ಬ್ರಹ್ಮಾವರದಲ್ಲಿ ವರುಣನ ಆರ್ಭಟ: ವಿವಿಧೆಡೆ ಅಪಾರ ಹಾನಿ

Spread the love

ಬ್ರಹ್ಮಾವರದಲ್ಲಿ ವರುಣನ ಆರ್ಭಟ: ವಿವಿಧೆಡೆ ಅಪಾರ ಹಾನಿ

ಉಡುಪಿ: ಬ್ರಹ್ಮಾವರ ತಾಲೂಕಿನೆಲ್ಲೆಡೆ ಕುಂಭ ದ್ರೋಣ ಮಳೆಯ ಅಬ್ಬರ ಜೋರಾಗಿದ್ದು, ಮಂಗಳವಾರ ಬೆಳಗ್ಗಿನಿಂದಲೇ ಸುರಿದ ಮಳೆಯಿಂದಾಗಿ ಹಲವೆಡೆಗಳಲ್ಲಿ ನೆರೆ ಆವರಿಸಿದೆ.

ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ್ದರೆ, ಅನೇಕ ಕಡೆಗಳಲ್ಲಿ ಗದ್ದೆ, ಅಡಿಕೆ, ತೆಂಗಿನ ತೋಟ ಸಹಿತ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ.

ಬ್ರಹ್ಮಾವರ ಪರಿಸರದ ಮಟಪಾಡಿ, ನೀಲಾವರ, ನಂದನಕುದ್ರು, ರಾಮನಕುದ್ರು, ಬಲ್ಜಿ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು ಇದರಿಂದಾಗಿ ವಾಹನ ಸವಾರರು ಕೂಡ ಸಮಸ್ಯೆಯನ್ನು ಅನುಭವಿಸಿದರು.

ಅನೇಕ ಕಡೆಗಳಲ್ಲಿ ಭತ್ತದ ಕೃಷಿ ಬೆಳೆದಿರುವ ಗದ್ದೆ ಜಲಾವೃತಗೊಂಡಿದ್ದರೆ, ಅಡಿಕೆ ತೋಟಗಳಲ್ಲಿ ನೀರು ನಿಂತಿದೆ. ಇದಲ್ಲದೆ ಕೆಲವೆಡೆಗಳಲ್ಲಿ ಬಾಳೆ ಗಿಡಗಳು, ಗಾಳಿಗೆ ಉರುಳಿ ಬಿದ್ದಿವೆ. ಪ್ರಮುಖ ಬೀದಿಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.

ಮಟಪಾಡಿ ಗ್ರಾಮದಿಂದ ನಂದನಕುದ್ರು, ರಾಮನಕುದ್ರು ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿದ್ದುಜನರ ಸಂಚಾರಕ್ಕೆ ಕಷ್ಟವಾಯಿತು.


Spread the love