ಭಟ್ಕಳ:  ಕೊಂಕಣಿ ಸಾಂಸ್ಕøತಿಕ ಉತ್ಸವದಲ್ಲಿ ರಂಜಿಸಿದ ಕಲಾತಂಡಗಳ ಪ್ರದರ್ಶನ

Spread the love

ಭಟ್ಕಳ: ಇಲ್ಲಿನ ನಾಗಯಕ್ಷೆ ಸಭಾಭವನದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕೊಂಕಣಿ ಸಾಂಸ್ಕøತಿ ಉತ್ಸವದಲ್ಲಿ ವಿವಿಧ ಕಲಾತಂಡಗಳ ಜಾನಪದ ನೃತ್ಯ,ಸಂಗೀತ,ರಸಮಂಜರಿ ರಂಜಿಸಿತು.

05-03-2016-konkani-acadamy-bhatkal 05-03-2016-konkani-acadamy-bhatkal-001 05-03-2016-konkani-acadamy-bhatkal-002 05-03-2016-konkani-acadamy-bhatkal-003 05-03-2016-konkani-acadamy-bhatkal-004

ಭಟ್ಕಳದ ಕೊಂಕಣ ಖಾರ್ವಿ ಕಲಾಮಾಂಡ್ ತಂಡದ ಖಾರ್ವಿ ಜಾನಪದ ನೃತ್ಯ,ಶಿರೂರ್ ಮೇಸ್ತ ಕಲಾ ತಂಡದ ಮೇಸ್ತ ಜಾನಪದ ನೃತ್ಯ,ಹೊನ್ನಾವರ ಕರಾವಳಿ ಬಳಗದವರ ಸಂಗೀತ ಮತ್ತು ನೃತ್ಯ,ನಾಕುದಾ ದಫ್ ಮಂಡಳಿಯವರ ದಫ್ ನೃತ್ಯ,ಝೇಂಕಾರ್ ಮೆಲೋಡಿಸ್ ತಂಡದವರ ಕೊಂಕಣಿ ರಸಮಂಜರಿ,ಲೂಡ್ರ್ಸ ಚರ್ಚ ಮುಂಡಳ್ಳಿ ತಂಡದವರ ಸಾಂಸ್ಕøತಿಕ ಕಾರ್ಯಕ್ರಮ,ನವಾಯಿತಿ ಮೆಹಫಿಲ್‍ನಿಂದ ಗಝಲ್ ಮತ್ತು ನಾಟಕ,ನಯನಾ ನೃತ್ಯನಿಕೇತನ ಇವರಿಂದ ಭರತನಾಟ್ಯ ಕಾರ್ಯಕ್ರಮಗಳು ಆಕರ್ಷಣೀಯವಾಗಿತ್ತು.

ಕೊಂಕಣಿ ಸಾಂಸ್ಕøತಿ ಉತ್ಸವಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಪ್ರಾಸ್ತಾವಿಕ ಮಾತನಾಡಿದರು.ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಿ ಜಗದೀಶ ಸುಕ್ರನಮನೆ,ಕೊಂಕಣಿ ಖಾರ್ವಿ ಮಹಾಜನ ಸಭಾದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ,ನಾಗಯಕ್ಷೆ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಮುಂತಾದವರು ಉಪಸ್ಥಿತರಿದ್ದರು.

ಪ್ರಸನ್ನಪ್ರಭು ಮತ್ತು ಡಾ.ಅರವಿಂದ ಶಾನುಭಾಗ್ ನಿರೂಪಿಸಿದರು.ದೇವಿದಾಸ ಪೈ ವಂದಿಸಿದರು.


Spread the love