ಭಾರತ ಸೇವಾದಳದ ವತಿಯಿಂದ ಮಿಲಾಪ್ ಶಿಬಿರ
ಮಂಗಳೂರು : ಭಾರತ ಸೇವಾದಳದ ವತಿಯಿಂದ ಶಿಕ್ಷಕರ ಮಿಲಾಪ್ ಶಿಬಿರ ಕಾರ್ಯಕ್ರಮ ಬಲ್ಮಠದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಸೇವಾದಳದ ಮಂಗಳೂರು ತಾಲೂಕು ಅಧ್ಯಕ್ಷ ಬಿ ಪ್ರಭಾಕರ ಶ್ರೀಯಾನ್ ರವರು ವಹಿಸಿದ್ದರು.
ಕಾರ್ಯಕ್ರಮದ ಉದ್ಫಾಟನೆಯನ್ನು ಬಲ್ಮಠ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಮಾರಿಯಟ್ ಜೆ. ಮಸ್ಕರೇನಸ್ ರವರು ನೆರವೇರಿಸಿ ಮಾತನಾಡುತ್ತಾ, ಶಿಸ್ತು ಇಂದಿನ ಮಕ್ಕಳಿಗೆ ತೀರಾ ಅನಿವಾರ್ಯವಾಗಿದ್ದು, ಅದನ್ನು ಭಾರತ ಸೇವಾದಳದ ಶಿಕ್ಷಕರು ಮಕ್ಕಳಿಗೆ ಅದರ ಬಗ್ಗೆ ತರಬೇತಿ ನೀಡುತ್ತಿರುವುದು ಬಹಳ ಶ್ಲಾಘನೀಯ. ಅವರ ಸೇವೆ ಭಾರತ ಸೇವಾದಳಕ್ಕೆ ಅತೀ ಅಗತ್ಯವಾದುದು. ಭಾರತ ಸೇವಾದಳz ಪ್ರಗತಿಗೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸೇವಾದಳದ ಸ್ಥಾಪಕ ನಾ. ಸು. ಹರ್ಡಿಕರ್ ರವರ ಪರಿಕಲ್ಪನೆಯನ್ನು ಇಂದಿನ ಶಿಕ್ಷಕರು ಮಕ್ಕಳಿಗೆ ಬೋಧಿಸುತ್ತಿರುವುದು ಮಹತ್ತರ ಸಾಧನೆಯಾಗಿದೆ ಎಂದರು.
ಈ ಸಭೆಯಲ್ಲಿ 2019-20 ರ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ನಡೆಯುವ ಭಾರತ ಸೇವಾದಳದ ಕಾರ್ಯಚಟುವಟಿಕೆಯ ಬಗ್ಗೆ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ವಿಷ್ಣು ಹೆಬ್ಬಾರ್, ಶ್ರೀಮತಿ ಆಶಾ, ಲಿಲ್ಲಿ ಪಾಯಸ್, ಟಿ.ಕೆ. ಸುಧೀರ್, ಉದಯ ಕುಂದರ್, ಮಂಜೇಗೌಡ ಉಪಸ್ಥಿತರಿದ್ದರು. ಸುನಿಲಾ ಮಿರಾಂಡಾ ವಂದಿಸಿದರು.