ಭಾರೀ ಮಳೆ: ಕೊಂಕಣ ರೈಲು ಮಾರ್ಗದ ಮೇಲೆ ಮಣ್ಣು ಬಿದ್ದು ಹಲವು ರೈಲು ರದ್ದು

Spread the love

ಭಾರೀ ಮಳೆ: ಕೊಂಕಣ ರೈಲು ಮಾರ್ಗದ ಮೇಲೆ ಮಣ್ಣು ಬಿದ್ದು ಹಲವು ರೈಲು ರದ್ದು

ಉಡುಪಿ : ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಂಕಣರೈಲು ಮಾರ್ಗದ ಮೇಲೆ ಮಣ್ಣು ಜರಿದು ಬಿದ್ದಿದ್ದು ಹಲವು ರೈಲುಗಳನ್ನು ರದ್ದುಪಡಿಸಲಾ ಗಿದೆ. ಮುಂಬಯಿ ಪ್ರದೇಶದಲ್ಲಿ 24 ಗಂಟೆ ಕಾಲ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಮಂಗಳೂರು-ಕುರ್ಲಾ ಮತ್ಸ್ಯಗಂಧ ರೈಲನ್ನು(12620) ಕುಂದಾಪುರದಿಂದ ಮಂಗಳೂರಿಗೆ ವಾಪಸ್ ಕಳುಹಿಸಲಾಯಿತು. ಕುರ್ಲಾದಿಂದ ಬರುವ ಮತ್ಸ್ಯಗಂಧ ರೈಲನ್ನೂ (12619) ರದ್ದುಪಡಿಸಲಾಗಿದೆ. ಮಂಗಳೂರು ಜಂಕ್ಷನ್ನಿಂದ ಮುಂಬಯಿ ಸಿಎಸ್ಎಂಟಿಗೆ ಹೋಗಬೇಕಾದ (12134) ರೈಲು, ಸಿಎಸ್ಎಂಟಿಯಿಂದ ಬರಬೇಕಾದ ರೈಲು (12133) ಗಳನ್ನೂ ರದ್ದುಪಡಿಸಲಾ ಗಿದೆ. ಎರ್ನಾಕುಳಂ-ಕುರ್ಲಾ ತುರಂತೋ ಎಕ್ಸ್ಪ್ರೆಸ್ಸನ್ನು ರದ್ದುಪಡಿಸಲಾಗಿದೆ. ಆ. 5ರ ಕೊಚ್ಚುವೇಲಿ- ಕುರ್ಲಾ (22124) ರೈಲನ್ನೂ ರದ್ದುಪಡಿಸಲಾಗಿದೆ.

ರವಿವಾರದ ಎರ್ನಾಕುಳಂ-ಪುಣೆ ರೈಲನ್ನು (22150) ರದ್ದುಪಡಿಸಲಾಗಿದೆ. ತಿರುವನಂತಪುರ – ಕುರ್ಲಾ (16346) ರೈಲನ್ನು ಶೋರ್ನೂರಿನಿಂದ ರದ್ದುಪಡಿಸಲಾಗಿದೆ. ಕುರ್ಲಾದಿಂದ ತಿರುವನಂತಪುರಕ್ಕೆ ಹೋಗುವ (16345) ನೇತ್ರಾವತಿ ಎಕ್ಸ್ಪ್ರೆಸ್ ಕೂಡ ರದ್ದಾಗಿದೆ. ಕೊಚ್ಚುವೇಲಿಯಿಂದ ಕುರ್ಲಾಕ್ಕೆ ಹೋಗುವ ರೈಲನ್ನು (12202) ಕಣ್ಣೂರಿನಲ್ಲಿ ರದ್ದುಪಡಿಸಲಾಯಿತು ಎಂದು ಕೊಂಕಣ ರೈಲ್ವೇ ಪ್ರಕಟಣೆ ತಿಳಿಸಿದೆ


Spread the love