ಭಾರತೀಯ ಜ್ಞಾನಪರಂಪರೆಯಲ್ಲೇ ಮನುಷ್ಯನ ಸಮಸ್ಯೆಗಳಿಗೆ ಉತ್ತರ
ಮಂಗಳೂರು: ಮನುಷ್ಯನ ಸಮಸ್ಯೆಗಳಿಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಉತ್ತರವಿತ್ತು. ಪೂರ್ವಜರನ್ನು ಅನುಸರಿಸುತ್ತಿದ್ದರು. ಆದರೆ ರಾಸಾಯಿನಿಕತಂತ್ರಜಾನದಿಂದಾಗಿ ಮನುಶ್ಯ ಪ್ರಕ್ರತಿ ನಾಶದತ್ತ ಮುಖಮಾಡಿತು ಎಂದು ಕೊಯಂಬುತ್ತೂರಿನ ಅಗ್ರಿ ಸಿಸ್ಟಮ್ ಫೌಂಡೇಶನ್ ಅಧ್ಯಕ್ಷ ಡಾ.ಇಡಿವೇಲು ಹೇಳಿದರು.
ಕೂಳೂರಿನ ಮಂಗಲಭೂಮಿಯಲ್ಲಿ ದೇಶಿ ಗೋ ಆಧಾರಿತ ಕೃಷಿ, ಸಾವಯವ ಕೃಷಿಯಲ್ಲಿ ಪಂಚಗವ್ಯದ ಪಾತ್ರ ಹಾಗು ಆಹಾರ ಕೃಷಿ ಪದಾರ್ಥಗಳ ಗುಣಮಟ್ಟ ಹೆಚ್ಚಿಸುವಲ್ಲಿ ಪಂಚಗವ್ಯದ ಪಾತ್ರದ ವಿಚಾರವಾಗಿ ಮಾತನಾಡಿದರು.
ಗೋಮೂತ್ರ,ಸೆಗಣಿ,ಹಾಲು,ಮೊಸರು ಮತ್ತು ತುಪ್ಪವನ್ನು ಸೇರಿಸಿ ಉತ್ಪಾದನೆಯಾಗುವ ಪಂಚಗವ್ಯದ ಉಪಯೋಗದಿಂದ ಬೆಳೆಯ ಬೆಳವಣಿಗೆ ಜಾಸ್ತಿಯಾಗುತ್ತದೆ ಎಂದವರು ವಿವರಿಸಿದರು.
ಪಂಚಗವ್ಯದಲ್ಲಿ ಐಎಯು,ಜಿಎ,ಅರೋಮ್ಯಾಟಿಕ್ ಫಿನಿಯಾಲ್ ಅಸಿಟಿಕ್ ಆಸಿಡ್,ಬೆಂಝೋಲಿಕ್ ಆಸಿಡ್ಗಳು ಇರುವ ಕಾರಣ ಬೆಳೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದರ ಪ್ರಯೋಗಕೂಡ ಮಾಡಲಾಗಿದೆ ಎಂದವರು ಹೇಳಿದರು.
ಗುರುಪುರ ಚರ್ಚ್ ಫಾದರ್ ಅಂತೋನಿ ಲೋಬೊ ವಿಚಾರಸಂಕಿರಣದ ಮಧ್ಯೆ ಸಭಾಂಗಣಕ್ಕೆ ಆಗಮಿಸಿದ್ದು ,ಶುಭಸಂದೇಶ ನೀಡಿ ” ನಾವೆಲ್ಲ ಭಾರತೀಯರು. ದನ ನೀಡುವ ಹಾಲಿಗೆ ಯಾವುದೇ ಭೇದವಿಲ್ಲ. ತಾಯಿ ಮತ್ತು ದನದ ಹಾಲು ಸರ್ವಶ್ರೇಷ್ಟ. ದನ ಸಾಕಿದ ಯಾವುದೇ ವ್ಯಕ್ತಿ ಬಡವನಾಗಿರಲು ಸಾಧ್ಯವಿಲ್ಲ. ಮಾನವನಿಗೆ,ಭೂಮಿಗೆ ದಾನದಿಂದ ವೊಳ್ಳೆಯದಾಗಿದೆ. ದನ-ಕರುಗಳ್ಳನ್ನು ಪ್ರೀತಿಸೋಣ ಈ ಸಮ್ಮೇಳನ ಯಶಸ್ವಿಯಾಗಲಿ. ನಾವೆಲ್ಲರೂ ಗೋಹತ್ಯೆ ನಿಶೇಧಕ್ಕೆ ಆಗ್ರಹಿಸೋಣ ಎಂದರು.
ಡಾ.ನಾರಾಯಣ ರೆಡ್ಡಿ, ಡಾ.ವಡಿವೇಲ್, ಜಯರಾಮ ಭಟ್, ರಘುನಾಥ ರೆಡ್ಡಿ, ಜೆ.ಸಿ.ಸ್ವಾಮಿ ಅವರಿಂದ ಸಾವಯವ ಕೃಷಿ ಕುರಿತು ವಿಚಾರ ವಿನಿಮಯ ನಡೆಯಿತು