ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ಸೂರು ಸಿ.ಕರ್ಕೇರ ನಿಧನ

Spread the love

ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ಸೂರು ಸಿ.ಕರ್ಕೇರ ನಿಧನ

ಮುಂಬಯಿ: ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ, ಬಿಲ್ಲವ ಸಮುದಾಯ ಹಿರಿಯ ಮುಂದಾಳು, ಮುಂಬಯಿ ಮಹಾನಗರದ ಹಿರಿಯ ಹೊಟೇಲ್ ಉದ್ಯಮಿ, ಬಿಲ್ಲವ ಶಿರೋಮಣಿ ಸೂರು ಸಿ.ಕರ್ಕೇರ (75) ಇಂದಿಲ್ಲಿ ಸಂಜೆ ಚರ್ನಿರೋಡ್‍ನಲ್ಲಿರುವ ಸಾಫಿ ಅಸ್ಪತ್ರೆಯಲ್ಲಿ ನಿಧನರಾದರು.

ಉಡುಪಿ ಜಿಲ್ಲೆಯ ಉಚ್ಚಿಲ ಮೂಲದವರಾಗಿದ್ದ ಸೂರು ಕರ್ಕೇರ ಇವರು ಮಹಾನಗರ ಮುಂಬಯಿಯಲ್ಲಿನ ಮಹೇಶ್ ಲಂಚ್ ಹೊಂಮ್ ಹೋಟೆಲ್ ಸಮೂಹದ ಕಾರ್ಯಾಧ್ಯಕ್ಷರು ಆಗಿದ್ದು ನೂರಾರು ಸಂಘ ಸಂಸ್ಥೆಗಳಿಗೆ ಪೆÇೀಷಕರಾಗಿದ್ದರು. ಕೊಡುಗೈ ದಾನಿಯಾಗಿದ್ದ ಇವರು ಓರ್ವ ಸಾಮಾಜಿಕ ಚಿಂತಕರಾಗಿದ್ದು, ಧಾರ್ಮಿಕ ಸೇವೆಗಳಲ್ಲು ಮುಂಚೂಣಿಯಾಗಿದ್ದರು. ಉಚ್ಚಿಲದಲ್ಲಿ ಒಂದು ಸಭಾಗೃಹವನ್ನು ನಿರ್ಮಿಸಿ ಜನಾನುರೆಣಿಸಿದ್ದರು. ನೂರಾರು ವಿದ್ಯಾಥಿರ್sಗಳಿಗೆ ಶೈಕ್ಷಣಿಕ ಪೆÇ್ರೀತ್ಸಾಹ ನೀಡಿದ ಕರ್ಕೇರರು ಸಾಮಾಜಿಕ ಕಳಕಳಿ ಹೊಂದಿದ್ದರು. ಮೃತರು ಭಾರತ್ ಬ್ಯಾಂಕ್‍ನ ನಿರ್ದೇಶಕಿ ಶಾರದಾ ಎಸ್.ಕರ್ಕೇರ (ಪತ್ನಿ), ಸುಪುತ್ರ ಮಹೇಶ್ ಎಸ್.ಕರ್ಕೇರ(ಬಿಸಿಸಿಐ ನಿರ್ದೇಶಕ) ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

ಸೂರು ಸಿ.ಕರ್ಕೇರ ನಿಧನಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಮತ್ತು ಸರ್ವ ಪದಾಧಿಕಾರಿಗಳು, ಸದಸ್ಯರು, ನಿಕಟ ಪೂರ್ವಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ವಾಸುದೇವ ಆರ್.ಕೋಟ್ಯಾನ್, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಬಿಲ್ಲವ ದುರೀಣರಾದ ಎಲ್.ವಿ ಅಮೀನ್, ಕೆ. ಭೋಜರಾಜ್, ಗಂಗಾಧರ್ ಪೂಜಾರಿ ನಾಸಿಕ್, ದಯಾನಂದ ಬೋಂಟ್ರಾ ಬರೋಡಾ, ಪುರುಷೋತ್ತಮ ಎಸ್.ಕೋಟ್ಯಾನ್, ಲಕ್ಷ್ಮಣ್ ಪಿ.ಪೂಜಾರಿ (ಎನ್‍ಸಿಪಿ), ಎನ್.ಕೆ ಬಿಲ್ಲವ, ನವೀನ್‍ಚಂದ್ರ ಸನಿಲ್ ಸೇರಿದಂತೆ ನಗರದಲ್ಲಿನ ಅನೇಕಾನೇಕ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು (ನ.01) ಗುರುವಾರ ಬೆಳಿಗ್ಗೆ 10.30 ಗಂಟೆಗೆ ಸ್ವಗೃಹ ವೀಣಾ ಟವರ್ಸ್, ಕಾಲೊಬಾದಿಂದ ಮರೀನ್‍ಲೈನ್ಸ್‍ನ ಚಂದನವಾಡಿ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.


Spread the love