲಿನ ಕೃಷಿಕರಲ್ಲಿ ಭಾರತೀಯ ಕೃಷಿಕರು ಅತ್ಯಂತ ಬುದ್ಧಿವಂತರು ಎಂದು ಹೆಸರು ಗಳಿಸಿದ್ದಾರೆ. ಯಾವುದೇ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಭಾರತೀಯರು ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದ್ದಾರೆ.

BMR_APL25_2 BMR_APL25_3 BMR_APL25_4 BMR_APL25_5 IMG_1545

ಇಂದು ಯುವಕರಿಗೆ ಕೃಷಿಯ ಬಗ್ಗೆ ಧನಾತ್ಮಕವಾಗಿ ಮಾರ್ಗದರ್ಶನ ನೀಡಬೇಕಾದ ಅಗತ್ಯತೆ ಇದೆ, ವೈಜ್ಞಾನಿಕವಾಗಿ ಕೃಷಿ ನಡೆಸಿದರೆ ಕೃಷಿಯಿಂದಲೇ ಜೀವನಕ್ಕೆ ಬೇಕಾದ ಅಗತ್ಯತೆಗಳನ್ನು ಪೋರೈಸಿಕೊಳ್ಳಬಹುದಾಗಿರುವಷ್ಟು ಆದಾಯ ಪಡೆಯಬಹುದು. ಕೃಷಿಯಿಂದ ಪ್ರಯೋಜನ ಇಲ್ಲ ಎನ್ನುವವರು ನಿಜಕ್ಕೂ ಪ್ರಯೋಜನವಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಹಿಂದಿನಂತೆ ಸೂಕ್ತಯಾದ ಯೋಜನೆಯೊಂದಿಗೆ ಕೃಷಿಗೆ ಇಳಿದರೆ ಸಾಕಷ್ಟು ಆದಾಯವನ್ನು ಕೃಷಿಯಿಂದ ಪಡೆಯಬಹುದು. ಸರಕಾರ ಒಂದು ರೂಪಾಯಿ ಅಕ್ಕಿ ನೀಡುವ ಬದಲು ಕೃಷಿ ಉತ್ಪನ್ನಗಳಿಗೆ ಸೂಕ್ತ ಧಾರಣೆ ನೀಡಿದರೆ ಕೃಷಿಕರು ನೆಮ್ಮದಿಯಿಂದ ಯಾರ ಸಹಾಯಕ್ಕೂ ಅಪೇಕ್ಷೆಪಡದೆ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಯಾಕೆಂದರೆ ದೇಶದಲ್ಲಿ ಪ್ರತಿಯೊಂದು ವಸ್ತುಗೂ ಮಾರುಕಟ್ಟೆ ಇದೆ, ಬೇಡಿಕೆ ಹೆಚ್ಚಾಗಿದೆ. ಈ ಭಾಗದಲ್ಲಿ ಸಾಂಬಾರು ಮತ್ತು ಔಷಧಿಯ ಬೆಳೆಗಳ ಬಗ್ಗೆ ಆಸಕ್ತಿ ಕಡಿಮೆಯಾಗಿದೆ ಅದನ್ನು ಜಾಗ್ರತಗೊಳಿಸಬೇಕಾದ ಅಗತ್ಯತೆ ಇದೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ ಉದ್ಘಾಟಿಸಿ ಮಾತನಾಡಿ, ಇಂದು ಕೃಷಿ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ದುಡ್ಡಿನ ಹಿಂದೆ ಬೀಳುವ ಪರಿಪಾಠ ಪ್ರಾರಂಭವಾಗಿ, ಕೃಷಿ ಭೂಮಿಗಳು ಬರಡಾಗಿದೆ ಕೇಲವು ಕಡೆಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಮಾರಾಟವಾಗುತ್ತಿದೆ. ಒಂದು ಮಾತು ನಿಜ ರೈತನೇ ಇಡಿ ವಿಶ್ವದ ಜೀವನಾಡಿ, ಯುವ ಜನತೆ ಕೃಷಿಯತ್ತ ಆಸಕ್ತರಾಗಬೇಕು. ವಲಯ ಕೃಷಿ ಕೇಂದ್ರ ಕೃಷಿಕರೊಂದಿಗೆ ಬೆರೆಯುವ ಅವಕಾಶ ನೀಡುತ್ತಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಕುಲಪತಿ ಡಾ.ಸಿ.ವಾಸುದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕೃಷಿ ವಸ್ತು ಪ್ರದರ್ಶನವನ್ನು ಕಲ್ಲಿಕೋಟೆ ಅಡಿಕೆ ಮತ್ತು ಸಾಂಬಾರು ಬೆಳೆಗಳ ನಿರ್ದೇಶನಾಲಯದ ನಿದರ್ೇಶಕ ಡಾ.ಹೋಮಿ ಚೆರಿಯನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿರಾಜ್ ಶೆಟ್ಟಿ, ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಣಾಕ್ಷಿ ಜತ್ತನ್, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ.ಪಿ.ನಾರಾಯಣ ಸ್ವಾಮಿ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ನವಿಲೆ ಸಹ ಸಂಶೋಧನಾ ನಿರ್ದೇಶಕ ಡಾ.ವೈ.ವಿಶ್ವನಾಥ ಶೆಟ್ಟಿ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ.ಟಿ.ಎಚ್.ಗೌಡ ಉಪಸ್ಥಿತರಿದ್ದರು.
ಬ್ರಹ್ಮಾವರ ಎಸ್ಡಿಪಿಆರ್ಎಸ್ ನಿರ್ದೇಶಕ ಎಸ್.ಬಿ.ಶೆಟ್ಟಿ ಮತ್ತು ಉಡುಪಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿದರ್ೇಶಕಿ ಮಾಲತಿ ದಿನೇಶ್ ಅವರು ಔಷಧೀಯ ಸಸ್ಯಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸಿದರು.
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಂ.ಹನುಮಂತಪ್ಪ ಸ್ವಾಗತಿಸಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಂಜೀವ ಕ್ಯಾತಪ್ಪನವರ್ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಡಾ.ಜಯಲಕ್ಷ್ಮೀ ನಾರಾಯಣ ಹೆಗಡೆ ವಂದಿಸಿದರು. ಸುಮಾರು 50 ಕೃಷಿ ಸಂಬಂಧಿ ಮಳಿಗೆಗಳು ಆಗಮಿಸಿದ್ದವು.


Spread the love