ಭಾರತ ಸರ್ಕಾರದ ಯೂನಿವರ್ಸಿಟಿ ಗ್ರಾಂಟ್ ಆಯೋಗದ ದಿಂದ ಸಹ್ಯಾದ್ರಿ ಕಾಲೇಜು, ಮಂಗಳೂರಿಗೆ 12 (ಬಿ) ಗ್ರೇಡ್ ಮಾನ್ಯತೆ

Spread the love

ಭಾರತ ಸರ್ಕಾರದ ಯೂನಿವರ್ಸಿಟಿ ಗ್ರಾಂಟ್ ಆಯೋಗದ ದಿಂದ ಸಹ್ಯಾದ್ರಿ ಕಾಲೇಜು, ಮಂಗಳೂರಿಗೆ 12 (ಬಿ) ಗ್ರೇಡ್ ಮಾನ್ಯತೆ

ಮಂಗಳೂರು: ಭಾರತ ಘನ ಸರ್ಕಾರದ ಅಪೆಕ್ಸ್ ಬಾಡಿ ಗುರುತಿಸಲ್ಪಟ್ಟಿರುವ ನಮ್ಮ ರಾಜ್ಯದ ಕೆಲವೇ ಕಾಲೇಜುಗಳಲ್ಲಿ ಸಹ್ಯಾದ್ರಿಯು ಸಹ ಒಂದಾಗಿದೆ. ಈ ಮನ್ನಣೆಯಿಂದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರಿನ ಕಾಲೇಜಿನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಡೆಸುವ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ರೂಪದಲ್ಲಿ ಕೇಂದ್ರ ಸರ್ಕಾರದ ನೆರವು ಪಡೆಯುವ ಅರ್ಹತೆ ಹೊಂದಿದೆ. ಸಹ್ಯಾದ್ರಿ ಇನ್ಸ್ಟಿಟ್ಯೂಟ್ನ ಕಾರ್ಯಕ್ರಮಗಳೊಂದಿಗೆ ನಡೆಸುವ ಮಾನವ ಸಂಪನ್ನೂಲ ಅಭಿವೃದ್ಧಿಗೆ ನೆರವು ಮಾಡಲಾಗುವುದು.

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಈಗ UGC ಯುಜಿಸಿ ಕಾಯಿದೆ, 1956ರ ಸೆಕ್ಷನ್ 12(ಬಿ)ಅಡಿಯಲ್ಲಿ ರಚಿಸಲಾದ ನಿಯಮಗಳ ಆಧಾರದಲ್ಲಿ ಕೇಂದ್ರ ನೆರವು ಪಡೆಯಲು ಅರ್ಹವಾಗಿದೆ ಎಂದು ಘೋಷಿಸಲ್ಪಟ್ಟಿದೆ. ತಾಂತ್ರಿಕ ಶಿಕ್ಷಣ ಮತ್ತು ಶೈಕ್ಷಣಿಕ ಯೋಜನೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದೀಗ AICTE,VGST, DST,ಕರ್ನಾಟಕ ಸರಕಾರದ ನೆರವಿನೊಂದಿಗೆ ಯುಜಿಸಿ (UGC) ಯ ಬೆಂಬಲವನ್ನು ಸಹ ಪಡೆಯ ಬಹುದಾಗಿದೆ. ಈ ಗುರುತಿಸುವಿಕೆ ಸಹ್ಯಾದ್ರಿ ಕಾಲೇಜಿನಲ್ಲಿ ಇರುವ ಮೂಲಭೂತ ಸೌಕರ್ಯ, ಶೈಕ್ಷಣಿಕ ಸೌಲಭ್ಯಗಳನ್ನು ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗುವ ಉನ್ನತ ಶಿಕ್ಷಣವನ್ನು ಆಧರಿಸಿ ನೀಡಲಾಗಿದೆ.


Spread the love