ಬ್ರಹ್ಮಾವರ: ಮನುಷ್ಯನಲ್ಲಿ ಸದ್ಗುಣಗಳು, ಉತ್ತಮ ನಡತೆಗೆ, ತ್ಯಾಗದ ಮನೋಭಾವನೆಗೆ ದೇವಸ್ಥಾನ, ದೇವರೇ ಕಾರಣ. ದೇವಸ್ಥಾನದಿಂದ ಸಮಾಜದಲ್ಲಿ ನೈತಿಕ ಶಕ್ತಿ ಬೆಳೆಯುತ್ತದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.
ಹಾವಂಜೆ ಮಹತೋಬಾರ್ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಇನ್ನೊಬ್ಬರ ಕಷ್ಟ ಸುಖಃಕ್ಕಾಗಿ ಮಿಡಿಯುವುದೇ ನಿಜವಾದ ಶ್ರಮ. ನಮ್ಮ ಸುಖಃಕ್ಕಾಗಿ ಕಷ್ಟಪಟ್ಟರೆ ತಾಪ. ಬೇರೆಯವರ ಸುಖಕ್ಕಾಗಿ ಕಷ್ಟಪಡುವುದು ಅದು ತಪ ಎಂದ ಅವರು ಸ್ವಾರ್ಥಗಳನ್ನು ಬದಿಗೊತ್ತಿ, ಸ್ವಚ್ಛಮನಸ್ಸಿನಿಂದ ತ್ಯಾಗದ ಸಂದೇಶವನ್ನು ಬಿತ್ತರಿಸುವ ಕಾರ್ಯಕ್ಕೆ ನಾವು ಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.
ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ ಹಾವಂಜೆ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳಿಗೆ ಸುಮಾರು 6ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ನೀಲಾವರ ಕೂರಾಡಿ ಮತ್ತು ಆರೂರು ಬೆಳ್ಮಾರು ಕೊಳಲಗಿರಿ ಸಂಪರ್ಕ ಸೇತುವೆ ನಿರ್ಮಾಣದಿಂದ ಸುತ್ತಮುತ್ತಲಿನ ಗ್ರಾಮಗಳು ಮುಂದೆ ಸಾಕಷ್ಟು ಅಭಿವೃದ್ಧಿ ಹೊಂದಲಿದೆ ಎಂದು ತಿಳಿಸಿದರು.
ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಸದಾಶಿವ ಹೆಗ್ಡೆ ಬಾಣಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ದೇವಳದ ತಂತ್ರಿಗಳಾದ ವೇ.ಮೂ. ಹೆರ್ಗ ಜಯರಾಮ ತಂತ್ರಿ, ಕನರ್ಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ನಿದರ್ೇಶಕ ಪಿ.ಜಯರಾಮ್ ಭಟ್, ಉದ್ಯಮಿಗಳಾದ ಪಟ್ಟಾಭಿರಾಮ ಮಧ್ಯಸ್ಥ, ಕೃಷ್ಣ ವೈ.ಶೆಟ್ಟಿ, ರಘುರಾಮ್ ಶೆಟ್ಟಿ, ರವಿ ಎಸ್.ಶೆಟ್ಟಿ, ಶಿವರಾಮ ಶೆಟ್ಟಿ, ಶಂಕರ ಅಂತಯ್ಯ ಶೆಟ್ಟಿ, ಬೆಳಗಾವಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಪ್ರಮುಖರಾದ ಸುನೀಲ್ ಜಯರಾಮ ಶೆಟ್ಟಿ, ಶಿವರಾಮ ಬಿ. ಶೆಟ್ಟಿ, ರಮೇಶ್ ಎಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ದೇವಳದ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.
ವಿನಯ ಬಾಬುರಾಜ್ ಪ್ರಾಥರ್ಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಬಿ. ಶೆಟ್ಟಿ ಸ್ವಾಗತಿಸಿದರು. ಸಖರಾಮ ಮಾಸ್ಟರ್ ವಂದಿಸಿದರು. ಅಧ್ಯಾಪಕರಾದ ಪ್ರಶಾಂತ್ ಶೆಟ್ಟಿ ಮತ್ತು ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.